newsics.com
ನವದೆಹಲಿ: ತೈಲ ಸಂಸ್ಥೆಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಮತ್ತೆ ಹೆಚ್ಚಿಸಿವೆ. ಪೆಟ್ರೋಲ್ ದರ ಲೀಟರ್ ಗೆ 30 ಪೈಸೆ ಹೆಚ್ಚಳ ಮಾಡಲಾಗಿದೆ. ಡೀಸೆಲ್ ದರ ಲೀಟರ್ ಗೆ 35 ಪೈಸೆ ಜಾಸ್ತಿಯಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 102.94 ರೂಪಾಯಿ ಆಗಿದೆ. ಲೀಟರ್ ಡೀಸೆಲ್ ದರ 91. 42 ರೂಪಾಯಿಗೆ ತಲುಪಿದೆ.
ಮುಂಬೈ ಮಹಾನಗರದಲ್ಲಿ ಲೀಟರ್ ಪೆಟ್ರೋಲ್ ದರ 108.96 ರೂಪಾಯಿ, ಡೀಸೆಲ್ ಲೀಟರ್ ದರ 99.17 ರೂಪಾಯಿ. ಮುಂಬೈ ನಗರದಲ್ಲಿ ಡೀಸೆಲ್ ದರ ಲೀಟರ್ ಗೆ 37 ಪೈಸೆ ಹೆಚ್ಚಳವಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ ಹಿನ್ನೆಲೆಯಲ್ಲಿ ಈ ದರ ಹೆಚ್ಚಳ ಮಾಡಲಾಗಿದೆ ಎಂದು ತೈಲ ಸಂಸ್ಥೆಗಳು ಹಕ್ಕು ಮಂಡಿಸಿವೆ.