ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇರೆಗೆ ವಿಶಾಖಪಟ್ಟಣಂನಲ್ಲಿ ಗುಜರಾತ್ ನ ಗೋದ್ರಾ ನಿವಾಸಿಯನ್ನು ಎನ್‍ಐಎ ಬಂಧಿಸಿದೆ. ಬಂಧಿತನನ್ನು ಗೋದ್ರಾದ ನಿವಾಸಿ ಇಮ್ರಾನ್ ಎಂದು ಗುರುತಿಸಲಾಗಿದೆ.
ಈತ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಇಂಟರ್ ಸರ್ವೀಸ್ ಇಂಟಲಿಜೆನ್ಸ್ ಜೊತೆ ನಿಕಟ ಸಂಪರ್ಕ ಹೊಂದಿದ್ದು, ವಿಶಾಖಪಟ್ಟಣಂನ ಭಾರತೀಯ ನೌಕಾ ನೆಲೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಾಕ್‍ಗೆ ನೀಡುತ್ತಿದ್ದ ವೇಳೆ ಎನ್‍ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಪಾಕಿಸ್ತಾನ ಭಾರತದ ವಿವಿಧೆಡೆಯ ನೌಕಾನೆಲೆ,ರಕ್ಷಣಾ ಇಲಾಖೆಯ ಕೇಂದ್ರಗಳು,ಆಣೆಕಟ್ಟುಗಳು ಸೇರಿದಂತೆ ವಿವಿಧ ಸೂಕ್ಷ್ಮ ಸ್ಥಳಗಳ ಮಾಹಿತಿ ಪಡೆಯಲು ಬೇಹುಗಾರರನ್ನು ನೇಮಿಸಿದ್ದು, ಇವರು ಮಾಹಿತಿ ಸಂಗ್ರಹಿಸಿ ಪಾಕ್‍ಗೆ ರವಾನಿಸುತ್ತಿದ್ದರು ಎನ್ನಲಾಗಿದೆ.
ಈ ಬೇಹುಗಾರರೊಂದಿಗೆ ಸ್ಥಳೀಯರು, ಕೆಲ ಅಧಿಕಾರಿಗಳು ಶಾಮೀಲಾಗಿರುವ ಶಂಕೆಯೂ ವ್ಯಕ್ತವಾಗಿದ್ದು, ಎನ್‍ಆಯ್‍ಎ ತನಿಖೆ ಚುರುಕುಗೊಳಿಸಿದೆ.
ಪಾಕ್‍ನ ಬೇಹುಗಾರಿಕಾ ಏಜೆಂಟ್ ಬಂಧನ
Follow Us