Saturday, January 28, 2023

ಪದ್ಮ ಪ್ರಶಸ್ತಿ ಪ್ರಕಟ: ಎಸ್ಸೆಂ ಕೃಷ್ಣಗೆ ಪದ್ಮವಿಭೂಷಣ, ಭೈರಪ್ಪ, ಸುಧಾಮೂರ್ತಿಗೆ ಪದ್ಮಭೂಷಣ

Follow Us

newsics com

ಬೆಂಗಳೂರು: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪುರಸ್ಕಾರಗಳನ್ನು ಕೇಂದ್ರ ಸರ್ಕಾರ ಬುಧವಾರ ಘೋಷಿಸಿದೆ. ಒಟ್ಟು 106 ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲು ರಾಷ್ಟ್ರಪತಿಗಳು ಅನುಮೋದಿಸಿದ್ದಾರೆ. ಇದರಲ್ಲಿ ಆರು ಪದ್ಮವಿಭೂಷಣ, ಒಂಭತ್ತು ಪದ್ಮಭೂಷಣ ಮತ್ತು 91 ಪದ್ಮಶ್ರೀಗಳನ್ನು ಪ್ರಕಟಿಸಲಾಗಿದೆ.
ಕರ್ನಾಟಕದ ಹಿರಿಯ ರಾಜಕಾರಣಿ ಎಸ್‌.ಎಂ. ಕೃಷ್ಣ ಸೇರಿ ಆರು ಸಾಧಕರನ್ನು ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕನ್ನಡದ ಹಿರಿಯ ಸಾಹಿತಿ ಎಸ್‌.ಎಲ್‌.ಭೈರಪ್ಪ ಹಾಗೂ ಇನ್ಫೋಸಿಸ್‌ ಫೌಂಡೇಷನ್‌ನ ಅಧ್ಯಕ್ಷೆ ಸುಧಾಮೂರ್ತಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕದ ಐವರು ಸಾಧಕರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಿಂದ ಡಾ. ಖಾದರ್ ವಲ್ಲಿ ದುಡೆ ಕುಲ್ಲಾ, ನೃತ್ಯದ ಮೂಲಕ ಕೊಡವ ಸಂಸ್ಕೃತಿಯನ್ನು ಪಸರಿಸಲು ಶ್ರಮಿಸಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ರಾಣಿ ಮಾಚಯ್ಯ, ತಮಟೆಯ ತಂದೆಯೆಂದು ಪ್ರಖ್ಯಾತರಾದ ಚಿಕ್ಕಬಳ್ಳಾಪುರದ ಪಿಂಡಿ ಪಾಪನಹಳ್ಳಿ ಮುನಿವೆಂಕಟಪ್ಪ, ಬೀದರ್‌ನ ಕಲಾವಿದ ಷಾ ರಶೀದ್‌ ಅಹ್ಮದ್‌ ಖಾದ್ರಿ, ಪುರಾತತ್ವ ಶಾಸ್ತ್ರಜ್ಞ ಎಸ್‌.ಸುಬ್ಬರಾಮನ್‌ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ORS ಸಂಶೋಧಕ ದಿಲೀಪ್ ಮಹಲನಾಬಿಸ್ (Dilip Mahalanabis) ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ (ಪೀಡಿಯಾಟ್ರಿಕ್ಸ್) ಪದ್ಮವಿಭೂಷಣ (ಮರಣೋತ್ತರ) ಪ್ರಶಸ್ತಿ ನೀಡಲಾಗಿದೆ. ಮಹಲನಾಬಿಸ್ ಅವರ ಪ್ರಯತ್ನಗಳು ಒಆರ್‌ಎಸ್ ಅನ್ನು ವ್ಯಾಪಕವಾಗಿ ಬಳಸುವುದಕ್ಕೆ ಕಾರಣವಾಯಿತು. 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ನಿರಾಶ್ರಿತರ ಶಿಬಿರಗಳಲ್ಲಿ ಸೇವೆ ಸಲ್ಲಿಸಿದ ದಿಲೀಪ್ ಮಹಲನಾಬಿಸ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ದಿಲೀಪ್ ಮಹಾಲನಬಿಸ್ ಅವರಿಗೆ (ಮರಣೋತ್ತರ) ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ.
ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ದಿ. ಮುಲಾಯಂ ಸಿಂಗ್ ಯಾದವ್ ಮುಲಾಯಂ ಅವರಿಗೂ ಮರಣೋತ್ತರವಾಗಿ ಪದ್ಮ ವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ.

