newsics.com
ನವದೆಹಲಿ: ದೇಶದಲ್ಲಿ ಕೊರೋನಾದ ಅಬ್ಬರ ಮುಂದುವರಿದಿದೆ. ಇದೇ ವೇಳೆ ಕೊರೋನಾ ರೂಪಾಂತರಿ ತಳಿ ಒಮೈಕ್ರಾನ್ ಸೋಂಕು ಪ್ರಕರಣ 10,050ಕ್ಕೆ ತಲುಪಿದೆ.
ಒಮೈಕ್ರಾನ್ ಗಿಂತ ಮೊದಲು ಬಂದಿದ್ದ ಮಾಮೂಲಿ ಕೊರೋನಾದ ಅಬ್ಬರ ಕೂಡ ಜೋರಾಗಿದೆ. ಮೂರು ಲಕ್ಷಕ್ಕಿಂತ ಹೆಚ್ಚು ಮಂದಿಗೆ ಒಂದೇ ದಿನ ಸೋಂಕು ಪ್ರಕರಣ ಮುಂದುವರಿದಿದೆ. ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 3,37,704 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.
ಕೊರೋನಾ ಸೋಂಕಿತರಾಗಿದ್ದ 2,42,676 ಮಂದಿ ಇದೇ ಅವಧಿಯಲ್ಲಿ ಗುಣಮುಖರಾಗಿದ್ದಾರೆ. ಈ ಬೆಳವಣಿಗೆ ಮಧ್ಯೆ ದೇಶದಲ್ಲಿ ಸಕ್ರಿಯ ಕೊರೋನಾ ಪ್ರಕರಣದ ಸಂಖ್ಯೆ 21 ಲಕ್ಷ ಮೀರಿದೆ.
ದೇಶದ ವಿವಿಧ ಆಸ್ಪತ್ರೆಗಳಲ್ಲಿ, 21,13,365 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೋನಾದಿಂದ ಕಳೆದ 24 ಗಂಟೆಗಳಲ್ಲಿ 488 ಜನರು ಮೃತಪಟ್ಟಿದ್ದಾರೆ.