* ವಿಶ್ವದ ಮೊದಲ ಪ್ರಯತ್ನ ಸಕ್ಸಸ್
ಲಂಡನ್: ಬ್ರಿಟನ್’ನ ಆಕ್ಸ್’ಫರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೊರೋನಾ ಲಸಿಕೆ ಪ್ರಯೋಗದ ಆರಂಭಿಕ ಫಲಿತಾಂಶಗಳು ಯಶಸ್ವಿಯಾಗಿವೆ.
ಬ್ರಿಟಿಷ್ ಪತ್ರಿಕೆ ‘ದಿ ಟೆಲಿಗ್ರಾಫ್’ ವರದಿ ಪ್ರಕಾರ, ಆಕ್ಸ್’ಫರ್ಡ್ ವಿಶ್ವವಿದ್ಯಾಲಯದ ಜೆನ್ನರ್ ಇನ್ಸ್ಟಿಟ್ಯೂಟ್ನಲ್ಲಿ ಕೊರೋನಾ ಲಸಿಕೆಯ ಮಾನವ ಪ್ರಯೋಗಗಳು ಯಶಸ್ವಿಯಾಗಿವೆ. ಕೆಲವು ಯುಕೆ ಸ್ವಯಂಸೇವಕರ ಮೇಲೆ ಲಸಿಕೆ ಪರೀಕ್ಷಿಸಲಾಯಿತು. ಅದರ ನಂತರ ಕೆಲವೇ ದಿನಗಳಲ್ಲಿ, ಸ್ವಯಂಸೇವಕರ ದೇಹದಲ್ಲಿ ಪ್ರತಿಕಾಯಗಳು ಮತ್ತು ಟಿ ಬಾಡಿ ಕೋಶಗಳು ರೂಪುಗೊಳ್ಳುತ್ತಿವೆ. ಆದರೆ ಇಲ್ಲಿಯವರೆಗೆ ಜೆನ್ನರ್ ಸಂಸ್ಥೆ ಯಾವುದೇ ವಿವರಣೆಯನ್ನು ನೀಡಿಲ್ಲ. ಆಕ್ಸ್’ಫರ್ಡ್ ವಿಶ್ವವಿದ್ಯಾಲಯದಲ್ಲಿ ಏಪ್ರಿಲ್ನಲ್ಲಿ ಕೊರೋನಾ ವೈರಸ್ನ ಪರೀಕ್ಷೆಗಳು ಪ್ರಾರಂಭವಾಗಿದ್ದವು. ಆ ಸಮಯದಲ್ಲಿ 500 ಸ್ವಯಂಸೇವಕರ ಮೇಲೆ ಲಸಿಕೆ ಪರೀಕ್ಷೆಯನ್ನು ಮಾಡಲಾಗಿತ್ತು.