Monday, November 29, 2021

ಮಂಗಳವಾರ ಮತ್ತೆ 10 ಕೇಸ್, ಸೋಂಕಿತರ ಸಂಖ್ಯೆ 418ಕ್ಕೇರಿಕೆ

Follow Us

ಬೆಂಗಳೂರು: ರಾಜ್ಯದಲ್ಲಿ ಮಂಗಳಾರ ಮತ್ತೆ 10 ಹೊಸ ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 418ಕ್ಕೇರಿಕೆಯಾಗಿದೆ.
ಮಂಗಳವಾರ ಬೆಳಗ್ಗೆ ಏಳು ಮಂದಿಗೆ ಹಾಗೂ ಸಂಜೆ ಮೂವರಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ಸೋಂಕಿನಿಂದ ಇಲ್ಲಿಯವರೆಗೆ 17 ಜನರು ಮೃತಪಟ್ಟಿದ್ದು, 129 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಬೆಂಗಳೂರು ನಗರದಲ್ಲಿ ಇಲ್ಲಿಯವರೆಗೆ 89 ಜನರಲ್ಲಿ ಸೋಂಕು ವರದಿಯಾಗಿದ್ದು, 48 ಜನರು ಗುಣಮುಖರಾಗಿದ್ದಾರೆ. ಮೈಸೂರಿನಲ್ಲಿ 86 ಪ್ರಕರಣಗಳು ಕಂಡುಬಂದಿವೆ. ಬೆಳಗಾವಿಯಲ್ಲಿ 43, ವಿಜಯಪುರದಲ್ಲಿ 35, ಕಲಬುರಗಿಯಲ್ಲಿ 30, ಬಾಗಲಕೋಟೆಯಲ್ಲಿ 21, ಚಿಕ್ಕಬಳ್ಳಾಪುರದಲ್ಲಿ 16, ಬೀದರ್ ನಲ್ಲಿ 15, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 16, ಬಳ್ಳಾರಿಯಲ್ಲಿ 13, ಬೆಂಗಳೂರು ಗ್ರಾಮಾಂತರ 12, ಮಂಡ್ಯದಲ್ಲಿ 12, ಉತ್ತರ ಕನ್ನಡದಲ್ಲಿ 11, ಧಾರವಾಡದಲ್ಲಿ 7, ಗದಗದಲ್ಲಿ 4, ಉಡುಪಿಯಲ್ಲಿ 3, ದಾವಣಗೆರೆಯಲ್ಲಿ 2, ತುಮಕೂರಿನಲ್ಲಿ 2. ಚಿತ್ರದುರ್ಗದಲ್ಲಿ 1 ಹಾಗೂ ಕೊಡಗಿನಲ್ಲಿ 1 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

ಮತ್ತಷ್ಟು ಸುದ್ದಿಗಳು

Latest News

ಯುಎಇಯಲ್ಲಿ ಅತಿದೊಡ್ಡ ಕಾನೂನು ಸುಧಾರಣೆ: 40 ಕಾನೂನುಗಳ ಬದಲಾವಣೆ

newsics.com ಯುಎಇ: ಇಲ್ಲಿನ ಸರ್ಕಾರವು ತನ್ನ ಇತಿಹಾಸದಲ್ಲೇ ಅತಿ ದೊಡ್ಡ ಕಾನೂನು ಸುಧಾರಣೆ ನಡೆಸಲು ಮುಂದಾಗಿದ್ದು, 40 ಕಾನೂನುಗಳನ್ನು ಬದಲಾಯಿಸಲಿದೆ. ವಿವಿಧ ವಿಭಾಗಗಳ ಕಾನೂನುಗಳಲ್ಲಿ ಬದಲಾವಣೆಗಳಾಗಲಿವೆ. ಮದುವೆಯ ಮೊದಲು...

ಒಮಿಕ್ರೋನ್ ಭೀತಿ: ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಮಾರ್ಗಸೂಚಿ ಬಿಡುಗಡೆ

newsics.com ನವದೆಹಲಿ: ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಒಮಿಕ್ರೋನ್ ಹರಡುವ ಭೀತಿಯ ನಡುವೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಗೈಡ್ ಲೈನ್ಸ್ ಬಿಡುಗಡೆಗೊಳಿಸಿದ್ದು,...

ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆ

newsics.com ಬೆಂಗಳೂರು: ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಡಿಸೆಂಬರ್ 27ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 30ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. 5 ನಗರ ಸಭೆ,...
- Advertisement -
error: Content is protected !!