Wednesday, December 7, 2022

ಬೆಂಗಳೂರಲ್ಲಿ ಪೇಜಾವರ ಶ್ರೀ ಬೃಂದಾವನ

Follow Us

ಉಡುಪಿ/ ಬೆಂಗಳೂರು: ಪೇಜಾವರ ಶ್ರೀಗಳ ಪಾರ್ಥಿವ ಶರೀರವನ್ನು ಉಡುಪಿಯ ಅಜ್ಜರಕಾಡು ಮೈದಾನದಿಂದ ಸೇನಾ ವಿಶೇಷ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತರಲಾಯಿತು.

ಅಜ್ಜರಕಾಡು ಮೈದಾನದಿಂದ ಸುಮಾರು 1.30ರ ಸಮಯದಲ್ಲಿ ಅಂತಿಮ ದರ್ಶನ ಪೂರ್ಣಗೊಂಡ ಬಳಿಕ ಶ್ರೀಗಳ ಪಾರ್ಥಿವ ಶರೀರವನ್ನು ಆಂಬುಲೆನ್ಸ್ ನಲ್ಲಿ ಸೇನಾ ಹೆಲಿಕಾಪ್ಟರ್ ಇರುವಲ್ಲಿಗೆ ಕೊಂಡೊಯ್ಯಲಾಯಿತು. ಸುಮಾರು 1.55ರ ಹೊತ್ತಿಗೆ ಶ್ರೀಗಳ ಪಾರ್ಥೀವ ಶರೀರವನ್ನು ಹೊತ್ತ ಹೆಲಿಕಾಪ್ಟರ್ ಬೆಂಗಳೂರಿನತ್ತ ಸಾಗಿತು. ಎಚ್ ಎ ಎಲ್ ನಿಂದ ನ್ಯಾಷನಲ್ ಕಾಲೇಜುವರೆಗೆ ಝೀರೋ ಟ್ರಾಫಿಕ್ ಸೌಲಭ್ಯ ಕಲ್ಪಿಸಲಾಗಿದೆ.

ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಂಜೆ 5 ಗಂಟೆ ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ವಿದ್ಯಾಪೀಠದ ಆವರಣದಲ್ಲಿ ಶ್ರೀಗಳು ಬೃಂದಾವನಸ್ಥರಾಗಲಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಸಿಪಿಐ, ಪತ್ನಿ ಸಾವು

newsics.com ಕಲಬುರ್ಗಿ: ರಾಜ್ಯದ ಕಲಬುರ್ಗಿ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕಲಬುರ್ಗಿ ಜಿಲ್ಲೆಯ ನೆಲೋಗಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಿಪಿಐ  ರವಿ ಉಕ್ಕುಂದ ಮತ್ತು ಅವರ...

ದ್ವಿತೀಯ ಏಕದಿನ ಪಂದ್ಯ: ರೋಹಿತ್ ಶರ್ಮಾ ಬೆರಳಿಗೆ ಗಾಯ

newsics.com ಢಾಕಾ: ಬಾಂಗ್ಲಾದೇಶ ಎದುರಿನ ದ್ವಿತೀಯ ಏಕದಿನ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ  ನಾಯಕ ರೋಹಿತ್ ಶರ್ಮಾ ಅವರ ಬೆರಳಿಗೆ ಗಾಯವಾಗಿದೆ. ರೋಹಿತ್ ಶರ್ಮಾ ಅವರ ತೋರು ಬೆರಳಿಗೆ ಗಾಯವಾಗಿದ್ದು ಸ್ಕ್ಯಾನಿಂಗ್ ಮಾಡಲಾಗಿದೆ...

ಮಾನ್ಯತಾ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ

newsics.com ಬೆಂಗಳೂರು:  ರಾಜಧಾನಿ ಬೆಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆ ಮಾನ್ಯತಾ ಕಚೇರಿಗಳ ಮೇಲೆ ಇ ಡಿ ದಾಳಿ ನಡೆಸಿದೆ. ರಿಚ್ಮಂಡ್ ರಸ್ತೆ ಸೇರಿದಂತೆ ಸಂಸ್ಥೆಯ ಪ್ರಮುಖ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ...
- Advertisement -
error: Content is protected !!