Sunday, July 3, 2022

ಕೊರೋನಾ ಏರಿಕೆ; ಬೆಂಗಳೂರು ಸೇರಿ 8 ನಗರಗಳಲ್ಲಿ ಆಸ್ತಿ ಮಾರಾಟ ಇಳಿಕೆ

Follow Us

♦ ವಸತಿ ಮಾರಾಟದಲ್ಲಿ ಶೇ.79 ಕುಸಿತ

ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಬೆಂಗಳೂರಿನ ವಸತಿ ಆಸ್ತಿಗಳ ಮಾರಾಟದಲ್ಲಿ ತೀವ್ರ ಕುಸಿತ ಕಂಡಿದೆ.
ಬೆಂಗಳೂರು ಸೇರಿ ದೇಶದ ಪ್ರಮುಖ 8 ನಗರಗಳಲ್ಲಿ ಏಪ್ರಿಲ್-ಜೂನ್ ಅವಧಿಯಲ್ಲಿ ಶೇ 79ರಷ್ಟು ವಸತಿ ಮಾರಾಟ ಕುಸಿದಿದೆ ಎಂದು ರಿಯಲ್ ಎಸ್ಟೇಟ್ ಬ್ರೊಕರೇಜ್ ಸಂಸ್ಥೆ ಪ್ರಾಪ್ ಟೈಗರ್ ಹೇಳಿದೆ.
ಬೆಂಗಳೂರು, ಅಹಮದಾಬಾದ್, ಚೆನ್ನೈ, ಹೈದರಾಬಾದ್, ದೆಹಲಿ- ಎನ್ ಸಿಆರ್ (ನೋಯ್ಡಾ, ಗ್ರೇಟರ್ ನೋಯ್ಡಾ, ಗುರುಗ್ರಾಮ, ಗಾಜಿಯಾಬಾದ್ ಹಾಗೂ ಫರಿದಾಬಾದ್), ಮುಂಬೈ ಎಂಎಂಆರ್ (ಮುಂಬೈ, ನವಿ ಮುಂಬೈ, ಥಾಣೆ) ಹಾಗೂ ಪುಣೆಗಳಲ್ಲಿ ಮಾಹಿತಿ ಸಂಗ್ರಹಿಸಿ ಈ ವರದಿ ಸಿದ್ಧಪಡಿಸಲಾಗಿದೆ.

ಬೆಂಗಳೂರಿನ ಮೆಜೆಸ್ಟಿಕ್’ನಲ್ಲಿ 2 ಕಟ್ಟಡ ಕುಸಿತ

2020ರ ಜನವರಿ-ಜೂನ್ ಅವಧಿಯಲ್ಲಿ ಬೆಂಗಳೂರಿನಲ್ಲಿ ವಸತಿ ಮಾರಾಟ ಶೇ.57ರಷ್ಟು ಕುಸಿತ ಕಂಡಿದೆ. ಕಳೆದ ವರ್ಷ ಏಪ್ರಿಲ್ ಜೂನ್ ಅವಧಿಯಲ್ಲಿ 10,251 ಯೂನಿಟ್(ಫ್ಲಾಟ್, ಪ್ಲಾಟ್, ನಿವೇಶನ, ಅಪಾರ್ಟ್ಮೆಂಟ್) ಮಾರಾಟವಾಗಿತ್ತು. ಈ ಬಾರಿ ಈ ಅವಧಿಯಲ್ಲಿ 2,776 ಯೂನಿಟ್ ಮಾತ್ರ ಮಾರಾಟವಾಗಿದ್ದು, ಶೇ.73ರಷ್ಟು ಕುಸಿತ ಕಂಡಿದೆ. ಹೈದರಾಬಾದಿನಲ್ಲಿ ಶೇ.86ರಷ್ಟು, ಮುಂಬೈನಲ್ಲಿ ಶೇ 85ರಷ್ಟು, ಅಹಮದಾಬಾದಿನಲ್ಲಿ ಶೇ 83ರಷ್ಟು, ದೆಹಲಿ ಎನ್ ಸಿಆರ್ ನಲ್ಲಿ ಶೇ 81ರಷ್ಟು, ಕೋಲ್ಕತ್ತಾದಲ್ಲಿ ಶೇ 75ರಷ್ಟು ಹಾಗೂ ಪುಣೆಯಲ್ಲಿ ಶೇ 74ರಷ್ಟು ವಸತಿ ಮಾರಾಟ ಕುಸಿತವಾಗಿದೆ. ಕೊರೋನಾ ಲಾಕ್ಡೌನ್’ನಿಂದಾಗಿ ಏಪ್ರಿಲ್ -ಜೂನ್ ತ್ರೈಮಾಸಿಕದಲ್ಲಿ ಆರ್ಥಿಕ ಸಂಕಷ್ಟ ಹೆಚ್ಚಾಗಿದೆ ಎಂದು ಪ್ರಾಪ್ ಟೈಗರ್, ಮಕಾನ್ ಹಾಗೂ ಹೌಸಿಂಗ್.ಕಾಂ ಸಂಶೋಧನಾ ವಿಭಾಗದ ಮುಖ್ಯಸ್ಥ ಅಂಕಿತಾ ಸೂದ್ ಹೇಳಿದ್ದಾರೆ.
ಕಳೆದ ಐದು ವರ್ಷಗಳಿಂದ ಬೆಂಗಳೂರಿನ ವಸತಿ ಆಸ್ತಿ ಮಾರುಕಟ್ಟೆ ಸ್ಥಿರ ಏರಿಕೆ ಹಾದಿಯಲ್ಲೇ ಇತ್ತು. ವಾಸಕ್ಕೆ ಸಿದ್ಧವಾದ ಮತ್ತು ನಿರ್ಮಾಣ ಹಂತದಲ್ಲಿರುವ ವಸತಿ ಆಸ್ತಿಗಳಿಗೆ ಐದು ವರ್ಷಗಳಲ್ಲಿ ಕ್ರಮವಾಗಿ ಶೇ.17.7 ಮತ್ತು ಶೇ.33.3 ರವರೆಗೆ ಪ್ರಗತಿ ಕಂಡುಬಂದಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಕಲುಷಿತ ನೀರು ಸೇವನೆ; 40 ಕ್ಕೂ ಹೆಚ್ಚು ಜನ ಅಸ್ವಸ್ಥ

