Wednesday, July 6, 2022

ಬಣ್ಣದಲ್ಲೂ, ರೂಪದಲ್ಲೂ ಬದಲಾಗಲಿದೆ ಪ್ರಧಾನಿ ವೆಬ್‌ಸೈಟ್

Follow Us

♦ ಕನ್ನಡದ ಸೇರಿ 22 ಭಾರತೀಯ, ವಿಶ್ವಸಂಸ್ಥೆಯ 6 ಅಧಿಕೃತ ಭಾಷೆಗಳಲ್ಲಿ ಲಭ್ಯ

ನವದೆಹಲಿ: ಪ್ರಧಾನಮಂತ್ರಿಯವರ ವೆಬ್‌ಸೈಟ್ ಬದಲಾಗಲಿದೆ. ಹೊಸ ಬಣ್ಣದಲ್ಲಿ ಕಾಣಿಸಿಕೊಳ್ಳಲಿದೆ. ಅಷ್ಟೇ ಅಲ್ಲ, ಈ ವೆಬ್ ಸೈಟ್ ಕನ್ನಡಲ್ಲೂ ಸಿಗಲಿದೆ.
ಹೌದು, ಪ್ರಧಾನಮಂತ್ರಿಯವರ ಅಧಿಕೃತ ವೆಬ್‌ಸೈಟ್ pmindia.gov.in ಬದಲಾಗುತ್ತಿದೆ. ಸರ್ಕಾರ ಹೊರಡಿಸಿರುವ ಪ್ರಸ್ತಾವನೆಯ ಪ್ರಕಾರ, ಬದಲಾಗಲಿರುವ ವೆಬ್‌ಸೈಟ್ ಅನ್ನು ವಿಶ್ವಸಂಸ್ಥೆಯ 6 ಅಧಿಕೃತ ಭಾಷೆಗಳಲ್ಲಿ ಮತ್ತು 22 ಭಾರತೀಯ ಭಾಷೆಗಳಲ್ಲಿ ವೀಕ್ಷಿಸಬಹುದು.
ಈಗ ಭಾರತದ ಪ್ರಧಾನಮಂತ್ರಿಯವರ ವೆಬ್‌ಸೈಟ್ 12 ಭಾಷೆಗಳಲ್ಲಿ ಲಭ್ಯವಿದೆ. ಈ ಪ್ರಸ್ತಾಪದಲ್ಲಿ ಅರೇಬಿಕ್, ಚೈನೀಸ್, ಇಂಗ್ಲಿಷ್, ಫ್ರೆಂಚ್, ರಷ್ಯನ್ ಮತ್ತು ಸ್ಪ್ಯಾನಿಷ್ ಸೇರಿವೆ. ಅಸ್ಸಾಮೀಸ್, ಬಂಗಾಳಿ, ಬೋಡೋ, ಡೋಗ್ರಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ಸಂಸ್ಕೃತ, ಸಂತಾಲಿ, ಸಿಂಧಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಯಲ್ಲಿ ಸಿಗಲಿದೆ.

ನೌಕರರನ್ನು ವಜಾಗೊಳಿಸುವುದಿಲ್ಲ ಎಂದ ಏರ್ ಇಂಡಿಯಾ

ರಾಷ್ಟ್ರೀಯ ಇ-ಆಡಳಿತ ವಿಭಾಗ (ಎನ್‌ಜಿಡಿ) ನೀಡಿದ ಆರ್‌ಎಫ್‌ಪಿ ಪ್ರಕಾರ, ವೆಬ್‌ಸೈಟ್‌ಗಳ ವಿನ್ಯಾಸ, ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಅರ್ಹ ಮತ್ತು ಅನುಭವಿ ಏಜೆನ್ಸಿಯನ್ನು ನೇಮಿಸಿಕೊಳ್ಳಲು ಸರ್ಕಾರ ಬಯಸಿದೆ. ವೆಬ್‌ಸೈಟ್ ಅಭಿವೃದ್ಧಿ ಮತ್ತು ನಿರ್ವಹಣೆ ಜೊತೆಗೆ 22 ಅಧಿಕೃತ ಭಾರತೀಯ ಭಾಷೆಗಳು ಸೇರಿದಂತೆ ವಿಶ್ವಸಂಸ್ಥೆಯ ಆರು ಅಧಿಕೃತ ಭಾಷೆಗಳಲ್ಲಿ ಪಿಎಂ ಇಂಡಿಯಾ ಪೋರ್ಟಲ್ ಅನ್ನು ರಚಿಸುವ ಅಗತ್ಯವಿದೆ ಎಂದು ಎನ್‌ಜಿಡಿ ಅಭಿಪ್ರಾಯಪಟ್ಟಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಚಾಕಲೇಟ್ ಕವರ್ ನಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್: ನಾಲ್ವರ ಸೆರೆ

newsics.com ಬೆಂಗಳೂರು:  ವಿದ್ಯಾರ್ಥಿಗಳಿಗೆ ಚಾಕಲೇಟ್ ಕವರ್ ನಲ್ಲಿ ಅಡಗಿಸಿ ಡ್ರಗ್ಸ್ ಪೂರೈಸುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರಿನ  ಆವಲ ಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು  ಮೊಹಮ್ಮದ್ ಅಸ್ಲಾಂ, ...

ಒಟಿಪಿ ನೀಡುವ ವಿಷಯಕ್ಕೆ ಜಗಳ: ಪ್ರಯಾಣಿಕನ ಹತ್ಯೆ ಮಾಡಿದ ಕ್ಯಾಬ್ ಚಾಲಕ

newsics.com ಚೆನ್ನೈ: ಕಾರನ್ನು ಬಾಡಿಗೆಗೆ ನಿಗದಿಪಡಿಸಿ ಪ್ರಯಾಣ ಆರಂಭಿಸುವ ಮೊದಲು ಒಟಿಪಿ ನೀಡುವ ಜಗಳ ಪ್ರಯಾಣಿಕನ ಕೊಲೆಯಲ್ಲಿ ಅಂತ್ಯವಾಗಿದೆ. ಚೆನ್ನೈ ನಗರದ ನವಲೂರಿನಲ್ಲಿ ಈ ಘಟನೆ ನಡೆದಿದೆ. ಸಾಫ್ಟವೇರ್ ಡೆವಲಪರ್ ಆಗಿರುವ...

ದೇಶದಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು, 28 ಜನರ ಸಾವು

newsics.com ನವದೆಹಲಿ:  ದೇಶದಲ್ಲಿ ಕೊರೋನಾದ ಹಾವಳಿ ಮುಂದುವರಿದಿದೆ.  ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ ಕೊರೋನಾ ಸೋಂಕಿತರಾಗಿದ್ದ 15,394 ಮಂದಿ ಗುಣಮುಖರಾಗಿದ್ದಾರೆ. ಕೊರೋನಾದಿಂದ ಕಳೆದ 24 ಗಂಟೆ...
- Advertisement -
error: Content is protected !!