ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ತನಿಖೆ ಮುಂದುವರೆಸಿರುವ ಸಿಸಿಬಿ ಪೊಲೀಸರು ಸ್ಯಾಂಡಲ್‍ವುಡ್ ಸೇರಿದಂತೆ ಎಲ್ಲ ದೊಡ್ಡ ದೊಡ್ಡ ಪಾರ್ಟಿಗಳಿಗೆ ಡ್ರಗ್ಸ್ ಪೊರೈಸುತ್ತಿದ್ದ ಡ್ರಗ್ ಪೆಡ್ಲರ್ ನನ್ನು ವಶಕ್ಕೆ ಪಡೆದಿದ್ದಾರೆ. ಮೂರು ಬೇರೆ ಬೇರೆ ಹೆಸರಿನಿಂದ ಡ್ರಗ್ಸ್ ಪೊರೈಸುತ್ತಿದ್ದ ಈತ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಈತನಿಂದ 12 ಗ್ರಾಂ ಕೋಕೇನ್ ವಶಕ್ಕೆ ಪಡೆಯಲಾಗಿದೆ.
ಬಂಧಿತನನ್ನು ಬೆನಾಲ್ಡ್ ಯುಡ್ನಾ ಎಂದು ಗುರುತಿಸಲಾಗಿದೆ. ಆಫ್ರಿಕಾ ಮೂಲದ ಈತ ಬ್ಯಾಕ್ಲಿ,ಕೋಕ್ ಮತ್ತು ಜಾನ್ ಎಂಬ ಮೂರು ಹೆಸರಿನಿಂದ ಡ್ರಗ್ಸ್ ಪೊರೈಕೆ ವ್ಯವಹಾರ ಮಾಡುತ್ತಿದ್ದ. ಈತನೇ ಕರ್ನಾಟಕದ ಬಹುತೇಕ ಡ್ರಗ್ಸ್ ಪಾರ್ಟಿಗಳಿಗೆ ಡ್ರಗ್ಸ್ ಪೊರೈಸುತ್ತಿದ್ದ ಎನ್ನಲಾಗಿದೆ. ಸಿಸಿಬಿ ಈತನನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆದಿದೆ. ಬಂಧಿತ ಬೆನಾಲ್ಡ್‍ನಿಂದ ಇನ್ನಷ್ಟು ಮಾಹಿತಿ ಬಹಿರಂಗವಾಗುವ ವಿಶ್ವಾಸವಿದೆ ಎಂದು ಸಿಸಿಬಿ ಆಯುಕ್ತರು ಹೇಳಿದ್ದಾರೆ.
ಆಫ್ರಿಕಾ ಮೂಲದ ಮತ್ತೊಬ್ಬ ಡ್ರಗ್ಸ್ ಪೆಡ್ಲರ್ ಸಿಸಿಬಿ ಬಲೆಗೆ
Follow Us