newsics.com
ಭುವನೇಶ್ವರ: ಆದಿವಾಸಿ ಮಹಿಳೆ, ಸಂತಾಲ್ ಸಮುದಾಯದ ದ್ರೌಪದಿ ಮುರ್ಮು ಇನ್ನು 29 ದಿನಕ್ಕೆ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಪದವಿಗೇರುವುದು ಬಹುತೇಕ ಖಚಿತವಾಗಿದೆ.
ಮಂಗಳವಾರ ರಾತ್ರಿ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಿದ್ದಂತೆ ಮುರ್ಮು ಅವರಿಗೆ ಝಡ್ ಪ್ಲಸ್ ಭದ್ರತೆ ನೀಡಲಾಗಿದೆ. ಸೈನಿಕರ ಒಂದು ದಳವೇ ಅವರಿಗೆ ಭದ್ರತೆ ನೀಡುತ್ತಿದೆ.
ಬುಧವಾರ ಮುರ್ಮು ತಮ್ಮ ವಿಧಾನಸಭಾ ಕ್ಷೇತ್ರವಾದ ರಾಯರಂಗಪುರದ ಜಗನ್ನಾಥ ಹಾಗೂ ಶಿವ ದೇವಾಲಯಕ್ಕೆ ಭೇಟಿ ನೀಡಿದ್ದಲ್ಲದೆ, ಹೊರಜಗುಲಿಯಲ್ಲಿದ್ದ ನಂದಿ ಸುತ್ತಲಿನ ಸ್ಥಳ ಸ್ವಚ್ಚಗೊಳಿಸಿದರು. ದೇವಸ್ಥಾನದ ಆವರಣ ಸ್ವಚ್ಚಗೊಳಿಸಿ ದ್ರೌಪದಿ ಮುರ್ಮು ದೇವರ ದರ್ಶನವನ್ನೂ ಪಡೆದರು.
ಸೋಮವಾರ ಬಿಜೆಪಿ ಮಿತ್ರಪಕ್ಷಗಳು ರಾಷ್ಟ್ರಪತಿ ಚುನಾವಣೆಗೆ ದ್ರೌಪದಿ ಮುರ್ಮು ಅವರ ಹೆಸರನ್ನು ಅಂತಿಮಗೊಳಿಸಿದ ವಿಚಾರ ತಿಳಿಯುತ್ತಿದ್ದಂತೆ ದ್ರೌಪದಿ ಮುರ್ಮು ಕಣ್ಣೀರಾದರು.
ದೆಹಲಿಯಲ್ಲಿ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯ ಅಯ್ಕೆ ಸಭೆಗಳು ನಡೆಯುತ್ತಿದ್ದ ಹೊತ್ತಿನಲ್ಲಿ ಇದಾವುದರ ಪರಿವೆಯೇ ಇಲ್ಲದ ದ್ರೌಪದಿ ಮುರ್ಮು ಒಡಿಶಾದ ಮಯೂರ್ಭಂಜ್ನ ಮಹುಲ್ದಿಯಾದ ತಮ್ಮ ಮನೆಯಲ್ಲಿದ್ದರು. ದ್ರೌಪದಿ ಮುರ್ಮು ಅವರೊಂದಿಗೆ ಮಗಳು ಇತಿಶ್ರೀ ಕೂಡ ಇದ್ದರು.
ಸಂಜೆಯ ಹೊತ್ತಿಗೆ ಬಹುಶಃ ಪ್ರಧಾನಿ ಮೋದಿ ಅವರಿಂದಲೇ ಕರೆ ಬಂದಿರಬೇಕು. ಅವರು ಏನು ಹೇಳಿದರೋ ನನಗೆ ಗೊತ್ತಾಗಲಿಲ್ಲ. ಆದರೆ, ಅವರ ಮಾತಿನಿಂದ ಅಮ್ಮ ಶಾಂತವಾಗಿ ನಿಂತಿದ್ದರು. ಆಕೆಯ ಕಣ್ಣಲ್ಲಿ ನೀರಿತ್ತು. ಯಾರೊಂದಿಗೂ ಏನನ್ನೂ ಮಾತನಾಡಿರಲಿಲ್ಲ. ಕೆಲ ಸಮಯದ ಬಳಿಕ, ದೂರವಾಣಿ ಕರೆಯಲ್ಲೇ ತುಂಬಾ ಕಷ್ಟದಲ್ಲೇ ಥ್ಯಾಂಕ್ಯು ಎಂದು ಹೇಳಿದರು’ ಎಂದು ದ್ರೌಪದಿ ಮುರ್ಮು ಮಗಳು ಇತಿಶ್ರಿ ಹೇಳಿದ್ದಾರೆ.
ನನ್ನ ಪಾಲಿಗೆ, ಬುಡಕಟ್ಟು ಜನರ ಪಾಲಿಗೆ ಕೊನೆಗೆ ಮಹಿಳೆಯರ ಪಾಲಿಗೆ ಇದು ಐತಿಹಾಸಿಕವಾದದ್ದು ಎಂದು ದ್ರೌಪದಿ ಮುರ್ಮು ಹೇಳಿದರು. ಇದೊಂದು ಐತಿಹಾಸಿಕ ಕ್ಷಣ. ಹುಲ್ಲಿನ ಗುಡಿಸಲಲ್ಲಿ ಇದ್ದ ನಾನು ದೇಶದ ಉನ್ನತ ಪದವಿಗೇರೋದು ಕನಸಿನಲ್ಲಿ ಮಾತ್ರ. ಆದರೆ, ಅದೀಗ ನಿಜವಾಗಿದೆ. ನಮ್ಮ ಬುಡಕಟ್ಟು ಜನಾಂಗದವರು ಕನಸಿನಲ್ಲೂ ಕೂಡ ಇದನ್ನು ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.
#WATCH | Odisha: NDA's Presidential candidate Draupadi Murmu offers prayers at Rairangpur Jagannath Temple pic.twitter.com/qqUAEY9xWB
— ANI (@ANI) June 22, 2022
ಬಾಳೆಹಣ್ಣೆಂದು ತಿಂದೀರಿ ಜೋಕೆ..! ಇದು ಮಡಚಿದರೆ ಬಾಳೆ ಹಣ್ಣು, ಬಿಡಿಸಿದರೆ ಛತ್ರಿ