newsics.com
ನವದೆಹಲಿ: ರಾಜಧಾನಿ ನವದೆಹಲಿಯಲ್ಲಿ ಅಡಗಿ ಕುಳಿತಿದ್ದ ಪಾಕಿಸ್ತಾನ ಮೂಲದ ಭಯೋತ್ಪಾದಕನೊಬ್ಬನನ್ನು ದೆಹಲಿ ಪೊಲೀಸರ ವಿಶೇಷ ದಳ ಬಂಧಿಸಿದೆ.
ದೆಹಲಿಯ ಲಕ್ಷ್ಮೀ ನಗರದ ರಮೇಶ್ ಪಾರ್ಕ್ ಎಂಬಲ್ಲಿ ಶಂಕಿತ ಭಯೋತ್ಪಾದಕನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಶಂಕಿತ ಭಯೋತ್ಪಾದಕ ಭಾರತದ ಗುರುತು ಚೀಟಿ ಸೇರಿದಂತೆ ಹಲವು ದಾಖಲೆಗಳನ್ನು ಕೂಡ ಹೊಂದಿದ್ದಾನೆ.
ಬಂಧಿತ ಶಂಕಿತ ಭಯೋತ್ಪಾದಕನಿಂದ ಒಂದು ಎ ಕೆ 47 ರೈಫಲ್ , ಹ್ಯಾಂಡ್ ಗ್ರೆನೇಡ್, ಅತ್ಯಾಧುನಿಕ ಪಿಸ್ತೂಲ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ದೆಹಲಿ ಪೊಲೀಸರು ಶಂಕಿತ ಭಯೋತ್ಪಾದಕನನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ. ದೀಪಾವಳಿ ಮತ್ತು ನವರಾತ್ರಿ ಸಂದರ್ಭದಲ್ಲಿ ದುಷ್ಕೃತ್ಯ ಎಸಗಲು ಶಂಕಿತ ಭಯೋತ್ಪಾದಕ ಸಂಚು ಹೂಡಿದ್ದ ಎಂದು ಶಂಕಿಸಲಾಗಿದೆ.