ಲಾಹೋರ್ : ಪಾಕಿಸ್ತಾನದಲ್ಲಿ ಈಗ ಗೋಧಿ ಹಿಟ್ಟಿನ ತೀವ್ರ ಕೊರತೆ ಎದುರಾಗಿದೆಯಂತೆ! ಇದರಿಂದ ರೊಟ್ಟಿ, ಚಪಾತಿ ಪ್ರಿಯರು ಸಮಸ್ಯೆ ಎದುರಿಸುವಂತಾಗಿದೆ.
ಗೋದಿ ಕೊರತೆಯಿಂದ ಖೈಬರ್ ಪಖ್ತೂನ್ ಖವಾ ಪ್ರಾಂತ್ಯದ ರಾಜಧಾನಿ ಪೇಷಾವರ್ ನಗರದಲ್ಲಿ ಗೋದಿ ಹಿಟ್ಟು ಮಾರಾಟ ಮಾಡುವ 2500 ಮಳಿಗೆಗಳು ಬಂದ್ ಆಗಿವೆ. ಬಲೂಚಿಸ್ತಾನ್, ಸಿಂಧ್, ಪಂಜಾಬ್ ಮತ್ತು ಖೈಬರ್ ಪಖ್ತೂನ್ ಖವಾ ಪ್ರಾಂತ್ಯಗಳಲ್ಲಿ ಗೋಧಿ ಹಿಟ್ಟಿನ ಕೊರತೆ ತೀವ್ರವಾಗಿದೆ. ಇದರಿಂದ ಜನರು ಅನಿವಾರ್ಯವಾಗಿ ಅಕ್ಕಿಯ ಮೊರೆ ಹೋಗಿದ್ದಾರೆ.
ಪಾಕಿಸ್ತಾನದಲ್ಲಿ ಗೋಧಿ ಹಿಟ್ಟಿಗೆ ಹಾಹಾಕಾರ…!
Follow Us