ಇಸ್ಲಾಮಾಬಾದ್: ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿರುವುದನ್ನು ಪಾಕಿಸ್ತಾನ ಪತ್ರಿಕೆಗಳು ಕೂಡ ವರದಿ ಮಾಡಿವೆ. ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್ ಸೇರಿದಂತೆ ಹಲವು ಪಾಕಿಸ್ತಾನದ ಪತ್ರಿಕೆಗಳ ಇಂಟರ್ ನೆಟ್ ಆವೃತ್ತಿಯಲ್ಲಿ ಯಡಿಯೂರಪ್ಪ ಅವರ ಸುದ್ದಿ ಪ್ರಕಟವಾಗಿದೆ.
ಪಾಕಿಸ್ತಾನದ ಪ್ರಮುಖ ಪತ್ರಿಕೆಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊರೋನಾ ಸೋಂಕಿಗೆ ತುತ್ತಾಗಿರುವುದರ ಬಗ್ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಪ್ರಕಟಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯಂತ ಆಪ್ತ ಎಂಬ ವಿಶೇಷತೆಯೊಂದಿಗೆ ಸುದ್ದಿ ಪ್ರಕಟಿಸಿದೆ. ಈ ಸುದ್ದಿಯ ಮುಂದುವರಿದ ಭಾಗವಾಗಿ ಕರ್ನಾಟಕ ಮತ್ತು ಮಧ್ಯಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳ ಬಗ್ಗೆ ಪ್ರಸ್ತಾಪಿಸಲಾಗಿದೆ.
ಮಾರಕ ಕೊರೋನಾದಿಂದ ತತ್ತರಿಸುತ್ತಿದ್ದರೂ ತನಗೇನೂ ಆಗಿಲ್ಲ ಎಂಬಂತೆ ಪಾಕಿಸ್ತಾನ ವರ್ತಿಸುತ್ತಿದೆ. ವಿಶ್ವದ ಹಲವು ರಾಷ್ಟ್ರಗಳಿಗೆ ಹೋಲಿಸಿದರೆ ಪಾಕಿಸ್ತಾನದಲ್ಲಿ ಅತೀ ಕಡಿಮೆ ಸಂಖ್ಯೆಯ ಪರೀಕ್ಷೆ ನಡೆಯುತ್ತಿದೆ