newsics.com
ನವದೆಹಲಿ: ತೈಲ ಸಂಸ್ಥೆಗಳು ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ಪ್ರಕ್ರಿಯೆ ಮುಂದುವರಿಸಿವೆ. ಸತತ ಏಳು ದಿನಗಳಿಂದ ಇದು ಮುಂದುವರಿದಿದೆ.
ಪೆಟ್ರೋಲ್ ದರ ಲೀಟರ್ ಗೆ 30 ಪೈಸೆ ಹೆಚ್ಚಳ ಮಾಡಲಾಗಿದೆ. ಡೀಸೆಲ್ ಲೀಟರ್ ಗೆ 35 ಪೈಸೆ ಜಾಸ್ತಿಯಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 104. 44 ರೂಪಾಯಿ. ಡೀಸೆಲ್ ದರ ಲೀಟರ್ ಗೆ 93.17 ರೂಪಾಯಿ.
ಮುಂಬೈ ನಗರದಲ್ಲಿ ಲೀಟರ್ ಪೆಟ್ರೋಲ್ ದರ 110.41 ರೂಪಾಯಿ. ಲೀಟರ್ ಡೀಸೆಲ್ ದರ 101.03 ರೂಪಾಯಿ. ಡೀಸೆಲ್ ದರ ಮುಂಬೈನಲ್ಲಿ ಲೀಟರ್ ಗೆ 37 ಪೈಸೆ ಹೆಚ್ಚಾಗಿದೆ.
ಕರ್ನಾಟಕದ ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಡೀಸೆಲ್ ದರ ಲೀಟರ್ ಗೆ ನೂರು ರೂಪಾಯಿ ತಲುಪಿದೆ.