* ಈ ಬಾರಿಯೂ ಹುಡುಗಿಯರೇ ಮೇಲುಗೈ
ಬೆಂಗಳೂರು: ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು, ಶೇ.61.38ರಷ್ಟು ಫಲಿತಾಂಶ ಲಭಿಸಿದೆ.
ಈ ಬಾರಿ ಉಡುಪಿ, ದಕ್ಷಿಣ ಕನ್ನಡ ಮೊದಲ ಸ್ಥಾನ ಗಳಿಸಿದ್ದರೆ, ಕೊಡಗು ದ್ವಿತೀಯ ಸ್ಥಾನ, ಉತ್ತರ ಕನ್ನಡ ಮೂರನೇ ಸ್ಥಾನ ಗಳಿಸಿವೆ. ಕೊನೆಯ ಮೂರು ಸ್ಥಾನಗಳನ್ನು ಚಿತ್ರದುರ್ಗ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳು ಗಳಿಸಿರುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಈ ಬಾರಿ ಮೊದಲನೇ ಸ್ಥಾನವನ್ನು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ಹಂಚಿಕೊಂಡಿವೆ. ಈ ಬಾರಿ ಪರೀಕ್ಷೆಗೆ ಹಾಜರಾಗಿರುವವರು 6 ಲಕ್ಷದ 75 ಸಾವಿರದ 277 ವಿದ್ಯಾರ್ಥಿಗಳು. ಇವರಲ್ಲಿ ತೇರ್ಗಡೆಯಾಗಿರುವವರು 3,84,947 ವಿದ್ಯಾರ್ಥಿಗಳು. 2020ರ ಶೇಕಡಾವಾರು ಫಲಿತಾಂಶ 69.20 ಆಗಿದೆ. ಕಳೆದ ವರ್ಷ 68.68 ಆಗಿತ್ತು. ಪುನರಾವರ್ತಿತ ವಿದ್ಯಾರ್ಥಿಗಳ ಸಂಖ್ಯೆ 91,025 ಆಗಿದೆ. ಇದರಲ್ಲಿ ತೇರ್ಗಡೆಯಾದವರು 25,602 ವಿದ್ಯಾರ್ಥಿಗಳು ಆಗಿದ್ದಾರೆ. ಇದರ ಫಲಿತಾಂಶ ಶೇ.46.56 ಆಗಿದೆ. 27.37 ಕಳೆದ ವರ್ಷ ಆಗಿತ್ತು. ಖಾಸಗಿ ಅಭ್ಯರ್ಥಿಗಳ ಪ್ರಮಾಣ 27,985 ವಿದ್ಯಾರ್ಥಿಗಳು ಆಗಿದ್ದಾರೆ. ಇವರಲ್ಲಿ 6,748 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶೇಕಡಾವಾರು ಫಲಿತಾಂಶ ಪ್ರಮಾಣ ಶೇ.24.11 ಆಗಿದೆ ಎಂದರು. ಈ ವರ್ಷ ಶೇಕಡಾ 68.73ರಷ್ಟು ಫಲಿತಾಂಶ ಗಳಿಸಿ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ.
ಈ ವರ್ಷ ವಿಜ್ಞಾನ ವಿಭಾಗದಲ್ಲಿ ಪಾಸ್ ಆದವರ ಪ್ರಮಾಣ ಶೇ.76.02 ಆಗಿದೆ. ಕಳೆದ ವರ್ಷ ಶೇ.66.58 ಆಗಿತ್ತು. ಕಾಮರ್ಸ್ ವಿಭಾಗದಲ್ಲಿ ಶೇ.65.52 ಪಾಸ್ ಆಗಿದ್ದಾರೆ. ಕಳೆದ ವರ್ಷ ಶೇ.66.39 ಆಗಿತ್ತು. ಕಲಾ ವಿಭಾಗದಲ್ಲಿ ಶೇ.41.27 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಕಳೆದ ವರ್ಷ ಶೇ.50.53 ಆಗಿದೆ. ಒಟ್ಟಾರೆ ಶೇ.61.80 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಕಳೆದ ವರ್ಷ 61.73 ವಿದ್ಯಾರ್ಥಿಗಳು ಪಾಸ್ ಆಗಿದ್ದರು ಎಂದರು.
ನಗರ ಪ್ರದೇಶದಲ್ಲಿ 62.60 ಆಗಿದೆ. ಕಳೆದ ವರ್ಷ 61.38 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದರು. ಗ್ರಾಮಾಂತರ ಪ್ರದೇಶದಲ್ಲಿ 58.99 ಆಗಿದ್ದರೇ, ಕಳೆದ ವರ್ಷ 62.88 ವಿದ್ಯಾರ್ಥಿಗಳು ಪಾಸ್ ಆಗಿದ್ದರು. 85% ಗಿಂತ ಜಾಸ್ತಿ ಅಂಕ ಪಡೆದಿರುವವರು 68,866 ವಿದ್ಯಾರ್ಥಿಗಳು ಆಗಿದ್ದಾರೆ.
ಈ ಬಾರಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಜಿಲ್ಲೆ ಮೊದಲ ಸ್ಥಾನವನ್ನು ಪಡೆದಿವೆ. ಮೊದಲು ಉಡುಪಿ – 90.71ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷ ಶೇ.92.02 ರಷ್ಟು ಫಲಿತಾಂಶ ಬಂದಿತ್ತು. ಎರಡನೇ ಸ್ಥಾನವನ್ನು ದಕ್ಷಿಣ ಕನ್ನಡ ಗಳಿಸಿದೆ. ಈ ವರ್ಷ 90.07 ರಷ್ಟು. ಮೂರನೇ ಸ್ಥಾನ ಕೊಡಗು ಗಳಿಸಿದೆ. 81.53 ರಷ್ಟು ಫಲಿತಾಂಶ ಪಡೆದಿದೆ. ಕೊನೆಯ ಮೂರು ಜಿಲ್ಲೆಗಳೆಂದರೆ ಚಿತ್ರದುರ್ಗ ಶೇ.56.8, ರಾಯಚೂರು- 56.22ರಷ್ಟು ಹಾಗೂ ವಿಜಯಪುರ 54.22 ರಷ್ಟು ಫಲಿತಾಂಶ ಗಳಿಸುವ ಮೂಲಕ ಕೊನೆಯ ಸ್ಥಾನ ಗಳಿಸಿದೆ.
ಈ ವರ್ಷ ಒಟ್ಟು 5.95 ಲಕ್ಷ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದರು. ಏಪ್ರಿಲ್ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲಾಗಿತ್ತು. ಬಾಕಿ ಉಳಿದಿದ್ದ ಇಂಗ್ಲಿಷ್ ವಿಷಯದ ಪರೀಕ್ಷೆಯನ್ನು ಜೂನ್ನಲ್ಲಿ ನಡೆಸಲಾಗಿತ್ತು. 1,016 ಕೇಂದ್ರಗಳಲ್ಲಿ ಪಿಯುಸಿ ಪರೀಕ್ಷೆ ನಡೆಸಲಾಗಿತ್ತು. 70 ಮೌಲ್ಯಮಾಪನ ಕೇಂದ್ರಗಳಲ್ಲಿ ಪಿಯುಸಿ ಪರೀಕ್ಷೆಯ ಮೌಲ್ಯಮಾಪನವನ್ನು ಮೇ 16ರಿಂದ ಜುಲೈ 9ರವರೆಗೆ ನಡೆಸಲಾಯಿತು ಎಂದರು.