newsics.com
ನವದೆಹಲಿ: ಸತತ ಆರನೇ ದಿನವಾದ ಭಾನುವಾರವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ.
ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್ಗೆ 30 ಪೈಸೆ ಮತ್ತು ಡೀಸೆಲ್ 35 ಪೈಸೆ ಹೆಚ್ಚಿಸಲಾಗಿದೆ.
ಇದರ ಪರಿಣಾಮ, ದೆಹಲಿಯಲ್ಲಿ ಪೆಟ್ರೋಲ್ ಬೆಲೆಯು ತನ್ನ ಅತ್ಯಧಿಕ ಮಟ್ಟವಾದ 104.14 ರೂ.ಗೆ ಮತ್ತು ಮುಂಬೈನಲ್ಲಿ ಪ್ರತಿ ಲೀಟರ್ಗೆ 110.12 ರೂ.ಗೆ ಏರಿದೆ. ಮುಂಬೈನಲ್ಲಿ, ಡೀಸೆಲ್ ಈಗ ಲೀಟರ್ಗೆ 100.66 ರೂ.ಗೆ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್ಗೆ ಸುಮಾರು 72 ಡಾಲರ್ ಇತ್ತು. ಈಗ ಪ್ರತಿ ಬ್ಯಾರೆಲ್ಗೆ 82 ಡಾಲರ್ಗಳಷ್ಟು ಏರಿದೆ. ಇದರೊಂದಿಗೆ ಡೀಸೆಲ್ ದರ ಪ್ರತಿ ಲೀಟರ್ಗೆ 3.85 ಪೈಸೆ ಮತ್ತು ಪೆಟ್ರೋಲ್ ಬೆಲೆ 2.65 ರೂ. ಹೆಚ್ಚಾಗಿದೆ.
ಜುಲೈ, ಆಗಸ್ಟ್ನಲ್ಲಿ ಬೆಲೆ ಕಡಿತಕ್ಕೂ ಮೊದಲು ಅಂದರೆ, ಮೇ 4 ಮತ್ತು ಜುಲೈ 17 ರ ನಡುವೆ ಪೆಟ್ರೋಲ್ ಬೆಲೆ ಲೀಟರ್ಗೆ 11.44 ರೂ. ಏರಿಕೆಯಾಗಿತ್ತು. ಈ ಅವಧಿಯಲ್ಲಿ ಡೀಸೆಲ್ ದರವು 9.14 ರೂ. ಏರಿಕೆಯಾಗಿತ್ತು.
ದೇಶದಲ್ಲಿ 18,166 ಮಂದಿಗೆ ಕೊರೋನಾ, 23,624 ಜನ ಗುಣಮುಖ, 214 ಸೋಂಕಿತರು ಸಾವು
ಕಲಬುರಗಿ, ವಿಜಯಪುರ ಜಿಲ್ಲೆಗಳ ಹಲವೆಡೆ ಮತ್ತೆ ಭೂಕಂಪನ, ಜನರಲ್ಲಿ ಹೆಚ್ಚಿದ ಆತಂಕ