ಜಮ್ಮುಕಾಶ್ಮೀರ: ಪಾಕಿಸ್ತಾನ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕದಡಲು ಎಷ್ಟೋ ಸಾಧ್ಯವೋ ಅಷ್ಟು ಪ್ರಯತ್ನ ಮಾಡುತ್ತಿದೆ. ಗಡಿ ಭಾಗದಲ್ಲಿ ಟೆರರಿಸ್ಟ್‍ಗಳಿಗೆ ಸಪೋರ್ಟ ಮಾಡಲು ವೆಪನ್‍ಗಳನ್ನು ಎಸೆಯಲು ಡ್ರೋನ್ ಬಳಸಿಕೊಳ್ಳುತ್ತಿದೆ ಎಂದು ಜಮ್ಮುಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಪಾಕ್ ಕೃತ್ಯಗಳ ಮಾಹಿತಿ ನೀಡಿದ ದಿಲ್ಬಾಗ್ ಸಿಂಗ್, ಪಾಕ್ ಗಡಿಯಲ್ಲಿ ಉಗ್ರವಾದವನ್ನು ಬೆಂಬಲಿಸಲು ಎಲ್ಲ ಪ್ರಯತ್ನ ಮಾಡುತ್ತಿದೆ. ಉಗ್ರರಿಗೆ ಅಗತ್ಯವಿರುವ ಎಲ್ಲ ನೆರವನ್ನು ನೀಡುತ್ತಿದೆ. ಜಮ್ಮುಕಾಶ್ಮೀರದಲ್ಲಿ ಮಾದಕದ್ರವ್ಯ ಸಾಗಾಟ ಹಾಗೂ ಮಾರಾಟಗಾರರ ಮೇಲೆ ಕಣ್ಣಿಡಲಾಗಿದ್ದು, ಡ್ರಗ್ಸ್ ಸ್ಮಗ್ಲರ್‍ಗಳನ್ನು ಮಟ್ಟ ಹಾಕಲಾಗುತ್ತಿದೆ.
ಉಗ್ರಗಾಮಿಗಳಿಗೆ ಅಗತ್ಯ ಆರ್ಥಿಕ ನೆರವು ನೀಡಲು ಪಾಕ್ ಡ್ರಗ್ಸ್ ಸ್ಮಗ್ಲಿಂಗ್ ಬಳಸಿಕೊಳ್ಳುತ್ತಿದೆ. ಡ್ರೋನ್ ಮೂಲಕ ವೆಫನ್ಸ್ ಸಪ್ಲೈ ಮಾಡುತ್ತಿರುವುದನ್ನು ತಡೆಯುವುದು ಅತ್ಯಂತ ಸವಾಲಿನ ಕೆಲಸ. ಆದರೆ ಅದನ್ನು ತಡೆಯುವ ಪ್ರಯತ್ನ ಮಾಡಿ ನಾವು ಯಶಸ್ವಿಯಾಗಿದ್ದೇವೆ ಎಂದು ಅವರು ವಿವರಣೆ ನೀಡಿದ್ದಾರೆ.
ಪಾಕ್ ಜಮ್ಮುಕಾಶ್ಮೀರದಲ್ಲಿ ಶಾಂತಿ ಕದಡುವ ಪ್ರಯತ್ನದಲ್ಲಿದೆ ಡಿಜಿಪಿ ದಿಲ್ಬಾಗ್ ಸಿಂಗ್
Follow Us