ಮಂಗಳವಾರ ನಿಧನರಾದ ಗುಜರಾತ್‌ನ ಬಾಲಕೃಷ್ಣ ದೋಶಿ, ಮಹಾರಾಷ್ಟ್ರದ ಕಲಾವಿದ ಜಾಕೀರ್‌ ಹುಸೇನ್‌, ಪಶ್ಚಿಮ ಬಂಗಾಳದ ವೈದ್ಯ (ಮರಣೋತ್ತರ) ದಿಲೀಪ್‌ ಮಹಲನಬೀಸ್‌, ಅಮೆರಿಕದಲ್ಲಿ ನೆಲೆಸಿರುವ ಶ್ರೀನಿವಾಸ ವರದಾನ್‌ (ವಿಜ್ಞಾನ ಮತ್ತು ತಂತ್ರಜ್ಞಾನ), ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ (ಮರಣೋತ್ತರ) ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ.

ಪದ್ಮಶ್ರೀ: ಅಂಡಮಾನ್‌ ಮತ್ತು ನಿಕೋಬಾರ್‌ನ ನಿವೃತ್ತ ವೈದ್ಯ ರತನ್ ಚಂದ್ರ ಕರ್‌, ಗುಜರಾತ್‌ನ ಸಿದ್ಧಿ ಬುಡಕಟ್ಟು ಸಮುದಾಯದ ಏಳಿಗೆಗೆ ಶ್ರಮಿಸಿದ ಸಾಮಾಜಿಕ ಕಾರ್ಯಕರ್ತೆ ಹೀರಾಬಾಯಿ ಲೋಬಿ, ಮಧ್ಯಪ್ರದೇಶದ ವೈದ್ಯ ಮುನೀಶ್ವರ ಚಂದರ್‌ ದಾವರ್‌, ಅಸ್ಸಾಂನ ಸಾಮಾಜಿಕ ಕಾರ್ಯಕರ್ತ ರಾಮ್‌ಕ್ವಿಂಬಾವೆ ನೆವ್ಮೆ, ಕೇರಳದ ಸಾಮಾಜಿಕ ಕಾರ್ಯಕರ್ತ ಹಾಗೂ ಸ್ವಾತಂತ್ರ್ಯ ಹೋರಾಟಗಾರ ವಿ.ಪಿ.ಅಪ್ಪುಕುಟ್ಟನ್‌ ಪೊಡುವಾಳ್‌, ಆಂಧ್ರ ಪ್ರದೇಶದ ಸಾಮಾಜಿಕ ಕಾರ್ಯಕರ್ತ ಸಂಕುರತ್ರಿ ಚಂದ್ರಶೇಖರ್‌, ಪ್ರಾಣಿಗಳ ಕಲ್ಯಾಣಕ್ಕಾಗಿ ಶ್ರಮಿಸಿದ ತಮಿಳುನಾಡಿನ ವಡಿವೇಳ್‌ ಗೋಪಾಲ್‌ ಮತ್ತು ಮಾಸಿ ಸಡೈಯನ್‌, ಸಿಕ್ಕಿಂನ ಸಾವಯವ ಕೃಷಿಕ ತೂಲಾ ರಾಮ್‌ ಉಪ್ರೇತಿ, ಹಿಮಾಚಲ ಪ್ರದೇಶದ ಸಾವಯವ ಕೃಷಿಕ ನೆಕ್ರಂ ಶರ್ಮ, ಜಾರ್ಖಂಡ್‌ನ ಲೇಖಕ ಜಾನುಂ ಸಿಂಗ್‌ ಸೋಯ್‌, ಪಶ್ಚಿಮ ಬಂಗಾಳದ ಧಾನಿರಾಮ್‌ ಟೊಟೊ, ತೆಲಂಗಾಣದ 80ರ ಹರೆಯದ ಭಾಷಾ ವಿದ್ವಾಂಸ ಬಿ.ರಾಮಕೃಷ್ಣ ರೆಡ್ಡಿ, ಛತ್ತೀಸಘಡದ ಅಜಯ್‌ ಕುಮಾರ್ ಮಾಂಡವಿ, ಮಿಜೊರಾಂನ ಕಲಾವಿದೆ ಕೆ.ಸಿ.ರುನ್‌ರೆಮ್‌ ಸಂಗಿ, ಪಶ್ಚಿಮ ಬಂಗಾಳದ ಕಲಾವಿದ ಮಂಗಲ ಕಾಂತಿ ರಾಯ್‌, ಛತ್ತೀಸಘಡದ ನೃತ್ಯಪಟು ದೋಮರ್ ಸಿಂಗ್‌ ಕುನ್ವಾರ್‌, ಮಹಾರಾಷ್ಟ್ರದ ರಂಗ ಕಲಾವಿದ ಪರಶುರಾಮ್‌ ಕೊಮಾಜಿ ಖೂನೆ, ಜಮ್ಮು ಮತ್ತು ಕಾಶ್ಮೀರದ ಸಂತೂರ್ ಕಲಾವಿದ ಗುಲಾಂ ಮಹಮ್ಮದ್‌ ಜಾಜ್‌, ಗುಜರಾತ್‌ನ ಕಲಾವಿದ ಭಾನುಬಾಯ್‌ ಚಿತಾರ, ಗುಜರಾತ್‌ನ ಕಲಾವಿದ ಪರೇಶ್ ರಾಥ್ವಾ, ಬಿಹಾರದ ಕಪಿಲ್ ದೇವ್‌ ‍ಪ್ರಸಾದ್‌ ಅವರು ಸೇರಿದಂತೆ 91 ಸಾಧಕರು ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ನನಗೆ ನಿದ್ದೆ ಬರುತ್ತಿದೆ, ದಯವಿಟ್ಟು ರೈಡ್ ಕ್ಯಾನ್ಸಲ್ ಮಾಡಿ ಎಂದ ಉಬೇರ್ ಚಾಲಕ

