newwsics.com
ನವದೆಹಲಿ: ಕೋರ್ಟ್ಗಳಲ್ಲಿ ಆನ್ಲೈನ್ ವಿಚಾರಣೆ ಕಾರ್ಯಸಾಧುವಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಆನ್ಲೈನ್ ವಿಚಾರಣೆ ನಿಯಮದಂತೆ ನಡೆಯಲು ಸಾಧ್ಯವಿಲ್ಲ. ಆದ್ದರಿಂದ ಪ್ರಕರಣಗಳನ್ನು ಭೌತಿಕವಾಗಿ ವಿಚಾರಣೆ ನಡೆಸಬೇಕು ಎಂದು ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಹಾಗೂ ಬಿ.ಆರ್. ಗವಾಯಿ ಅವರನ್ನು ಒಳಗೊಂಡ ಪಾಠ ಪ್ರವಚನ ವಿಶೇಷ ಹೇಳಿದೆ.
ನ್ಯಾಯಾಲಯದಲ್ಲಿ ಕುಳಿತುಕೊಳ್ಳುವುದು ಹಾಗೂ ಪರದೆಯನ್ನು ನೋಡುವುದು ನಮಗೆ ಸಂತಸ ನೀಡುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಹಾಗೂ ಬಿ.ಆರ್. ಗವಾಯಿ ಅವರನ್ನು ಒಳಗೊಂಡ ಪೀಠ ಹೇಳಿದೆ.
ಆನ್ಲೈನ್ ನ್ಯಾಯಾಲಯದಲ್ಲಿ ವಿಚಾರಣೆ ಕಕ್ಷಿದಾರರ ಮೂಲಭೂತ ಹಕ್ಕು ಎಂದು ಘೋಷಿಸುವಂತೆ ಕೋರಿ ಸರಕಾರೇತರ ಸಂಸ್ಥೆ ನ್ಯಾಷನಲ್ ಫೆಡರೇಶನ್ ಆಫ್ ಸೊಸೈಟಿಸ್ ಫಾರ್ ಕಾಸ್ಟ್ ಜಸ್ಟಿಸ್ ಆ್ಯಂಡ್ ಹಾಗೂ ಜುಲಿಯೋ ರಿಬೈರೊ, ಶೈಲೇಶ್ ಆರ್. ಗಾಂಧಿಯರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಈ ವಿಷಯದ ಕುರಿತು ನೋಟಿಸ್ ಜಾರಿ ಮಾಡಿತು.