ಸಕಲೇಶಪುರ (ಹಾಸನ): ಪಕ್ಕೆಲುಬು ಪದ ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ವೈರಲ್ ಆಗಲು ಕಾರಣನಾಗಿದ್ದ ಶಿಕ್ಷಕ ಅಮಾನತುಗೊಂಡ ಪ್ರಕರಣ ಮಾಸುವ ಮುನ್ನವೇ ಇದೇ ತೆರನಾದ ಇನ್ನೊಂದು ಪ್ರಕರಣ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಸಕಲೇಶಪುರ ತಾಲೂಕಿನ ಕಬ್ಬಿನಗದ್ದೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಿರ್ವಾಣಯ್ಯ ಒಂದನೇ ತರಗತಿ ವಿದ್ಯಾರ್ಥಿನಿಯಿಂದ ಪುಳಿಯೋಗರೆ ಎಂದು ಹೇಳಿಸುತ್ತಾರೆ. ಆದರೆ ಬಾಲಕಿಗೆ ಅದನ್ನು ಸರಿಯಾಗಿ ಹೇಳಲು ಬರುವುದಿಲ್ಲ. ನಾಲ್ಕೈದು ಬಾರಿ ಯತ್ನಿಸಿದರೂ ಆಕೆಗೆ ಹೇಳಲು ಬಾರದಿದ್ದಾಗ ವಿದ್ಯಾರ್ಥಿಗಳೆಲ್ಲ ದೊಡ್ಡದಾಗಿ ನಗುತ್ತಾರೆ. ಶಿಕ್ಷಕ ನಿರ್ವಾಣಯ್ಯ ಕೂಡ ನಗುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಶಿಕ್ಷಕನಿಗೂ ಶಿಕ್ಷೆಯಾಗಬೇಕಲ್ವಾ?
‘ಪಕ್ಕೆಲುಬು’ ಬೆನ್ನಲ್ಲೇ ‘ಪುಳಿಯೋಗರೆ’!
Follow Us