Tuesday, December 5, 2023

ಬಿಸ್ಕೆಟ್ ಪ್ಯಾಕ್‌ನಲ್ಲಿ ಒಂದು ಬಿಸ್ಕೆಟ್ ಕಡಿಮೆ: ಗ್ರಾಹಕನಿಗೆ 1 ಲಕ್ಷ ರೂ. ಪರಿಹಾರ ನೀಡಲು ಐಟಿಸಿಗೆ ಕೋರ್ಟ್ ಸೂಚನೆ

Follow Us

newsics.com

ಚೆನ್ನೈ: ಬಿಸ್ಕೆಟ್ ಪ್ಯಾಕ್‌ನಲ್ಲಿ ಜಾಹೀರಾತಿನಲ್ಲಿ ತೋರಿಸಿದ್ದಕ್ಕಿಂತ ಒಂದೇ ಒಂದು ಬಿಸ್ಕೆಟ್ ಕಡಿಮೆ ಇದ್ದಿದ್ದಕ್ಕೆ ಗ್ರಾಹಕ ನ್ಯಾಯಾಲಯವೊಂದು ಗ್ರಾಹಕನಿಗೆ ಒಂದು ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ.

ಚೆನ್ನೈ ಮೂಲದ ಪಿ ದಿಲ್ಲಿಬಾಬು ಎಂಬುವವರು ಬಿಸ್ಕೆಟ್ ಸಂಸ್ಥೆಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಅವರು ಐಟಿಸಿ ಲಿಮಿಟೆಡ್‌ಗೆ ಸೇರಿದ ಸನ್‌ಫೀಸ್ಟ್ ಮಾರಿ ಲೈಟ್ ಬಿಸ್ಕೆಟ್‌ ಪ್ಯಾಕೆಟೊಂದನ್ನು ಖರೀದಿಸಿದ್ದರು. ಅದರಲ್ಲಿ 15 ಬಿಸ್ಕೆಟ್‌ಗಳಿದ್ದವು. ಆದರೆ ಬಿಸ್ಕೆಟ್ ಲಕೋಟೆ ಮೇಲೆ 16 ಬಿಸ್ಕೆಟ್ ಎಂದು ನಮೂದಿಸಲಾಗಿತ್ತು.

ಈ ಬಗ್ಗೆ ಸ್ಪಷ್ಟನೆ ಕೇಳಲು ದಿಲ್ಲಿಬಾಬು ಅವರು ಸ್ಥಳೀಯ ಅಂಗಡಿಯಲ್ಲಿಯೂ ಕವರ್ ಮೇಲೆ ಇರುವಂತೆ ಒಳಗೆ 16 ಬಿಸ್ಕೆಟ್ ಏಕಿಲ್ಲ, ಒಂದು ಬಿಸ್ಕೆಟ್ ಏಕೆ ಕಡಿಮೆ ಇದೆ ಎಂದು ಕೇಳಿದ್ದಾರೆ, ಐಟಿಸಿ ಸ್ಟೋರ್‌ನಲ್ಲೂ ಅವರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆದರೆ ಅವರಿಗೆ ಈ ಬಗ್ಗೆ ಎಲ್ಲೂ ಸ್ಪಷ್ಟ ಉತ್ತರ ಸಿಕ್ಕಿಲ್ಲ, ಇದರಿಂದ ಸಿಟ್ಟಿಗೆದ್ದ ದಿಲ್ಲಿಬಾಬು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಐಟಿಸಿ ಪ್ರತಿದಿನವೂ 50 ಲಕ್ಷ ಪ್ಯಾಕೇಟ್ ಬಿಸ್ಕೆಟ್‌ಗಳನ್ನು ಉತ್ಪಾದನೆ ಮಾಡುತ್ತದೆ. ಒಂದು ಬಿಸ್ಕೆಟ್‌ಗೆ 75 ಪೈಸೆ ವೆಚ್ಚವಿದೆ. ಆದರೆ ಪ್ಯಾಕೇಟ್‌ನಲ್ಲಿ 16 ಬಿಸ್ಕೆಟ್ ಇದೆ ಎಂದು 15 ಮಾತ್ರ ಪ್ಯಾಕ್ ಮಾಡುವ ಮೂಲಕ ಸಂಸ್ಥೆ ಗ್ರಾಹಕರಿಗೆ ಪ್ರತಿನಿತ್ಯ 29 ಲಕ್ಷ ರೂ.ಗಳನ್ನು ಉದ್ದೇಶಪೂರ್ವಕವಾಗಿ ವಂಚಿಸುತ್ತಿದೆ ಎಂದು ಹೇಳಿದ್ದರು.

ಈ ವೇಳೆ ಕೋರ್ಟ್‌ಗೆ ಹಾಜರಾದ ಐಟಿಸಿ ಕಂಪನಿಯ ವಕೀಲರು ಬಿಸ್ಕೆಟ್‌ಗಳ ಪ್ರಮಾಣ ಎಷ್ಟಿದೆ ಎಂಬುದಕ್ಕಿಂತ ಎಷ್ಟು ತೂಕವಿದೆ ಎಂಬುದರ ಮೇಲೆ ಮಾರಾಟ ಮಾಡಲಾಗುತ್ತಿದೆ ಎಂದು ವಾದ ಮಂಡಿಸಿದ್ದಾರೆ. ಪ್ರತಿ ಸನ್‌ಫೀಸ್ಟ್ ಮಾರಿ ಲೈಟ್ ಪ್ಯಾಕೆಟ್ 76 ಗ್ರಾಂಗಳ ನಿವ್ವಳ ತೂಕ ಸೂಚಿಸುತ್ತದೆ ಎಂದು ಹೇಳಿದ್ದಾರೆ. ಆದರೆ, ನ್ಯಾಯಾಲಯದ ತನಿಖೆ ವೇಳೆ 15 ಬಿಸ್ಕತ್ತುಗಳಿರುವ ಪ್ಯಾಕೆಟ್‌ಗಳು ಕೇವಲ 74 ಗ್ರಾಂ ತೂಕ ಹೊಂದಿದ್ದವು.

