ಚಿಕ್ಕಮಗಳೂರು: ಕಳೆದ ವಾರ ಸುರಿದ ಅಕಾಲಿಕ ಮಳೆಯಿಂದಾಗಿ ಅವಧಿಗೂ ಮುನ್ನವೇ ಕಾಫಿ ಹೂವು ಅರಳಿದೆ. ಇದರಿಂದ ಕಾಫಿ ಬೆಳೆಗಾರರು ಆತಂಕಗೊಂಡಿದ್ದಾರೆ.
ಸಾಧಾರಣವಾಗಿ ಏಪ್ರಿಲ್-ಮೇ ತಿಂಗಳಿನಲ್ಲಿ ಕಾಫಿ ತೋಟದಲ್ಲಿ ಕಂಡುಬರುತ್ತಿದ್ದ ಕಾಫಿ ಹೂಗಳು ಈಗಲೇ ಅರಳಿನಿಂತಿವೆ.
ಕಳೆದ ವಾರ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಗಬ್ಗಲ್, ಸಾರಗೋಡು, ತಲಗೋಡು ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಮಳೆ ಸುರಿದ ಪರಿಣಾಮ ಕಾಫಿ ಹೂಗಳು ಅರಳಿವೆ. ಇದರಿಂದಾಗಿ ಕಾಫಿ ಹಣ್ಣುಗಳನ್ನು ಕೊಯ್ಯುವುದೂ ಕಷ್ಟವಾಗಿದೆ. ಅಷ್ಟೇ ಅಲ್ಲ, ಈಗ ಅರಳಿರುವ ಕಾಫಿ ಹೂ ಜುಲೈ, ಸೆಪ್ಟೆಂಬರ್ ವೇಳೆಗೆ ಸಂಪೂರ್ಣ ಉದುರಿ ಹೋಗುತ್ತದೆ. ಹಾಗಾಗಿ ಮುಂದಿನ ಬಾರಿಯ ಫಸಲಿಗೂ ಅಕಾಲಿಕ ಮಳೆ ಪೆಟ್ಟು ಕೊಟ್ಟಿದೆ.