Thursday, December 9, 2021

ಲಾಕ್ ಡೌನ್ ವೇಳೆ ಪೋರ್ನ್ ಸೈಟ್ ವೀಕ್ಷಣೆ ಶೇ.95 ಹೆಚ್ಚಳ!

Follow Us

ನ್ಯೂಯಾರ್ಕ್/ನವದೆಹಲಿ: ಸಂಸ್ಕೃತದಲ್ಲಿ ಒಂದು ಮಾತಿದೆ- ‘ಕಾಮಾತುರಾಣಾಮ್ ನ ಲಜ್ಜಾಮ್ ನ ಭಯಂ’. ಲಾಕ್ ಡೌನ್ ಸಂದರ್ಭದಲ್ಲಿ ಈ ಮಾತು ಯಾಕೆ ಅಂದಿರಾ?
ಕೊರೋನಾ ಸೋಂಕಿನಿನಿಂದ ಇಡೀ ಜಗತ್ತಿನ ಜನರೆಲ್ಲ ಜೀವಭಯದಿಂದ ನರಳುತ್ತಿದ್ದರೂ ಅಶ್ಲೀಲ ಚಿತ್ರಗಳನ್ನು ನೋಡಿ ಖುಷಿಪಟ್ಟಿದ್ದಾರೆ ಎಂಬುದು ಪೋರ್ನ್ ಹಬ್ ವರದಿಯಿಂದ ದೃಢಪಟ್ಟಿದೆ.
ಲಾಕ್ ಡೌನ್ ಸಮಯದಲ್ಲಿ ಅಶ್ಲೀಲ ಚಿತ್ರಗಳ ವೀಕ್ಷಣೆ ಪ್ರಮಾಣದಲ್ಲಿ ಶೇ.95ರಷ್ಟು ಹೆಚ್ಚಳವಾಗಿದೆ. ಮನರಂಜನೆಗಾಗಿಯೋ ಅಥವಾ ಬೇಸರ ಕಳೆಯುವುದಕ್ಕೋ, ಹೇಗಾದರೂ ಸಮಯ ದೂಡುವುದಕ್ಕೋ ಗೊತ್ತಿಲ್ಲ. ಆದರೆ ಹಲವರು ಅಶ್ಲೀಲ ಚಿತ್ರಗಳನ್ನಂತೂ ಯಥೇಚ್ಛವಾಗಿಯೇ ನೋಡಿದ್ದಾರೆ.
ಪೋರ್ನ್ ಹಬ್ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಮಾ.24ರಂದು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಲಾಕ್ ಡೌನ್ ಮಾಡಿದ ಬಳಿಕ ಪೋರ್ನ್ ವೆಬ್ ಸೈಟ್ ಗಳ ವೀಕ್ಷಣೆ ಪ್ರಮಾಣದಲ್ಲಿ ಬಹುಪಟ್ಟು ಏರಿಕೆ ಕಂಡಿದೆ ಎಂದು ಹೇಳಿದೆ.
ಭಾರತದಲ್ಲಿ ಮಾ.24ರಂದು ಪೋರ್ನ್ ಸೈಟ್ ಗಳ ವೀಕ್ಷಣೆ ಪ್ರಮಾಣ ಶೇ.23ರಷ್ಟಿತ್ತು. ಮಾ.27ರಂದು ಈ ಪ್ರಮಾಣ ಶೇ.95ಕ್ಕೆ ಗಣನೀಯ ಏರಿಕೆ ಕಂಡಿದೆ. ಬಳಿಕ ಈ ಪ್ರಮಾಣದಲ್ಲಿ ಸ್ವಲ್ಪ ಕುಸಿತ ಕಂಡಿದೆ. ಏಪ್ರಿಲ್ 1ರಂದು ಈ ಪ್ರಮಾಣ ಶೇ.64ಕ್ಕೆ ಕುಸಿದಿದೆ.
ಇದು ಕೇವಲ ಭಾರತದ ಕತೆಯಲ್ಲ. ಅಮೆರಿಕ, ಇಂಗ್ಲೆಂಡ್, ಇಟಲಿ, ಸ್ಪೇನ್ ಮತ್ತು ರಷ್ಯಾ ಸೇರಿ ಹಲವು ದೇಶಗಳಲ್ಲಿ ಅಶ್ಲೀಲ ವೀಕ್ಷಣೆ ಪ್ರಮಾಣ ಹೆಚ್ಚಾಗಿದೆ. ಆದರೆ ಭಾರತದಲ್ಲಿ ಮಾತ್ರ ಇದು ದಾಖಲೆ ಮಟ್ಟದಲ್ಲಿ ಜಿಗಿತ ಕಂಡಿದೆ. ಜನರನ್ನು ಮನೆಯಲ್ಲಿಯೇ ಉಳಿಯುವಂತೆ ಮಾಡುವಲ್ಲಿ ನಮ್ಮ ಫ್ರೀ ಪೋರ್ನ್ ಸೌಲಭ್ಯ ಸಹಕಾರಿಯಾಗಿದೆ ಎಂದು ಪೋರ್ನ್‌ ಹಬ್‌ನ ಉಪಾಧ್ಯಕ್ಷ ಕೋರೆ ಪ್ರೈಸ್ ಹೇಳಿಕೊಂಡಿದ್ದಾರೆ.
ಕೊರೋನಾದಿಂದ ವಿವಿಧ ದೇಶಗಳಲ್ಲಿ ದೊಡ್ಡ ಪ್ರಮಾಣದ ಸೋಂಕು ಮತ್ತು ಸಾವು ಆರಂಭಗೊಂಡಾಗ ಪೋರ್ನ್‌ ಹಬ್ ಆರಂಭದಲ್ಲಿ ಇಟಲಿ, ಅಮೆರಿಕ ಮತ್ತು ಸ್ಪೇನ್‌ ನಲ್ಲಿ ಒಂದು ತಿಂಗಳವರೆಗೆ ಉಚಿತ ಪ್ರೀಮಿಯಂ ಚಂದಾದಾರಿಕೆ ನೀಡಿತು. ಕೊರೋನಾ ಎಲ್ಲೆಡೆ ಹರಡುತ್ತಿದ್ದಂತೆ ಉಚಿತ ಪ್ರೀಮಿಯಂ ಚಂದಾದಾರಿಕೆಯನ್ನು ಭಾರತವೂ ಸೇರಿ ಎಲ್ಲ ದೇಶಗಳಿಗೂ ವಿಸ್ತರಿಸಲಾಯಿತು ಎಂದು ಕೋರೆ ಪ್ರೈಸ್ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡ: ಸಂಸದ ಸುಬ್ರಮಣಿಯನ್ ಸ್ವಾಮಿ ಶಂಕೆ, ತನಿಖೆಗೆ ಆಗ್ರಹ

