newsics.com
ಬರ್ಮಿಂಗ್ಹ್ಯಾಮ್: ಕಾಮನ್ವೆಲ್ತ್ನಲ್ಲಿ 50 ಕೆಜಿ ಪ್ರೀ ಸ್ಟೈಲ್ ಕುಸ್ತಿ ವಿಭಾಗದಲ್ಲಿ ಪೂಜಾ ಗೆಹ್ಲೋಟ್ ಕಂಚಿನ ಪದಕ ಗೆದ್ದಿದ್ದಾರೆ.
ಸ್ಕಾಟ್ಲೆಂಡ್ನ ಕ್ರಿಸ್ಟೆಲ್ಲೆ ಲೆಮೊಫೆಕ್ ಅವರು ಪೂಜಾಗೆ ಆರಂಭದಲ್ಲಿ ಉತ್ತಮ ಹೋರಾಟ ನೀಡಿದರು. ಕೆಳಗೆ ಹಾಕುವ ಮೂಲಕ ಎರಡು ಅಂಕಗಳನ್ನು ಪಡೆದು ಪೂಜಾ ಮೇಲೆ ಒತ್ತಡ ಹೇರಲು ಬಯಸಿದ್ದರು. ನಂತರ ಪೂಜಾ ಅದ್ಭುತ ಪುನರಾಗಮನ ಮಾಡಿದರು.
ಎದುರಾಳಿಗೆ ಯಾವುದೇ ಅವಕಾಶವನ್ನು ನೀಡದೆ 10-2 ರಿಂದ ಮುನ್ನಡೆ ಸಾಧಿಸಿದರು. ಇದಾದ ಬಳಿಕ ಇನ್ನೆರಡು ಅಂಕಗಳನ್ನು ಪಡೆದು 10 ಅಂಕಗಳ ವ್ಯತ್ಯಾಸ ಮಾಡಿ ತಾಂತ್ರಿಕ ದಕ್ಷತೆಯ ಆಧಾರದ ಮೇಲೆ ಜಯ ಸಾಧಿಸಿದರು.
ಇದರೊಂದಿಗೆ ಅವರು ಕಂಚಿನ ಪದಕ ಗೆದ್ದಿದ್ದಾರೆ.