Wednesday, May 31, 2023

ಪೇಜಾವರ ಶ್ರೀ ವಿಷ್ಣುಪಾದ ಲೀನ

Follow Us

ಉಡುಪಿ: ‘ಪೇಜಾವರ ಶ್ರೀ’ಗಳೆಂದೇ ಪ್ರಸಿದ್ಧರಾಗಿದ್ದ ಪೇಜಾವರ ಮಠದ ಹಿರಿಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ (88) ಇಂದು ಬೆಳಗ್ಗೆ 9:20 ಕ್ಕೆ ವಿಷ್ಣುಪಾದದಲ್ಲಿ ಲೀನರಾದರು.
ಇದರೊಂದಿಗೆ ಯುಗದ ಸಂತನೊಬ್ಬನ ಬದುಕು ಅಂತ್ಯವಾಗಿದೆ. ಸಮಾಜದ ದಿವ್ಯಚೇತನವೊಂದು ಬಾರದ ಲೋಕಕ್ಕೆ ತೆರಳಿದೆ. ಬದುಕಿದ್ದಷ್ಟೂ ಕಾಲ ಅತಿ ಕ್ರಿಯಾಶೀಲರಾಗಿರುತ್ತಿದ್ದ, ಪಾದರಸದಂತಿದ್ದ ಶ್ರೀಗಳು ಇನ್ನು ನಿಶ್ಚಲರು. ದೇಶದ, ಅದರಲ್ಲೂ ಕರ್ನಾಟಕದ ಮಟ್ಟಿಗೆ ದೊಡ್ಡ ಶೂನ್ಯವೇ ಆವರಿಸಿದೆ.
ಶ್ರೀಗಳನ್ನು ಉಳಿಸಿಕೊಳ್ಳಲೇಬೇಕೆಂಬ ಮಣಿಪಾಲ ಕೆಎಂಸಿ ಹಾಗೂ ದೆಹಲಿ ಏಮ್ಸ್ ತಜ್ಞ ವೈದ್ಯರ ಒಂಭತ್ತು ದಿನಗಳ ಸತತ ಯತ್ನ ಕೊನೆಗೂ ಫಲ ಕೊಡಲಿಲ್ಲ. ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳು ಕಳೆದೆರಡು ದಿನಗಳಿಂದ ಚಿಕಿತ್ಸೆಗೂ ಸ್ಪಂದಿಸುತ್ತಿರಲಿಲ್ಲ.
ತಮ್ಮ ಏಳನೇ ವಯಸ್ಸಿನಲ್ಲೇ ಪೇಜಾವರ ಮಠದ ಶ್ರೀ ವಿಶ್ವಮಾನ್ಯತೀರ್ಥರಿಂದ ಸನ್ಯಾಸದೀಕ್ಷೆ ಪಡೆದುಕೊಂಡಿದ್ದ ವೆಂಕಟರಮಣ (ಸನ್ಯಾಸದೀಕ್ಷೆಗೂ ಮೊದಲಿನ ಹೆಸರು), ಸುದೀರ್ಘ ಎಂಟು ದಶಕಗಳ ಕಾಲ ಸನ್ಯಾಸ ಜೀವನ ಸಾಗಿಸಿ ಶ್ರೇಷ್ಠರೆನಿಸಿದ್ದಾರೆ. ತಮ್ಮ ಚಿಂತನೆಗಳಿಂದ ಜನಪ್ರಿಯರಾಗಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲೇಬೇಕೆಂದು ಬಲವಾಗಿ ಪ್ರತಿಪಾದಿಸಿದ್ದ ಪೇಜಾವರ ಸ್ವಾಮೀಜಿ, ನಿರ್ಮಾಣಕ್ಕೆ ಇದ್ದ ಅಡ್ಡಿಗಳೆಲ್ಲ ದೂರವಾಗಿ ರಾಮಮಂದಿರ ನಿರ್ಮಾಣದ ಕನಸು ನನಸಾಗುವ ಹೊತ್ತಲ್ಲೇ ಇಹಲೋಕ ತ್ಯಜಿಸಿದ್ದಾರೆ. `ಶ್ರೀಗಳು ರಾಮಮಂದಿರ ನಿರ್ಮಾಣವಾಗುವವರೆಗಾದರೂ ಇರಬೇಕಿತ್ತು’ ಎಂಬ ಮಾತು ಎಲ್ಲೆಡೆ ಕೇಳಿಬಂತು. ಆದರೆ, ವಿಧಿಯ ಅಟ್ಟಹಾಸದೆದುರು ಈ ಮಾತೇ ಮೌನವಾಗಿತ್ತು.
ಬಾಲ್ಯದ ನೆನಪುಗಳು, ಮಠದ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯ ಅನುಭವ, ಎರಡನೆಯ ಮಹಾಯುದ್ಧದ ಗಾಯಾಳುಗಳ ಶುಶ್ರೂಷೆಗೆ ಹೋಗಬೇಕೆಂದು ಶ್ರೀಗಳು ಕನಸು ಕಂಡದ್ದು, ಗಾಂಧೀಜಿಯವರ ಪ್ರಭಾವ, ಮಾಧ್ವ ಮಹಾಮಂಡಲದ ಸ್ಥಾಪನೆಗೆ ಪಟ್ಟ ಶ್ರಮ, ದಲಿತರು ಅನುಭವಿಸುವ ಅವಮಾನದ ಪ್ರತ್ಯಕ್ಷ ಅನುಭವ ಎಲ್ಲವೂ ಈಗ ಇತಿಹಾಸ.
‘ಸಮಾಜದಲ್ಲಿ ಸಮುದ್ರ ಮಥನಕ್ಕೆ ಕಾರಣವಾದ’ ದಲಿತರ ಕೇರಿ ಭೇಟಿ, ವಾಕ್ಯಾರ್ಥಗಳು, ತುರ್ತು ಪರಿಸ್ಥಿತಿಯ ಪ್ರತಿಭಟನೆ, ಪರಿಸರ ಚಳವಳಿ, ರಾಮಜನ್ಮಭೂಮಿ ಪ್ರಕರಣದ ಕೆಲವು ತೆರೆಮರೆಯ ಸಂಗತಿಗಳು, ಪಂಜಾಬಿನ ಶಾಂತಿಯಾತ್ರೆ, ಗೋಕಾಕ್ ಚಳವಳಿಗೆ ಬೆಂಬಲ… ಇವೆಲ್ಲ ಈಗ ನೆನಪು ಮಾತ್ರ.

ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ಮುಖ್ಯಸ್ಥರಾಗಿ, ಐದು ಪರ್ಯಾಯಗಳಲ್ಲಿ ಪಾಲ್ಗೊಂಡ ಹಿರಿಯ ಶ್ರೀಗಳಾಗಿ, ನಾಡಿನ ಹಿರಿಯ ವಿದ್ವಾಂಸರಾಗಿ, ಸಾಮಾಜಿಕ ಸೇವಾ ಕಳಕಳಿಯ ಮನೋಭಾವವುಳ್ಳವರಾಗಿ ಸೇವೆ ಸಲ್ಲಿಸಿದ್ದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ನಿಧನ ವೈಷ್ಣವ ಸಮುದಾಯಕ್ಕಷ್ಟೇ ಅಲ್ಲ, ಇಡೀ ಸಮಾಜಕ್ಕೆ ಬಹುದೊಡ್ಡ ನಷ್ಟವಾಗಿದೆ.

ಮತ್ತಷ್ಟು ಸುದ್ದಿಗಳು

vertical

Latest News

Weekend With Ramesh; ಸಾಧಕರ ಕುರ್ಚಿಯಲ್ಲಿ ಡಿಕೆ ಶಿವಕುಮಾರ್!

newsics.com ಬೆಂಗಳೂರು: ಖಾಸಗಿವಾಹಿನಿಯಲ್ಲಿ ವೀಕೆಂಡ್ ವಿತ್ ರಮೇಶ್ ಐದನೇ ಸೀಸನ್​ನ ಈ ವಾರದ ಅತಿಥಿಯಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಗಮಿಸಲಿದ್ದಾರೆ ಎನ್ನುವ ಗಾಳಿ ಸುದ್ದಿಯೊಂದು ಹಬ್ಬಿದೆ. ಭಾನುವಾರದ ಎಪಿಸೋಡ್...

ತರಬೇತಿ ವಿಮಾನ ತುರ್ತು ಭೂಸ್ಪರ್ಶ; ತಪ್ಪಿದ ಭಾರೀ ಅನಾಹುತ

newsics.com ಬೆಳಗಾವಿ: ತರಬೇತಿ ವಿಮಾನವೊಂದು ತಾಂತ್ರಿಕ ತೊಂದರೆಯಿಂದ  ತುರ್ತು ಭೂಸ್ಪರ್ಶ ಆಗಿದೆ. ಈ ಘಟನೆ ಬೆಳಗಾವಿ ತಾಲೂಕಿನ ಹೊನ್ನಿಹಾಳ ಹೊರವಲಯದಲ್ಲಿ ನಡೆದಿದೆ. ರೆಡ್‌ಬರ್ಡ್  ಸಂಸ್ಥೆಗೆ ಸೇರಿದ VT- RBF ತರಬೇತಿ ವಿಮಾನ ಇದಾಗಿದ್ದು, ಘಟನೆ ನಡೆದ...

ಆಪರೇಷನ್ ಪಠ್ಯ ಪುಸ್ತಕ; ಪಠ್ಯಗಳ ಪರಿಷ್ಕರಿಸ್ತೇವೆಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ

newsics.com ಬೆಂಗಳೂರು:  ಪಠ್ಯ ಪುಸ್ತಕ  ಪರಿಷ್ಕರಣೆ ನಾವು ಮಾಡ್ತೀವಿ. ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ ಪರಿಷ್ಕರಣೆ ಮಾಡ್ತೀವಿ. ಮಕ್ಕಳ ಮನಸ್ಸಿನಲ್ಲಿ ಕಲ್ಮಶ ತುಂಬುವ ಪಠ್ಯ ಕೈ ಬಿಡ್ತೀವಿ. ಈ ಬಗ್ಗೆ ಸಿಎಂ, ಡಿಸಿಎಂ ಜೊತೆ ಚರ್ಚಿಸಿ...
- Advertisement -
error: Content is protected !!