newsics.com ನವದೆಹಲಿ: ಸೇನಾ ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡವಿದೆಯಾ ಎಂಬ ಸಂಶಯವನ್ನು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ವ್ಯಕ್ತಪಡಿಸಿದ್ದಾರೆ. ಇದೊಂದು ಗಂಭೀರ ದುರಂತವಾಗಿದ್ದು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ...

ಪ್ರಧಾನಮಂತ್ರಿ ಆವಾಜ್ ಯೋಜನೆ 3 ವರ್ಷ ವಿಸ್ತರಣೆ: ಕೇಂದ್ರ ನಿರ್ಧಾರ

newsics.com ನವದೆಹಲಿ: ಮೂರು ವರ್ಷ ಕಾಲ ಪ್ರಧಾನಮಂತ್ರಿ ಆವಾಜ್‌ ಯೋಜನೆ (ಗ್ರಾಮೀಣ) ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶದ ಗ್ರಾಮೀಣ ಪ್ರದೇಶದಲ್ಲಿ ಅರ್ಹರಿಗೆ ವಸತಿ ಕಲ್ಪಿಸುವ ಈ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಪ್ರಧಾನಿ...

ದೆಹಲಿಯಲ್ಲಿ ಶುಕ್ರವಾರ ರಾವತ್ ದಂಪತಿ ಅಂತ್ಯಕ್ರಿಯೆ, ಉತ್ತರಾಖಂಡದಲ್ಲಿ 3 ದಿನ ಶೋಕಾಚರಣೆ

newsics.com ನವದೆಹಲಿ: ತಮಿಳುನಾಡಿನಲ್ಲಿ ನಡೆದಿರುವ ಸೇನಾ ಹೆಲಿಕಾಪ್ಟರ್ ಪತನದಲ್ಲಿ ನಿಧನರಾಗಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಅವರ ಅಂತ್ಯಕ್ರಿಯೆ ಶುಕ್ರವಾರ(ಡಿ.10) ನಡೆಯಲಿದೆ. ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾಗಿರುವ ಮೂರು ಸೇನಾ ಪಡೆಗಳ...
- Advertisement -
error: Content is protected !!