newsics.com ರಾಯಚೂರು; ಕಲುಷಿತ ನೀರು ಸೇವನೆ ಮಾಡಿ 40 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ. ಅನೇಕರು ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಲ್ಕಂದಿನ್ನಿಯ ಸರ್ಕಾರಿ...

ಅನಾರೋಗ್ಯ ನೆಪವೊಡ್ಡಿ ಏರ್ ಇಂಡಿಯಾ ಸಂದರ್ಶನಕ್ಕೆ ಹಾಜರಾದ ಇಂಡಿಗೋ ಸಿಬ್ಬಂದಿ, ವಿಮಾನ ಸೇವೆ ವ್ಯತ್ಯಯ

newsics.com ನವದೆಹಲಿ: ಏರ್ ಇಂಡಿಗೋ ಸಿಬ್ಬಂದಿ ಅನಾರೋಗ್ಯದ ನೆಪವೊಡ್ಡಿ ಶನಿವಾರ ಏರ್ ಇಂಡಿಯಾ‌ ಸಂದರ್ಶನಕ್ಕೆ ತೆರಳಿದ್ದರಿಂದ ಇಂಡಿಗೋ ಸೇವೆಯಲ್ಲಿ‌ ವ್ಯತ್ಯಯ ಉಂಟಾಗಿತ್ತು. ವಿಮಾನಯಾನ ವ್ಯತ್ಯಯ ಉಂಟಾಗಿದ್ದಕ್ಕೆ ಇಂಡಿಗೋ ಬಳಿ ಕಾರಣ ಕೇಳಲಾಗಿದೆ ಎಂದು ನಾಗರಿಕ ವಿಮಾನಯಾನ...

ಬೆಂಗಳೂರಿನಲ್ಲಿ 746 ಮಂದಿ ಸೇರಿ ರಾಜ್ಯದಲ್ಲಿ 826 ಜನಕ್ಕೆ ಕೊರೋನಾ ಸೋಂಕು

newsics.com ಬೆಂಗಳೂರು ; ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಇಂದು ಒಟ್ಟು 826 ಕೊರೊನಾ ಪ್ರಕರಣ ವರದಿಯಾಗಿದೆ.ಸಕ್ರಿಯ ಪ್ರಕರಣಗಳ ಸಂಖ್ಯೆ 6,666ಕ್ಕೆ ಏರಿಕೆ ಕಂಡಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,72,285ಕ್ಕೆ ಏರಿಕೆಯಾಗಿದೆ. ಇಂದು ಯಾವುದೇ ಸಾವು...
- Advertisement -
error: Content is protected !!