ಮನಾಲಿ: ಹಿಮಾಚಲ ಪ್ರದೇಶದ ಮನಾಲಿಯಿಂದ ಜಮ್ಮು ಕಾಶ್ಮೀರದ ಲೇಹ್ ಗೆ ಸಂಪರ್ಕ ಕಲ್ಪಿಸುವ ಅಟಲ್ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ದೇಶಕ್ಕೆ ಸಮರ್ಪಿಸಿದರು. ಹಲವು ಪ್ರಾಕೃತಿಕ ಸವಾಲುಗಳ ಮಧ್ಯೆ ಈ ಸುರಂಗ ಮಾರ್ಗವನ್ನು ನಿರ್ಮಿಸಲಾಗಿದೆ. ಇದು ಸಮುದ್ರ ಮಟ್ಟದಿಂದ 10000 ಅಡಿ ಎತ್ತರದಲ್ಲಿದೆ.3200 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸುರಂಗ ಮಾರ್ಗ ನಿರ್ಮಿಸಲಾಗಿದೆ.
ದೇಶದ ರಕ್ಷಣೆಯ ದೃಷ್ಟಿಯಿಂದ ಈ ಸುರಂಗ ಮಾರ್ಗ ವ್ಯೂಹಾತ್ಮಕ ಮಹತ್ವ ಪಡೆದುಕೊಂಡಿದೆ. ದೇಶದ ಗಡಿಗೆ ಯೋಧರನ್ನು ಕ್ಷಿಪ್ರ ಅವಧಿಯಲ್ಲಿ ರವಾನಿಸಲು ಇದರಿಂದ ಸಾಧ್ಯವಾಗಲಿದೆ.
2010ರಲ್ಲಿ ಈ ಸುರಂಗ ರಸ್ತೆಯ ಕಾಮಗಾರಿಗೆ ಚಾಲನೆ ನೀಡಲಾಗಿತ್ತು