Monday, November 29, 2021

ಸಾಧಕ ಮಹಿಳೆಯರಿಗೆ ನನ್ನ ಸೋಶಿಯಲ್ ಮೀಡಿಯಾ ಅಕೌಂಟ್ ಮೀಸಲು- ಮೋದಿ

Follow Us

ನವದೆಹಲಿ: ಮುಂದಿನ ಭಾನುವಾರ (ಮಾರ್ಚ್​ 8)ರಂದು ತಮ್ಮ ಸಾಮಾಜಿಕ ಜಾಲತಾಣಗಳನ್ನು ಬಳಸುವುದಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಸಖತ್​ ಶಾಕ್​ ಕೊಟ್ಟಿದ್ದರು.
ನರೇಂದ್ರ ಮೋದಿಯವರ ಈ ಟ್ವೀಟ್​ಗೆ ಅಪಾರ ಅರ್ಥ ಕಲ್ಪಿಸಿದ ನೆಟ್ಟಿಗರು ಸಾವಿರ ಸಾವಿರ ಪ್ರತಿಕ್ರಿಯೆ ಮಾಡಿದ್ದರು.
ಆದರೆ ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೊಮ್ಮೆ ಟ್ವೀಟ್ ಮಾಡಿದ್ದಾರೆ. ತಾವ್ಯಾಕೆ ಮಾರ್ಚ್​ 8ರಂದು ತಮ್ಮ ಇನ್ಸ್ಟಾಗ್ರಾಂ, ಫೇಸ್​ಬುಕ್​, ಟ್ವಿಟರ್​, ಯೂಟ್ಯೂಬ್​ ಅಕೌಂಟ್​ಗಳನ್ನು ಬಳಸುವುದಿಲ್ಲ ಎಂಬುದಕ್ಕೆ ಕಾರಣವನ್ನು ತಿಳಿಸಿದ್ದಾರೆ.
ಈ ಮಹಿಳಾ ದಿನಾಚರಣೆಗೆ ನಾನು ನನ್ನ ಎಲ್ಲ ಸಾಮಾಜಿಕ ಜಾಲತಾಣಗಳ ಅಕೌಂಟ್​ನ್ನೂ ಸಾಧಕ ಮಹಿಳೆಯರಿಗೆ ಬಿಟ್ಟುಕೊಡುತ್ತಿದ್ದೇನೆ. ತಮ್ಮ ಜೀವನ ಮತ್ತು ಕೆಲಸದ ಮೂಲಕ ಸ್ಫೂರ್ತಿಯಾದ ಮಹಿಳೆಯರು ನನ್ನ ಸಾಮಾಜಿಕ ಜಾಲತಾಣಗಳನ್ನು ಬಳಸಲಿದ್ದಾರೆ. ಈ ಮೂಲಕ ದೇಶದ ಕೋಟ್ಯಂತರ ಜನರಿಗೆ ಅವರು ಪ್ರೇರಣೆ ತುಂಬಲು ಸಾಧ್ಯವಾಗುತ್ತದೆ ಎಂದು ನರೇಂದ್ರ ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಹಾಗೆಯೇ #SheInspiresUs ಎಂಬ ಹ್ಯಾಷ್​ಟ್ಯಾಗ್​ನ್ನೂ ಮೋದಿಯವರು ನೀಡಿದ್ದು, ಸಾಧಕ ಮಹಿಳೆಯರು ತಮ್ಮ ಜೀವನದ ಸ್ಫೂರ್ತಿದಾಯಕ ಕತೆಯನ್ನು ಇದೇ ಹ್ಯಾಷ್​ಟ್ಯಾಗ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ಮನವಿ ನೀಡಿದ್ದಾರೆ.
ನೀವು ಅಂತಹ ಸಾಧಕ ಮಹಿಳೆಯರಲ್ಲಿ ಒಬ್ಬರಾದರೆ ಅಥವಾ ನಿಮಗೆ ಅಂತಹವರ ಪರಿಚಯವಿದ್ದರೆ ಅದನ್ನು #SheInspiresUs ಹ್ಯಾಷ್​ಟ್ಯಾಗ್​ ಬಳಸಿ ನಮ್ಮೊಂದಿಗೆ ಹಂಚಿಕೊಳ್ಳಿ ಎಂದಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಮಹಿಳಾ ಸಂಸದರೊಂದಿಗೆ ಸೆಲ್ಫಿ ಶೇರ್ ಮಾಡಿ ಲೋಕಸಭೆ ಆಕರ್ಷಕ ಸ್ಥಳ ಎಂದ ಶಶಿ ತರೂರ್, ಕ್ಷಮೆಯಾಚನೆ

newsics.com ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್, ಆರು ಮಹಿಳಾ ಸಂಸದರೊಂದಿಗೆ ತೆಗೆದ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. "ಲೋಕಸಭೆಯು ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು ಯಾರು ಹೇಳುತ್ತಾರೆ?"...

ಭಾರತ – ನ್ಯೂಜಿಲೆಂಡ್ ಮೊದಲ ಟೆಸ್ಟ್ ಡ್ರಾನಲ್ಲಿ ಅಂತ್ಯ

newscis.com ಕಾನ್ಪುರ: ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಮಂದ ಬೆಳಕಿನಿಂದ ಪಂದ್ಯವನ್ನು ನಿಲ್ಲಿಸಬೇಕಾಯಿತು. ನಾಲ್ಕು ವರ್ಷಗಳಲ್ಲಿ ಭಾರತದ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್...

ಯುಎಇಯಲ್ಲಿ ಅತಿದೊಡ್ಡ ಕಾನೂನು ಸುಧಾರಣೆ: 40 ಕಾನೂನುಗಳ ಬದಲಾವಣೆ

newsics.com ಯುಎಇ: ಇಲ್ಲಿನ ಸರ್ಕಾರವು ತನ್ನ ಇತಿಹಾಸದಲ್ಲೇ ಅತಿ ದೊಡ್ಡ ಕಾನೂನು ಸುಧಾರಣೆ ನಡೆಸಲು ಮುಂದಾಗಿದ್ದು, 40 ಕಾನೂನುಗಳನ್ನು ಬದಲಾಯಿಸಲಿದೆ. ವಿವಿಧ ವಿಭಾಗಗಳ ಕಾನೂನುಗಳಲ್ಲಿ ಬದಲಾವಣೆಗಳಾಗಲಿವೆ. ಮದುವೆಯ ಮೊದಲು ಸಮ್ಮತಿಯ ಲೈಂಗಿಕ ಸಂಬಂಧಗಳ ಅಪರಾಧೀಕರಣದ ಕುರಿತಾದ...
- Advertisement -
error: Content is protected !!