Tuesday, July 5, 2022

ಜೈಲಿನಲ್ಲೇ ಓದಿ 10, 12ನೇ ಕ್ಲಾಸ್​ ಪರೀಕ್ಷೆ ಪಾಸಾದ ಖೈದಿಗಳು

Follow Us

newsics.com

ಆಗ್ರಾ: ಉತ್ತರಪ್ರದೇಶ ಆಗ್ರಾದಲ್ಲಿನ ಕೇಂದ್ರ ಕಾರಾಗೃಹದ ಖೈದಿಗಳು 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಪಾಸಾಗಿ ಅಚ್ಚರಿ ಮೂಡಿಸಿದ್ದಾರೆ. 10ನೇ ತಗರತಿಯಲ್ಲಿ ಮೂವರು ಖೈದಿಗಳು ಪ್ರಥಮ ಶ್ರೇಣಿ ಪಡೆದರೆ, ಆರು ಮಂದಿ ದ್ವಿತೀಯ ಶ್ರೇಣಿ ಪಡೆದಿದ್ದಾರೆ. 12ನೇ ತರಗತಿ ಪರೀಕ್ಷೆಯಲ್ಲಿ ಮೂವರು ಖೈದಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

10 ಮತ್ತು 12 ನೇ ತಗಗತಿಯ ಬೋರ್ಡ್ ಪರೀಕ್ಷೆಗಳ ಫಲಿತಾಂಶವನ್ನು ಉತ್ತರಪ್ರದೇಶ ಮಾಧ್ಯಮಿಕ ಶಿಕ್ಷಣ ಪರಿಷತ್ತು ಶನಿವಾರ ಪ್ರಕಟಿಸಿತ್ತು. ಇದರಲ್ಲಿ ಖೈದಿಗಳು ಕೂಡ ಪರೀಕ್ಷೆಗೆ ಕುಳಿತಿದ್ದರು. ಇಂದು ಫಲಿತಾಂಶ ಹೊರಬಿದ್ದಿದ್ದು, 12 ಖೈದಿಗಳು ಪ್ರಥಮ, ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಜೈಲಿನಲ್ಲಿ ಕೈದಿಗಳಿಗೆ ಅಧ್ಯಯನಕ್ಕಾಗಿ ಗ್ರಂಥಾಲಯ ಸೌಲಭ್ಯವನ್ನು ಒದಗಿಸಿದ್ದೇವೆ. ಶಿಕ್ಷಣ ಪಡೆಯಬೇಕೆಂಬ ಇಚ್ಚೆ ಇರುವ ಖೈದಿಗಳಿಗೆ, ಕಾರಣಾಂತರದಿಂದ ಜೈಲುಪಾಲಾದ ಪದವೀಧರ ಶಿಕ್ಷಣ ಪಡೆದ ಖೈದಿಗಳಿಂದ ಶಿಕ್ಷಣ ಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿಗೆ ಕೋವಿಡ್ ಪಾಸಿಟಿವ್

 

ಮತ್ತಷ್ಟು ಸುದ್ದಿಗಳು

vertical

Latest News

ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧಿಕಾರಿ ರಂಗನಾಥ್ ವರ್ಗಾ

newsics.com ಬೆಂಗಳೂರು: ಅಕ್ರಮಗಳ ಅಡ್ಡೆ ಎಂಬ ಕುಖ್ಯಾತಿಗೆ ಒಳಗಾಗಿರುವ ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧಿಕಾರಿ ರಂಗನಾಥ್ ಅವರನ್ನು ವರ್ಗಾ ಮಾಡಲಾಗಿದೆ. ರಂಗನಾಥ್ ವಿರುದ್ಧ ಹಲವು ಆರೋಪಗಳು ಕೇಳಿ...

ಸಿಎಂ ಕೇಜ್ರಿವಾಲ್ ನಿವಾಸದ ಮೇಲೆ ದಾಳಿ ಪ್ರಕರಣ: ಸಂಸದ ತೇಜಸ್ವಿ ಸೂರ್ಯ ವಿಚಾರಣೆ

newsics.com ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸದ ಮೇಲೆ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ ಸದಸ್ಯ ತೇಜಸ್ವಿ ಸೂರ್ಯ ಅವರನ್ನು ದೆಹಲಿ ಪೊಲೀಸರು ವಿಚಾರಣೆಗೆ ಗುರಿಪಡಿಸಿದ್ದಾರೆ. ದೆಹಲಿಯ ಅಶೋಕ್ ರಸ್ತೆಯಲ್ಲಿರುವ ಸಂಸದ ತೇಜಸ್ವಿ...

ದೇಶದಲ್ಲಿ ಹೊಸದಾಗಿ 13,086 ಕೊರೋನಾ ಸೋಂಕು ಪ್ರಕರಣ, 24 ಮಂದಿ ಸಾವು

newsics.com ನವದೆಹಲಿ: ದೇಶದಿಂದ ಕೊರೋನಾ ತೊಲಗಿಲ್ಲ. ಜನರ ನಿರ್ಲಕ್ಷ್ಯದಿಂದ ಮತ್ತೆ ವಕ್ಕರಿಸಿದೆ.  ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 13,086 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ ಕೊರೋನಾ ಸೋಂಕಿತರಾಗಿದ್ದ 12, 456 ಮಂದಿ...
- Advertisement -
error: Content is protected !!