newsics.com ಬೆಂಗಳೂರು: ವೆಬ್ ಆಧಾರಿತ ಸೇವೆ ನೀಡುವ ಕಾರು ಚಾಲಕರು ದಿನದ 24 ಗಂಟೆಯೂ ಅಲರ್ಟ್ ಆಗಿರುತ್ತಾರೆ.  ಕೆಲವೊಮ್ಮೆ ಇಲ್ಲದ ಕಾರಣ ನೀಡಿ ಅಂತಿಮ ಕ್ಷಣದಲ್ಲಿ  ರೈಡ್...

ಪ್ರಾರ್ಥನಾ ಮಂದಿರದ ಮೇಲೆ ಭಯೋತ್ಪಾದಕರ ದಾಳಿ: ಐವರ ಸಾವು, 10 ಮಂದಿಗೆ ಗಾಯ

newsics.com ಜೆರುಸಲೇಂ: ಇಸ್ರೇಲ್ ನ ಜೆರುಸಲೇಂನಲ್ಲಿರುವ ಪ್ರಾರ್ಥನಾ ಮಂದಿರದ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ. ಗುಂಡಿನ ದಾಳಿಯಲ್ಲಿ 10 ಮಂದಿ ಗಾಯಗೊಂಡಿದ್ದು ಅವರ ಸ್ಥಿತಿ ಗಂಭೀರವಾಗಿದೆ. ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ನಡೆಸಿದ ಕಾರ್ಯಾಚರಣೆಯಲ್ಲಿ...

ಎರಡು ಕಾರು, ಮೂರು ಸ್ಕೂಟರ್ ಗೆ ಡಿಕ್ಕಿ ಹೊಡೆದ ಬಿಎಂಟಿಸಿ ಬಸ್: ಓರ್ವ ಸಾವು

newsics.com ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ. ಬಿಎಂಟಿಸಿ ಬಸ್ ಎರಡು ಕಾರು ಮತ್ತು ಮೂರು ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ನಾಗವಾರ- ಯಲಹಂಕ ಮುಖ್ಯ ರಸ್ತೆಯಲ್ಲಿ ಹೆಗಡೆ ನಗರದ ಬಳಿ ಈ...
- Advertisement -
error: Content is protected !!