Tuesday, April 13, 2021

ನೌಷೇರಾ, ಕೃಷ್ಣಾ ಘಾಟಿಯಲ್ಲಿ ಪಾಕ್ ದಾಳಿ: ಭಾರತದ ಯೋಧ ಹುತಾತ್ಮ

ಶ್ರೀನಗರ: ಜಮ್ಮು ಕಾಶ್ಮೀರದ  ನೌಷೇರಾ ಮತ್ತು ಕೃಷ್ಣಾ ಘಾಟಿಯಲ್ಲಿ  ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ. ಭಾರತದ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಪಾಕಿಸ್ತಾನ ನಡೆಸಿದ ಗುಂಡಿನ ದಾಳಿಯಲ್ಲಿ ಭಾರತದ ವೀರ ಯೋಧನೊಬ್ಬ ಹುತಾತ್ಮನಾಗಿದ್ದಾನೆ. ಪಾಕಿಸ್ತಾನ ದಾಳಿಗೆ ಭಾರತ ಕೂಡ ದಿಟ್ಟ ಪ್ರತ್ಯುತ್ತರ  ನೀಡಿದೆ. ನಾಗರಿಕರನ್ನು ಗುರಿಯಾಗಿರಿಸಿಕೊಂಡು ಪಾಕಿಸ್ತಾನ ದಾಳಿ ನಡೆಸುತ್ತಿರುವುದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಕೂಡ ಆಗಿದೆ. ಭಾರತ- ಚೀನಾ ಗಡಿಯಲ್ಲಿ ಉದ್ವಿಗ್ನತೆ ನೆಲೆಸಿರುವ ಹಿನ್ನೆಲೆಯಲ್ಲಿ , ಪಾಕಿಸ್ತಾನ ಚೀನಾದ ಸೂಚನೆಯಂತೆ ಕದನ ವಿರಾಮ ಉಲ್ಲಂಘಿಸುತ್ತಿದೆ ಎಂದು  ವಿಶ್ಲೇಷಿಸಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಚಿಕಿತ್ಸೆ ನಿರಾಕರಿಸಿದ ಮಲ್ಯ ಆಸ್ಪತ್ರೆ, ಫುಟ್’ಪಾತ್’ನಲ್ಲೇ 8 ಗಂಟೆ ಕಳೆದ ಕೊರೋನಾ ಸೋಂಕಿತೆ

newsics.comಬೆಂಗಳೂರು: ಡಯಾಲಿಸಿಸ್‌ಗೆ ಬಂದ‌ ಮಹಿಳೆಗೆ ಕೊರೋನಾ ಸೋಂಕಿದೆ ಎಂದು ಮಲ್ಯ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿದ್ದರಿಂದ ಆ ಮಹಿಳೆ ಪುಟ್'ಪಾತ್'ನಲ್ಲೇ ಎಂಟು ಗಂಟೆ ಕಳೆದಿದ್ದಾರೆ.ಬಸವನಗುಡಿ...

ಮೀನುಗಾರಿಕಾ ಬೋಟ್ ದುರಂತ: ಇಬ್ಬರ ಸಾವು, 12 ಮೀನುಗಾರರು ನಾಪತ್ತೆ

newsics.comಮಂಗಳೂರು(ದಕ್ಷಿಣ ಕನ್ನಡ): ಮೀನುಗಾರಿಕಾ ಬೋಟ್ ದುರಂತದಲ್ಲಿ  ಇಬ್ಬರು ಸಾವನ್ನಪ್ಪಿದ್ದು, 12 ಮೀನುಗಾರರು ನಾಪತ್ತೆಯಾಗಿರುವ ಘಟನೆ ಮಂಗಳೂರು ಬಂದರಿನಲ್ಲಿ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲಿ ದೂರದಲ್ಲಿ...

ಭಾರತದಲ್ಲಿ ಈ ಬಾರಿ ಕೂಡ ಸಾಮಾನ್ಯ ಮುಂಗಾರು: ಸ್ಕೈಮೆಟ್ ಭವಿಷ್ಯ

newsics.com ಪುಣೆ: ಸತತ ಮೂರನೆ ವರ್ಷ ಕೂಡ ಭಾರತದಲ್ಲಿ  ಸಾಮಾನ್ಯ ಮುಂಗಾರು ಮಳೆ ಸುರಿಯಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈ ಮೆಟ್ ಭವಿಷ್ಯ ನುಡಿದಿದೆ. ಜೂನ್ ನಿಂದ ಆರಂಭವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಕೊನೆಗೊಳ್ಳುವ ಮುಂಗಾರು...
- Advertisement -
error: Content is protected !!