ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿ ಮುಖೇಶ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ತಳ್ಳಿಹಾಕಿದ್ದಾರೆ. ನಾಲ್ಕು ಮಂದಿ ಅಪರಾಧಿಗಳ ಪೈಕಿ ಕೇವಲ ಮುಖೇಶ್ ಮಾತ್ರ ರಾಷ್ಟ್ರಪತಿ ಅವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ. ಇದೀಗ ರಾಷ್ಟ್ರಪತಿ ಕೂಡ ಕ್ಷಮಾದಾನ ಅರ್ಜಿ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆ ಜಾರಿಗೆ ಹಾದಿ ಸುಗಮವಾಗಿದೆ.