ನವದೆಹಲಿ: ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಪಿಜಿ ಡಿಪ್ಲೊಮಾ ಕೋರ್ಸ್ (ಪಿಜಿಡಿಎಂ) ಹಾಗೂ ಎಂಬಿಎ ಕೋರ್ಸ್‌ಗಳನ್ನು ಒಟ್ಟಿಗೇ ನಡೆಸುವಂತಿಲ್ಲ.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಈ ನಿಯಮ ರೂಪಿಸಿದ್ದು, ಸರ್ಕಾರಿ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳಲ್ಲದೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಗೂ ಅನ್ವಯವಾಗಲಿದೆ.
ಪಿಜಿ ಡಿಪ್ಲೊಮಾ ಕೋರ್ಸ್ (ಪಿಜಿಡಿಎಂ) ಹಾಗೂ ಎಂಬಿಎ ಕೋರ್ಸ್ ಪೈಕಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡು ಆ ಕೋರ್ಸ್‌ಗೆ ಮಾತ್ರ ದಾಖಲಾತಿಗಳನ್ನು ಪಡೆಯಬೇಕು ಎಂದು ಹೇಳಿದೆ.
ಎಐಸಿಟಿಇ ಹೊಸ ನಿಯಮದ ಪ್ರಕಾರ ಪಿಜಿಡಿಎಂ ಕೋರ್ಸ್‌ಗಳನ್ನು ಯಾವುದೇ ವಿಶ್ವವಿದ್ಯಾಲಯಗಳಿಗೆ ನೋಂದಣಿಯಾಗದ ವಿದ್ಯಾಸಂಸ್ಥೆಗಳು ಮಾತ್ರ ನಡೆಸಬಹುದಾಗಿರುತ್ತದೆ.
ಇನ್ಮುಂದೆ ಪಿಜಿಡಿಎಂ, ಎಂಬಿಎ ಕೋರ್ಸ್ ಒಟ್ಟಿಗೇ ನಡೆಸುವಂತಿಲ್ಲ
Follow Us