newsics.com
ನವದೆಹಲಿ: ವಿವಾದಿತ ‘ಮೂರು ಕೃಷಿ ವಿಧೇಯಕ’ಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ.
ಪಂಜಾಬ್, ಹರಿಯಾಣ ಸೇರಿ ದೇಶದ ಹಲವೆಡೆ ರೈತರ ಪ್ರತಿಭಟನೆಗೆ ಕಾರಣವಾಗಿರುವ ವಿವಾದಿತ ಕೃಷಿ ವಿಧೇಯಕಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಸೂಚಿಸಿದ್ದಾರೆ.
ಕೃಷಿ ಮಸೂದೆಯಿಂದ ರೈತರಿಗೆ ಲಾಭ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಅಭಿಮತ
ರೈತರ ಮತ್ತು ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ- 2020 ಹಾಗೂ ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ವಿಧೇಯಕ-2020 ಕ್ಕೆ ಸಂಸತ್ತಿನಲ್ಲಿ ಅನುಮೋದನೆ ನೀಡಿತ್ತು. ಇದಲ್ಲದೆ. ಮತ್ತೊಂದು ಕೃಷಿ ವಿಧೇಯಕವನ್ನು ಸಂಸತ್ ನಲ್ಲಿ ಅಂಗೀಕರಿಸಲಾಗಿತ್ತು.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ವಿರೋಧ: ನಾಳೆ ರೈತ ಸಂಘಟನೆಗಳಿಂದ ಬಂದ್ ಕರೆ
ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಸಂಸತ್’ನಲ್ಲಿ ಅಂಗೀಕರಿಸಲಾಗಿದ್ದ ಮೂರು ಕೃಷಿ ವಿಧೇಯಕಗಳನ್ನು ಕೇಂದ್ರ ಸರ್ಕಾರ ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಿ ಕೊಟ್ಟಿತ್ತು. ಇಂತಹ ಮೂರು ವಿವಾಧಿತ ಕೃಷಿ ವಿಧೇಯಕ ತಿದ್ದುಪಡಿಗೆ ರಾಷ್ಟ್ರಪತಿ ರಾಮಾನಾಥ ಕೋವಿಂದ್ ಸಹಿ ಹಾಕಿದ್ದಾರೆ.
ಸಿಹಿ ತಿಂಡಿಗಳ ಮೇಲೂ ಗುಣಮಟ್ಟದ ಸೂಚಕ ಕಡ್ಡಾಯ
ಮಾಜಿ ಕೇಂದ್ರ ಸಚಿವ ಹಿರಿಯ ರಾಜಕಾರಣಿ ಜಸ್ವಂತ್ ಸಿಂಗ್ ಇನ್ನಿಲ್ಲ