ಪ್ಯಾಕೆಟ್‌ನಲ್ಲಿ ಸ್ಪಷ್ಟವಾಗಿ 16 ಬಿಸ್ಕೆಟ್‌ಗಳು ಇರುವ ಬಗ್ಗೆ ಸಂಸ್ಥೆ ನಮೂದಿಸಿದೆ. ಹೀಗಿದ್ದೂ, ಪ್ಯಾಕೆಟ್ ಒಳಗೆ ಒಂದು ಬಿಸ್ಕೆಟ್ ಕಡಿಮೆ ಮಾಡಿರುವುದು ತಪ್ಪು ಎಂದಿರುವ ನ್ಯಾಯಾಲಯ, ಈ ಹಿನ್ನೆಲೆಯಲ್ಲಿ ಗ್ರಾಹಕನಿಗೆ ಒಂದು ಲಕ್ಷ ರೂ. ಪರಿಹಾರ ನೀಡುವಂತೆ ಐಟಿಸಿ ಸಂಸ್ಥೆಗೆ ಸೂಚಿಸಿದೆ.

ಸೋನು ಗೌಡ ನಟನೆಯ ‘ಕ್ಯಾಡ್ಬರಿಸ್’ ಸಿನಿಮಾ ಪೋಸ್ಟರ್ ಔಟ್!

ಪರಮಾಪ್ತ ಲ್ಯಾರಿ ಜತೆ ಬರಾಕ್ ಒಬಾಮಾ ಸಲಿಂಗ ಕಾಮ, ಎಲ್ಲೆಡೆ ಸಂಚಲನ: ವಿಡಿಯೋ ನೋಡಿ

ದೇಶದ ಹೆಸರು ಮರುನಾಮಕರಣ ಕೇವಲ ವದಂತಿ: ಕೇಂದ್ರ ಸ್ಪಷ್ಟನೆ

ಪ್ರಿಯಕರನಿಗಾಗಿ ಬಾಂಗ್ಲಾದಿಂದ ರಾಜಸ್ಥಾನಕ್ಕೆ ಬಂದ ಯುವತಿ

ಬ್ಯಾಂಕ್ ಸಾಲದ ಖಾತೆಗಳಿಗೂ ಇದೀಗ ಯುಪಿಐ ಜೋಡಣೆ

ಹೊಸ ಉದ್ಯಮಕ್ಕೆ ಹೂಡಿಕೆ ಮಾಡಿದ ನಟಿ ರಕುಲ್ ಪ್ರೀತ್ ಸಿಂಗ್

ಮತ್ತಷ್ಟು ಸುದ್ದಿಗಳು

vertical

Latest News

ವಿಜಯೇಂದ್ರ ಪತ್ನಿ ಸಹೋದರನ ಮನೆ ಮೇಲೆ ಲೋಕಾಯುಕ್ತ ದಾಳಿ

Newsics.com ಕಲಬುರಗಿ : ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ ಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪತ್ನಿ ಸಹೋದರ ಡಾ ಪ್ರಭುಲಿಂಗ ಮಾನ್ಕರ್ ಅವರ ಮನೆ...

ಭಾರತದಲ್ಲಿ 75 ಲಕ್ಷಕ್ಕೂ ಅಧಿಕ ವಾಟ್ಸ್ ​ಆ್ಯಪ್ ಅಕೌಂಟ್ ಬ್ಯಾನ್

Newsics.com ನವದೆಹಲಿ : ಮೆಟಾದ ತ್ವರಿತ ಮೆಸೇಜಿಂಗ್ ಪ್ಲಾಟ್​ಫಾರ್ಮ್ ವಾಟ್ಸ್​ಆ್ಯಪ್ ಭಾರತದಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಬರೋಬ್ಬರಿ 75 ಲಕ್ಷಕ್ಕೂ ಅಧಿಕ ವಾಟ್ಸ್​ ಆ್ಯಪ್ ಖಾತೆಗಳನ್ನು ರದ್ದುಗೊಳಿಸಿದೆ ಎಂದು ವರದಿಯಾಗಿದೆ. 2021 ಬಳಕೆದಾರರ ಸುರಕ್ಷತ...

ತೆಲಂಗಾಣದ ನೂತನ ಸಿಎಂ ಇವರೇ : ನಾಳೆಯೇ ಪ್ರಮಾಣ ವಚನ..!!

Newsics.com ಹೈದರಾಬಾದ್ : ತೆಲಂಗಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಹೈಕಮಾಂಡ್ ನೂತನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಇದೀಗ ಬಂದ ಮಾಹಿತಿ ಪ್ರಕಾರ, ರೇವಂತ್ ರೆಡ್ಡಿ ಅವರನ್ನೇ...
- Advertisement -
error: Content is protected !!