Wednesday, July 6, 2022

ಕೊರೋನಾ ಸೋಂಕಿತರ ಸಾವು ತಡೆಯಲು ‘ಪ್ಲಾಸ್ಮಾ ಥೆರಪಿ’ ಪರಿಣಾಮಕಾರಿ

Follow Us

ಬೆಂಗಳೂರು: ‘ಪ್ಲಾಸ್ಮಾ ಥೆರಪಿ’ಯಿಂದ ಕೊರೋನಾ ಸೋಂಕಿತರ ಸಾವನ್ನು ತಡೆಯಬಹುದು, ಇದೊಂದು ಪರಿಣಾಮಕಾರಿ ವಿಧಾನ ಎಂದು ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿಯ ಹೊಣೆ ಹೊತ್ತಿರುವ ಎಚ್‌ಸಿಜಿ ಆಸ್ಪತ್ರೆಯ ಡಾ.ವಿಶಾಲ್‌ ರಾವ್‌ ಅಭಿಪ್ರಾಯಪಟ್ಟಿದ್ದಾರೆ.
ಆದರೆ ಪ್ಲಾಸ್ಮಾ ದಾನ ಮಾಡಲು ಮುಂದೆ ಬರುವವರ ಕೊರತೆ ತೀವ್ರವಾಗಿದೆ ಎಂದಿದ್ದಾರೆ. ‘ಯುಎನ್‌ಐ’ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅವರು, ಈವರೆಗೆ ಕೇವಲ 8 ಮಂದಿ ಮಾತ್ರ ಪ್ಲಾಸ್ಮಾ ದಾನ ಮಾಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ದಾನಿಗಳ ಸಂಖ್ಯೆ ಸಾಕಷ್ಟು ಕಡಿಮೆಯಿದೆ. ರೋಗಿಗಳು ಅವರದ್ದೇ ಆದ ಖಿನ್ನತೆ, ಆಯಾಸದಂತಹ ತೊಂದರೆಗಳನ್ನು ಎದುರಿಸುತ್ತಿರುತ್ತಾರೆ. ರೋಗಿಗಳು ಆಸ್ಪತ್ರೆಯಿಂದ ಗುಣಮುಖರಾಗಿ ಹೊರಬರುವಷ್ಟರಲ್ಲಿ ಸಾಕಷ್ಟು ಹೈರಾಣಾಗಿರುತ್ತಾರೆ. ಆದ್ದರಿಂದ ಹಲವು ತಕ್ಷಣ ಮುಂದೆ ಬಂದು ಪ್ಲಾಸ್ಮಾ ನೀಡಲು ಇಚ್ಛಿಸುವುದಿಲ್ಲ ಎಂದು ವಿಶಾಲ್ ರಾವ್ ತಿಳಿಸಿದ್ದಾರೆ.
ಕೊರೋನಾ ಸೋಂಕಿತರನ್ನು ರಕ್ಷಿಸಲು ಪ್ಲಾಸ್ಮಾ ಬ್ಯಾಂಕ್‌ ಸ್ಥಾಪನೆಗಾಗಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದು, ಅವರು ಕೂಡ ಉತ್ಸಾಹ ತೋರಿದ್ದಾರೆ. ಈ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಇದು ಜಾರಿಯಾದಲ್ಲಿ ಕರ್ನಾಟಕ ಪ್ಲಾಸ್ಮಾ ಬ್ಯಾಂಕ್‌ ಹೊಂದಿದ ನಾಲ್ಕನೇ ರಾಜ್ಯವಾಗಲಿದೆ ಎಂದು ಡಾ.ವಿಶಾಲ್ ರಾವ್ ಹೇಳಿದ್ದಾರೆ.
ಪ್ಲಾಸ್ಮಾ ದಾನಿಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಪ್ರತ್ಯೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ಲಾಸ್ಮಾ ದಾನಿಗಳಿಗೆ 5 ಸಾವಿರ ರೂ. ನೆರವು ನೀಡುವ ಯೋಜನೆಯನ್ನು ಕೇವಲ ಘೋಷಿಸಲಾಗಿದೆಯಷ್ಟೇ. ಆದರೆ, ಅದನ್ನು ಹೇಗೆ ಹಾಗೂ ಯಾವ ಮಾರ್ಗದ ಮೂಲಕ ವಿತರಿಸಬೇಕು ಎಂಬುದರ ಕುರಿತು ಇನ್ನೂ ಯೋಜನೆ ಸಿದ್ಧವಾಗಬೇಕಿದೆ ಎಂದು ವಿಶಾಲ್ ರಾವ್ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಫೈರಿಂಗ್ ರೇಂಜ್ ನಲ್ಲಿ ಆಕಸ್ಮಿಕ ಸ್ಫೋಟ: ಇಬ್ಬರು ಸೈನಿಕರಿಗೆ ಗಂಭೀರ ಗಾಯ

newsics.com ಶ್ರೀನಗರ: ಫೈರಿಂಗ್ ರೇಂಜ್ ನಲ್ಲಿ ಆಕಸ್ಮಿಕವಾಗಿ ಸ್ಫೋಟವಾದ ಹಿನ್ನೆಲೆ ಇಬ್ಬರು ಸೇನಾ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದಿದೆ. ಪೂಂಚ್...

ಮೋದಿ ಸಚಿವ ಸಂಪುಟದಲ್ಲಿದ್ದ ಮುಖ್ತಾರ್ ಅಬ್ಬಾಸ್ ನಖ್ವಿ, ಆರ್​​ಸಿಪಿ ಸಿಂಗ್ ರಾಜೀನಾಮೆ

newsics.com ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಮುಖ್ತಾರ್​ ಅಬ್ಬಾಸ್ ನಖ್ವಿ ಹಾಗೂ ಆರ್​​ಸಿಪಿ ಸಿಂಗ್ ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ಇಬ್ಬರು ಸಚಿವರ ರಾಜ್ಯಸಭಾ ಸದಸ್ಯ...

ಬೆಂಗಳೂರಿನಲ್ಲಿ 1,053 ಸೇರಿ ರಾಜ್ಯದಲ್ಲಿ 1,127 ಮಂದಿಗೆ ಕೊರೋನಾ ಸೋಂಕು

newsics.com ಬೆಂಗಳೂರು; ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1,127 ಮಂದಿಗೆ ಕೊರೋನಾ ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 39,75,000ಕ್ಕೆ ಏರಿಕೆಯಾಗಿದೆ. ಇಂದು ಯಾವುದೇ ಸಾವು ಸಂಭವಿಸಿಲ್ಲ, ಹೀಗಾಗಿ ಸಂಖ್ಯೆ 40080 ಇದೆ. ಬೆಂಗಳೂರು...
- Advertisement -
error: Content is protected !!