Thursday, December 7, 2023

ಋತುಮಾನಕ್ಕೆ ತಕ್ಕಂತೆ ಕೊರೋನಾ ಬದಲಾಗುವ ಸಾಧ್ಯತೆ- ವಿಜ್ಞಾನಿಗಳ ಅಭಿಮತ

Follow Us

newsics.com
ವಾಷಿಂಗ್ಟನ್: ಸಮಶೀತೋಷ್ಣ ವಲಯ ದೇಶಗಳಲ್ಲಿ ಕೊರೋನಾ ಋತುಮಾನಕ್ಕೆ ತಕ್ಕಂತೆ ಬದಲಾಗುವ ಸಾಧ್ಯತೆ ಇದೆ. ಭಾರತದಂತಹ ಉಷ್ಣ ವಲಯದ ದೇಶಗಳಲ್ಲಿ ವರ್ಷಪೂರ್ತಿ ಕೊರೋನಾ ಇರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಸಮಶೀತೋಷ್ಣ ವಲಯದಲ್ಲಿ ಹಲವು ಉಸಿರಾಟದ ವೈರಸ್ ಗಳು ಋತುಮಾನದ ಮಾದರಿಗಳನ್ನು ಅನುಸರಿಸುತ್ತವೆ. ಇನ್ ಫ್ಲುಯೆಂಜಾ ಮತ್ತು ಸಾಮಾನ್ಯ ಶೀತಕ್ಕೆ ಕಾರಣವಾಗುವ ಹಲವು ಬಗೆಯ ಕೊರೋನಾ ವೈರಸ್ ಗಳು ಚಳಿಗಾಲದಲ್ಲಿ ಸಮಶೀತೋಷ್ಣ ವಲಯದಲ್ಲಿ ಉತ್ತುಂಗಕ್ಕೆ ಏರಿದರೆ, ಉಷ್ಣವಲಯದ ಪ್ರದೇಶಗಳಲ್ಲಿ ವರ್ಷಪೂರ್ತಿ ಹರಡುತ್ತವೆ ಎಂದಿದ್ದಾರೆ.
ಫ್ಲೂನಂತಹ ಇತರ ಉಸಿರಾಟದ ವೈರಸ್ ಗಳಿಗೆ ಹೋಲಿಸಿದರೆ, COVID-19 ಹೆಚ್ಚಿನ ಪ್ರಸರಣ ದರವನ್ನು (R0) ಹೊಂದಿದೆ. ಬೇಸಿಗೆಯನ್ನೂ ಲೆಕ್ಕಿಸದೆ ಕೊಲ್ಲಿ ರಾಷ್ಟ್ರಗಳಲ್ಲಿ ಗರಿಷ್ಠ ಜಾಗತಿಕ COVID-19 ಸೋಂಕಿನ ಪ್ರಮಾಣ ದಾಖಲಾಗಿದೆ ಎಂದು ದೋಹಾದಲ್ಲಿರುವ ಕತಾರ್ ವಿಶ್ವವಿದ್ಯಾಲಯದ ಸಹಲೇಖಕ ಡಾ. ಹಾದಿ ಯಾಸಿನೆ ಹೇಳಿದ್ದಾರೆ.
ರೋಗ ನಿರೋಧಕ ಶಕ್ತಿಯನ್ನು ಪಡೆದಾಗ ಮಾತ್ರ ಕೊರೋನಾ ಹಿಮ್ಮೆಟ್ಟಿಸಬಹುದು. ಆಗ ಸಾರ್ವಜನಿಕ ಆರೋಗ್ಯದಲ್ಲಿ ಸಮತೋಲ ಉಂಟಾಗಲು ಸಾಧ್ಯವಿದೆ ಎಂದು ಲೆಬನಾನ್ ನ ಅಮೆರಿಕನ್ ಯೂನಿವರ್ಸಿಟಿ ಆಫ್ ಬೀರುತ್’ನ ಹಿರಿಯ ಲೇಖಕ ಡಾ.ಹಸನ್ ಜಾರಕೇಟ್ ಹೇಳಿದ್ದಾರೆ. ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡುವುದು, ಕೈ ಸ್ವಚ್ಛತೆ ಮತ್ತು ಸಭೆಗಳಿಂದ ದೂರವಿರುವುದರಿಂದ ಕೊರೋನಾದಿಂದ ಬಚಾವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಗಾಳಿ ಮತ್ತು ಮೇಲ್ಮೈಗಳಲ್ಲಿ ವೈರಸ್ ನ ಬದುಕುಳಿಯುವಿಕೆ, ಸೋಂಕುಗಳಿಗೆ ಜನರು ತುತ್ತಾಗುವ ಸಾಧ್ಯತೆ, ಮತ್ತು ಒಳಾಂಗಣ ಜನಸಂದಣಿಯಂತಹ ಮಾನವ ನಡವಳಿಕೆಗಳು ತಾಪಮಾನ ಮತ್ತು ಆರ್ದ್ರತೆಯ ಬದಲಾವಣೆಗಳಿಂದಾಗಿ ಋತುಗಳಲ್ಲಿ ವ್ಯತ್ಯಾಸಗೊಳ್ಳುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.

ಬೆಂಗಳೂರಿನಲ್ಲಿ 3322, ರಾಜ್ಯದಲ್ಲಿ 8191 ಮಂದಿಗೆ ಕೊರೋನಾ, 101 ಜನ ಸಾವು

ಕೊರೋನಾ ನಿಲ್ಲಲ್ಲ; ಆನ್ಲೈನ್ ಸಂಕಷ್ಟವೂ…

ಮತ್ತಷ್ಟು ಸುದ್ದಿಗಳು

vertical

Latest News

ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ ಪೊಲೀಸ್ ವಶಕ್ಕೆ

Newsics.com ಕಲಬುರಗಿ : ಅಪಘಾತವನ್ನು ಕೊಲೆ ಯತ್ನ ಎಂದು ಕಥೆ ಕಟ್ಟಿದ್ದ ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್​ ರನ್ನ ನಗರ ಠಾಣೆಯ ಪೊಲೀಸರು ಮತ್ತೆ ವಶಕ್ಕೆ...

ನಂದಿನಿ ಹಾಲಿನ ದರ ಮತ್ತೆ ಏರಿಕೆ..!!

Newsics.com ಬೆಂಗಳೂರು :  ರಾಜ್ಯದ ಜನತೆಗೆ ಮತ್ತೊಂದು ದರ ಏರಿಕೆಯ ಬಿಸಿ ಕಾದಿದೆ. ಹೌದು, ನಂದಿನಿ ಹಾಲಿನ ದರ ಪರಿಷ್ಕರಣೆಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ (KMF) ಚಿಂತನೆ ನಡೆಸಿದೆ. ಈ ಕುರಿತು ಜನವರಿಯಲ್ಲಿ...

ಚಿನ್ನ, ಜಮೀನು, ಬಿಎಂಡಬ್ಲ್ಯೂ ಕಾರಿಗೆ ಬೇಡಿಕೆ : ಕೇರಳದ ವೈದ್ಯೆ ಆತ್ಮಹತ್ಯೆ

Newsics.com ಕೇರಳ : ಕೇರಳದ ತಿರುವನಂತಪುರಂ ಮೆಡಿಕಲ್ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಸ್ನಾತಕೋತ್ತರ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಆತ್ಮಹತ್ಯೆಗೆ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಮೃತ ವೈದ್ಯಳನ್ನು...
- Advertisement -
error: Content is protected !!