ವಿಶ್ವಸಂಸ್ಥೆ: ಪ್ರತಿ 10 ಭಾರತೀಯರಲ್ಲಿ ಒಬ್ಬ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾನೆ. ಪ್ರತಿ 15 ಮಂದಿಯಲ್ಲಿ ಓರ್ವ
ಕ್ಯಾನ್ಸರ್ ನಿಂದ ಸಾವನ್ನಪ್ಪುತ್ತಿದ್ದಾನೆಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ಅಧ್ಯಯನದಲ್ಲಿ ತಿಳಿಸಿದೆ.
2018ರಲ್ಲಿ 10 ಲಕ್ಷ ಭಾರತೀಯರು ಕ್ಯಾನ್ಸರ್ ರೋಗಕ್ಕೆ ಗುರಿಯಾಗಿದ್ದಾರೆಂದು ವರದಿಯಲ್ಲಿ ಹೇಳಿದೆ.
2018ರಲ್ಲಿ ಭಾರತದಲ್ಲಿ 10.16 ಲಕ್ಷ ಕ್ಯಾನ್ಸರ್ ಪ್ರಕರಣಗಳು ದಾಖಲಾಗಿವೆ. 7,84,800 ಸಾವುಗಳು ಸಂಭವಿಸಿವೆ. 5 ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿರುವ ಭಾರತೀಯರ ಸಂಖ್ಯೆ 20.26 ಲಕ್ಷ ಎಂದು ವರದಿ ಹೇಳಿದೆ. ಭಾರತದಲ್ಲಿ ಸ್ತನ, ಗರ್ಭಕೋಶ ಹಾಗೂ ಬಾಯಿಯ ಕ್ಯಾನ್ಸರ್ ಸೇರಿ ಒಟ್ಟು 6 ರೀತಿಯ ಕ್ಯಾನ್ಸರ್ ಸಾಮಾನ್ಯವಾಗಿದೆ ಎಂದು ವಿವರಿಸಿದೆ.
ಪ್ರತಿ 10 ಭಾರತೀಯರಲ್ಲಿ ಒಬ್ಬನಿಗೆ ಕ್ಯಾನ್ಸರ್
Follow Us