Thursday, May 26, 2022

ಕಿವಿಯಲ್ಲಿ‌ ನೋವು, ಶಿಳ್ಳೆ ಸದ್ದು, ಝುಮ್ ಅನುಭವ- ಒಮೈಕ್ರಾನ್ ಸೋಂಕಿನ ಲಕ್ಷಣ

Follow Us

newsics.com

ಇಂಗ್ಲೆಂಡ್: ಕಿವಿಯಲ್ಲಿ ನೋವು, ಝುಮ್ ಎನ್ನುವ ಅನುಭವ, ಶಿಳ್ಳೆ ಹಾಕಿದ ರೀತಿಯ ಸದ್ದು ವಿಪರೀತವಾಗಿದ್ದರೆ ಅದು ಕೊರೋನಾ ರೂಪಾಂತರಿ ಒಮೈಕ್ರಾನ್ ಸೋಂಕಿನ ಲಕ್ಷಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇಂತಹ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸದೆ ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಒಮೈಕ್ರಾನ್ ಸೋಂಕಿತರ ಮೇಲೆ ಅಧ್ಯಯನ ನಡೆಸಿದಾಗ ಸೋಂಕಿತರು ಕಿವಿಯಲ್ಲಿ ನೋವು, ಝುಮ್ಮೆನಿಸುವಿಕೆ ಮತ್ತು ಸದ್ದಾಗುವುದನ್ನು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಕೊರೋನಾದ ಹೊಸ ರೂಪಾಂತರಿ ಒಮೈಕ್ರಾನ್ ಸೋಂಕಿನ ಗುಣಲಕ್ಷಣಗಳು ಸಾಮಾನ್ಯವಾಗಿ ಜ್ವರದ ಲಕ್ಷಣಗಳಂತೆಯೇ ಇವೆ. ಬ್ರಿಟನ್‌ನ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಒಮೈಕ್ರಾನ್ ಪತ್ತೆ ಹಚ್ಚುವ ಬಗ್ಗೆ ಅಧ್ಯಯನ ನಡೆಸಿದ್ದು, ಕಿವಿಯಲ್ಲಿ ಉಂಟಾಗುವ ಕಿರಿಕಿರಿಯಿಂದಲೂ ಒಮಿಕ್ರಾನ್ ಪತ್ತೆ ಮಾಡಬಹುದು ಎಂದು ಹೇಳಿದ್ದಾರೆ.

ಒಮೈಕ್ರಾನ್ ತಳಿ ದೇಹದ ಹೃದಯ, ಮೆದುಳು, ಕಣ್ಣುಗಳಲ್ಲದೇ ಕಿವಿಯ ಮೇಲೂ ಪರಿಣಾಮ ಉಂಟುಮಾಡುತ್ತಿದೆ. ವಿಶೇಷ ಮತ್ತು ಆತಂಕಕಾರಿ ಅಂಶವೆಂದರೆ ಹೊಸ ರೂಪಾಂತರಿಯು ಕೊರೊನಾ ಲಸಿಕೆ ಪಡೆದವರ ಮೇಲೂ ಸವಾರಿ ಮಾಡುತ್ತಿದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ಪ್ರಬಲ, ವೇಗವಾಗಿ ಹರಡಬಲ್ಲ ಕೊರೋನಾ ರೂಪಾಂತರಿ ಉಪ ಪ್ರಬೇಧ ಪತ್ತೆ: ಹೆಚ್ಚಿದ ಆತಂಕ

ಸರ್ಜರಿ ಮಾಡುತ್ತಲೇ ಕೊನೆಯುಸಿರೆಳೆದ ಖ್ಯಾತ ನ್ಯೂರೋ ಸರ್ಜನ್

ವೀಕೆಂಡ್ ಮೂಡ್‌ನಲ್ಲಿ ನಟ ಯಶ್, ಮಗಳು ಐರಾಳಿಗೆ ಸ್ಪೆಷಲ್ ಕ್ಲಾಸ್!

ಜ.27ರವರೆಗೆ ನಟ ದಿಲೀಪ್ ಬಂಧಿಸದಂತೆ ಕೇರಳ ಹೈಕೋರ್ಟ್ ಸೂಚನೆ

ಮತ್ತಷ್ಟು ಸುದ್ದಿಗಳು

Latest News

ಉಗ್ರರ ಗುಂಡಿಗೆ ಟಿವಿ‌ ಕಲಾವಿದೆ ಬಲಿ

newsics.com ಶ್ರೀನಗರ: ಉಗ್ರರ ಗುಂಡಿಗೆ ಟಿವಿ ಕಲಾವಿದೆಯೊಬ್ಬರು ಬಲಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್‌ ಜಿಲ್ಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಮಹಿಳೆಯನ್ನು...

ಪೆಟ್ರೋಲಿಲ್ಲ, ಎಟಿಎಂನಲ್ಲಿ ಹಣವಿಲ್ಲ: ಪಾಕ್ ಸರ್ಕಾರದ ವಿರುದ್ಧ ಹಫೀಜ್ ವಾಗ್ದಾಳಿ

newsics.com ಇಸ್ಲಾಮಾಬಾದ್: ಪಾಕಿಸ್ತಾನದ ಸ್ಥಿತಿಗತಿಗಳ ಬಗೆಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅವರು ಕಿಡಿಕಾರಿದ್ದಾರೆ. ಲಾಹೋರ್ ನಲ್ಲಿ ಜನ ಸಾಮಾನ್ಯರಿಗೆ ಪೆಟ್ರೋಲ್ ಸಿಗುತ್ತಿಲ್ಲ. ಎಟಿಎಂನಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ. ಯಾವುದೇ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್...

ಮಗನ ಪಬ್ ಜಿ ಆಟಕ್ಕೆ ತಾಯಿ ಬಲಿ

newsics.com ಚಿಕ್ಕಮಗಳೂರು: ಮಗನ ಪಬ್ ಜಿ ಆಟಕ್ಕೆ, ತಾಯಿ ಬಲಿಯಾಗಿರುವ ಘಟನೆ ಚಿಕ್ಕಮಗಳೂರಿನ ಗಿರಿಶ್ರೇಣಿಯ ಅಗಲಖಾನ್ ಎಸ್ಟೇಟ್ ನಲ್ಲಿ ನಡೆದಿದೆ. ಇಮ್ತಿಯಾಜ್ ಮತ್ತು ಮೈಮುನ್ನಾ ದಂಪತಿ ಕುಟುಂಬ ಎರಡು ವರ್ಷದಿಂದ ಎಸ್ಟೇಟ್ ನ ಕೂಲಿ ಲೈನ್...
- Advertisement -
error: Content is protected !!