newsics.com
ಪಾಕಿಸ್ತಾನ; ಪಾಕಿಸ್ತಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮಿತಿಮೀರಿದೆ. ಕಳೆದ ಆರು ತಿಂಗಳಿನಲ್ಲಿ 2,439 ಮಹಿಳೆಯರ ಮೇಲೆ ಅತ್ಯಾಚಾರ ಮತ್ತು 90 ಮಂದಿಯನ್ನು ಹತ್ಯೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಪಾಕ್ ನ ಪಂಜಾಬ್ ಪ್ರದೇಶದಲ್ಲಿ ಸರ್ಕಾರ ರೇಪ್ ಎಮರ್ಜೆನ್ಸಿ ಘೋಷಣೆ ಮಾಡಿದೆ.
110 ಮಿಲಿಯನ್ ಜನರಿರುವ ಪಂಜಾಬ್ ಪ್ರಾಂತ್ಯದ ಮಹಾನಗರವಾದ ಲಾಹೋರ್ನಲ್ಲಿ ಆರು ತಿಂಗಳಿನಲ್ಲಿ 400 ಕ್ಕೂ ಹೆಚ್ಚು ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದು, 2,300 ಕ್ಕೂ ಹೆಚ್ಚು ಜನರನ್ನು ಅಪಹರಿಸಲಾಗಿದೆ ಎಂದು ವರದಿ ತಿಳಿಸಿದೆ.
ಪಾಕ್ನಲ್ಲಿ ಪ್ರತಿದಿನ 11 ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಇವೆಲ್ಲವುಗಳನ್ನು ಗಮನಿಸಿ ಅಲ್ಲಿನ ಸರ್ಕಾರ ಮಹಿಳೆಯ ಸುರಕ್ಷತೆ ದೃಷ್ಟಿಯಿಂದ ರೇಪ್ ಎಮರ್ಜೆನ್ಸಿ ಘೋಷಣೆ ಮಾಡಿದೆ ಎಂದು ವರದಿಯಾಗಿದೆ.
ಕಾಡಾನೆ ಹಾವಳಿ ನಿಯಂತ್ರಣ: ಸ್ಟೀಲ್ ವೈಯರ್ ರೋಪ್ ಬ್ಯಾರಿಕೇಡ್ ಅಳವಡಿಕೆ