ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಎಸ್ ಬಿ ಐ ಸೆಪ್ಟೆಂಬರ್ ೧೮ ರಿಂದ ದೇಶದಾದ್ಯಂತ ಒಟಿಪಿ ಆಧಾರಿತ ಎಟಿಎಂ ವಿತ್ ಡ್ರಾ ಸೌಲಭ್ಯ ಜಾರಿಗೆ ತರಲು ನಿರ್ಧರಿಸಿದೆ.
ಈಗಾಗಲೇ ಒಟಿಪಿ ಆಧಾರಿತ ವಿತ್ ಡ್ರಾ ವ್ಯವಸ್ಥೆ ಆರಂಭಿಸಿದ್ದ ಎಸ್ ಬಿ ಐ, ಇದುವರೆಗೂ ಬೆಳಗ್ಗೆ ೮ ರಿಂದ ಸಂಜೆ ೮ ರವರೆಗೆ ೧೦ ಸಾವಿರ ಮತ್ತು ಅದಕ್ಕಿಂತ ಜಾಸ್ತಿ ಹಣ ಡ್ರಾ ಮಾಡಲು ಒಟಿಪಿ ಅಗತ್ಯವಿತ್ತು.
ಆದರೆ ಇನ್ಮುಂದೆ ಎಸ್ ಬಿ ಐ ನಿಂದ ಮಾಡುವ ಎಲ್ಲಾ ಎಟಿಎಂ ವಿತ್ ಡ್ರಾಗಳಿಗೂ ಒಟಿಪಿ ಕಡ್ಡಾಯ.
ದಿನದ ೨೪ ಗಂಟೆಯೂ ಈ ಒಟಿಪಿ ಆಧಾರಿತ ವಿತ್ ಡ್ರಾ ಸೌಲಭ್ಯ ಸಿಗಲಿದ್ದು, ಇದಕ್ಕೆ ಕೇವಲ ಎಸ್ ಬಿ ಐ ಎಟಿಎಂ ಮಾತ್ರ ಬಳಸುವ ಅನಿವಾರ್ಯತೆ ಗ್ರಾಹಕರಿಗಿದೆ. ನೋಂದಾಯಿತ ದೂರವಾಣಿ ಸಂಖ್ಯೆಗೆ ಒಟಿಪಿ ಬರಲಿದ್ದು, ಅನಧಿಕೃತ್ ವಿತ್ ಡ್ರಾ,ವಂಚನೆ,ಕಾರ್ಡ್ ದುರ್ಬಳಕೆ ಸೇರಿದಂತೆ ಹಲವು ರೀತಿಯ ಅಪರಾಧ ಕೃತ್ಯಗಳಿಗೆ ಇದು ಬ್ರೇಕ್ ಹಾಕಲಿದೆ ಎಂದು ಎಸ್ ಬಿ ಐ ಹೇಳಿದೆ.
ಎಟಿಎಂ ವಿತ್ ಡ್ರಾ ವೇಳೆ ಅಮೌಂಟ್ ಟೈಪ್ ಮಾಡುತ್ತಿದ್ದಂತೆ ಸ್ಕ್ರಿನ್ ಮೇಲೆ ಒಟಿಪಿ ಕೇಳಲಿದ್ದು ಬಳಿಕವಷ್ಟೇ ವಿತ್ ಡ್ರಾ ಪ್ರಕ್ರಿಯೆ ಮುಂದುವರಿಯಲಿದೆ.
ಗ್ರಾಹಕರು ತಮ್ಮ ಖಾತೆಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದು ಈಗ ಅನಿವಾರ್ಯ.
ಇದರೊಂದಿಗೆ ಎಸ್ ಬಿ ಐ ಆರ್.ಟಿ.ಜಿ.ಎಸ್. ಹಾಗೂ ಎನ್ ಇ ಎಫ್ ಟಿ ಶುಲ್ಕವನ್ನು ಕಡಿತಗೊಳಿಸಿ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ.
ಎಸ್ ಬಿ ಐ ಎಟಿಎಂ ವಿತ್ ಡ್ರಾಗೆ ಒಟಿಪಿ ಕಡ್ಡಾಯ
Follow Us