Tuesday, March 9, 2021

ಭಾರತದಲ್ಲೂ ಶಕ್ತಿಯುತ ಹೊಸ ಕೊರೋನಾ ವೈರಸ್ ಪತ್ತೆ

newsics.com
ನವದೆಹಲಿ: ಬ್ರಿಟನ್’ನಲ್ಲಿ ಪತ್ತೆಯಾದ ಕೊರೋನಾ ವೈರಸ್’ನ ಶೇ.70ರಷ್ಟು ಹೆಚ್ಚಿನ ಹರಡುವ ರೂಪಾಂತರಿತ ತಳಿಯೊಂದು ಭಾರತದಲ್ಲಿ ಪತ್ತೆಯಾಗಿದೆ.
ಭಾರತದಲ್ಲಿ ಈ ಹೊಸ ರೂಪಾಂತರದ ಕೊರೊನಾವೈರಸ್ ಪತ್ತೆಯಾಗಿದ್ದು, ಸಾಂಕ್ರಾಮಿಕ ರೋಗಹರಡುವ ಲಕ್ಷಣಗಳು ಕಂಡುಬಂದಿವೆ.
ಆಂಧ್ರಪ್ರದೇಶ ಸೇರಿ ಭಾರತದ ವಿವಿಧ ಭಾಗಗಳಲ್ಲಿ ಎನ್440ಕೆ ಹೆಸರಿನ COVID-19 ನ ಮತ್ತೊಂದು ರೂಪಾಂತರವನ್ನು ಪತ್ತೆ ಹಚ್ಚಲಾಗಿದೆ ಎನ್ನಲಾಗಿದೆ. ಆಂಧ್ರಪ್ರದೇಶದ ಶೇ.34 ಪ್ರದೇಶಗಳಲ್ಲಿ ಈಗಾಗಲೇ ಈ ವೈರಸ್ ಹರಡಿದೆ ಎಂದು ತಜ್ಞರು ಹೇಳಿದ್ದಾರೆ.
ಭಾರತದಲ್ಲಿ ಸಂಶೋಧಕರು ದೇಶದಲ್ಲಿ ಹರಡಿರುವ ರೂಪಾಂತರಿತ ವೈರಸ್ ಪತ್ತೆ ಮಾಡಿದ್ದಾರೆ. ಅವುಗಳಲ್ಲಿ N440K ಎಂಬ ರೂಪಾಂತರವು ಆಂಧ್ರಪ್ರದೇಶದಲ್ಲಿ ವಿಶ್ಲೇಷಿಸಲ್ಪಟ್ಟ 272 ಕೊರೋನಾ ವೈರಸ್ ಗಳ ಪೈಕಿ ಸುಮಾರು 34 ಪ್ರತಿಶತದಷ್ಟು ಭಾಗದಲ್ಲಿ ಕಂಡುಬಂದಿದೆ ಎನ್ನಲಾಗಿದೆ. ಅಧ್ಯಯನದಲ್ಲಿ ಭಾಗವಹಿಸಿದ ಸಂಶೋಧಕರು 6,370 ಭಾರತೀಯ ಕೊರೋನಾ ವೈರಸ್ ಜೀನೋಮ್‌ಗಳನ್ನು ವಿಶ್ಲೇಷಿಸಿದ್ದಾರೆ. ದೇಶದಲ್ಲಿ ಎರಡು ಜೀನೋಮ್ N440K ರೂಪಾಂತರವನ್ನು ಹೊಂದಿದೆ ಎಂದು ಹೇಳಲಾಗಿದೆ.
ಸಂಶೋಧಕರ ಪ್ರಕಾರ, N440K ರೂಪಾಂತರವು ಜುಲೈನಲ್ಲಿ ಏಷ್ಯಾದಲ್ಲಿ ಕಂಡುಬಂದಿದ್ದು. ಈ ರೂಪಾಂತರಿತ ವೈರಸ್‌ನ ನಿಖರವಾದ ಮೂಲದ ಬಗ್ಗೆ ಸಂಶೋಧಕರು ಇನ್ನೂ ಸ್ಪಷ್ಟವಾಗಿಲ್ಲ. ಈ ರೂಪಾಂತರಿತ ವೈರಸ್‌ನ ಸಾಮರ್ಥ್ಯವನ್ನು ನಿರ್ಧರಿಸಲು ಸಂಶೋಧಕರು ಈವರೆಗೆ ಸಫಲರಾಗಿಲ್ಲ. N440K ಆಂಧ್ರದ ಒಂದು ದೊಡ್ಡ ಗುಂಪಿನಲ್ಲಿ ಕಂಡುಹಿಡಿಯಲ್ಪಟ್ಟಿರುವುದರಿಂದ, ಈ ರೂಪಾಂತರವು ಆಂಧ್ರಪ್ರದೇಶದಲ್ಲಿ ಅತ್ಯಂತ ಪ್ರಬಲ ತಳಿಯಾಗಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಚೀನಿಯರ ಪ್ರವೇಶಕ್ಕೆ ಅನೌಪಚಾರಿಕ ನಿಷೇಧ ಹೇರಿದ ಭಾರತ

ವುಹಾನ್​ನ ಕೊರೋನಾ ವರದಿ ಮಾಡಿದ್ದ ಮಹಿಳೆಗೆ 4 ವರ್ಷ ಜೈಲು

ಬ್ರಿಟನ್’ನಿಂದ ಬೆಂಗಳೂರಿಗೆ ಬಂದ 26 ಮಂದಿಗೆ ಕೊರೋನಾ ಸೋಂಕು- ಸಚಿವ

ಮತ್ತಷ್ಟು ಸುದ್ದಿಗಳು

Latest News

ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ಸಾಧ್ಯತೆ

newsics.com ಡೆಹ್ರಾಡೂನ್:  ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ನೀಡುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಸಂಜೆ ನಾಲ್ಕು ಗಂಟೆಗೆ ಅವರು ರಾಜ್ಯಪಾಲರನ್ನು ಭೇಟಿ...

ಕೊರೋನಾ ಲಸಿಕೆ ಪಡೆದ 48 ಗಂಟೆ ತನಕ ವಿಮಾನ ಚಲಾಯಿಸುವಂತಿಲ್ಲ

newsics.com ನವದೆಹಲಿ:  ಕೊರೋನಾ ಲಸಿಕೆ ಸ್ವೀಕಾರ ಸಂಬಂಧ ವಿಮಾನಯಾನ ಸಿಬ್ಬಂದಿಗೆ ನಾಗರಿಕ ವಿಮಾನಯಾನ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ವಿಮಾನದ ಪೈಲಟ್ ಮತ್ತು ಇತರ ಸಿಬ್ಬಂದಿ ಕೊರೋನಾ ಲಸಿಕೆ ಪಡೆದಿದ್ದರೆ ಇದನ್ನು ಕಟ್ಟು ನಿಟ್ಟಾಗಿ...

ಧೂಪದ ಮರ ಕಡಿಯುವಾಗ ಸಿಲುಕಿ ಮೂವರು ಯುವಕರ ಸಾವು

newsics.comಮಂಗಳೂರು: ಧೂಪದ ಮರ‌ ಕಡಿಯುವ ವೇಳೆ ಮೂವರು ಮರದಡಿ ಸಿಲುಕಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಟ್ರಮೆ ಸಮೀಪ ಮಂಗಳವಾರ ನಡೆದಿದೆ.ಪಟ್ರಮೆ ಗ್ರಾಮದ ಅನಾರು ಬಳಿ‌...
- Advertisement -
error: Content is protected !!