ಜಕಾರ್ತ:ಕೊರೋನಾ ವೈರಸ್ ನಿಯಂತ್ರಣ ಕ್ಕೆ ಎಲ್ಲಾ ದೇಶಗಳು ಇನ್ನಿಲ್ಲದ ಸರ್ಕಸ್ ಆರಂಭಿಸಿದ್ದು ಭಾರತದಲ್ಲಿ ಕೊರೋನಾ ತಡೆಯಲು ಮಾಸ್ಕ್ ಧರಿಸೋದು ಕಡ್ಡಾಯ. ಆದರೆ ಈ ನಿಯಮ ಉಲ್ಲಂಘಿಸಿದ್ರೇ ಇಲ್ಲಿ ನೀವು ೫೦೦ ರೂಪಾಯಿ ಕಟ್ಟಿ ಆರಾಂ ಆಗಿ ಇರಬಹುದು.ಆದರೆ ಇಂಡೋನೇಷ್ಯಾದಲ್ಲಿ ನಿಯಮ ಉಲ್ಲಂಘಿಸಿದ್ರೇ ನೀವು ಸಶ್ಮಾನದ ಗುಂಡಿ ತೋಡಲು ಸಿದ್ಧರಾಗಬೇಕು.
ಹೌದು….ಇಂತಹದೊಂದು ಕಠಿಣವಾದ ನಿಯಮವನ್ನು ಇಂಡೋನೇಷ್ಯಾ ರೂಪಿಸಿದೆ. ಇಂಡೋನೇಷ್ಯಾದ ಪೂರ್ವ ಜಾವಾದ ಗ್ರೆಸಿಕ್ ರೀಜೆನ್ಸಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸಲು ನಿರಾಕರಿಸಿದ ೮ ಜನರನ್ನು ಕೊರೋನಾದಿಂದ ಸತ್ತವರಿಗೆ ಸಮಾಧಿ ತೋಡಲು ಬಳಸಿಕೊಳ್ಳುವ ಮೂಲಕ ಶಿಕ್ಷೆ ವಿಧಿಸಲಾಗಿದೆ.
ಸೆರ್ಮೆ ಜಿಲ್ಲಾ ಮುಖ್ಯಸ್ಥ ಸುಯೊನೊ ಈ ಶಿಕ್ಷೆ ಬಗ್ಗೆ ಮಾಹಿತಿ ನೀಡಿದ್ದು, ೮ ಜನರು ಮಾಸ್ಕ್ ಧರಿಸಲು ನಿರಾಕರಿಸಿದ ವೇಳೆ ಸಮಾಧಿ ಗುಂಡಿ ತೋಡಲು ಕೆಲಸಗಾರರ ಕೊರತೆ ಇತ್ತು. ಹೀಗಾಗಿ ಇವರನ್ನೇ ಅಲ್ಲಿ ಬಳಸಿಕೊಳ್ಳುವ ಮೂಲಕ ಕೊರೋನಾ ಮಾಸ್ಕ್ ಧಾರಣೆ ಎಷ್ಟು ಮಹತ್ವದ್ದು ಎಂಬ ಸಂದೇಶ ನೀಡುವ ಪ್ರಯತ್ನ ನಡೆಸಿದ್ದೇವೆ ಎಂದಿದ್ದಾರೆ.
ಜನರಲ್ಲಿ ಕಾಳಜಿ, ಸುರಕ್ಷತೆಯ ಅರಿವು ಮೂಡಿಸಲು ಇಂತಹ ಪ್ರಯತ್ನ ನಡೆದಿದ್ದು, ಮಾಸ್ಕ್ ಧರಿಸದೇ ಓಡಾಡುವ ಪ್ರವೃತ್ತಿಗೆ ಇದು ಕಡಿವಾಣ ಹಾಕಿಸಲಿದೆ ಎಂದು ನಂಬಲಾಗಿದೆ.
ಇದುವರೆಗೂ ಇಂಡೋನೇಷ್ಯಾದಲ್ಲಿ ೨,೧೮,೦೦೦ ಕೊರೋನಾಪ್ರಕರಣಗಳಿದ್ದು ಈ ಪೈಕಿ ೫೦ ಸಾವಿರ ಪ್ರಕರಣ ಜಕಾರ್ತಾದಲ್ಲೇ ದಾಖಲಾಗಿದೆ.
ಮುಖಕ್ಕೆ ಮಾಸ್ಕ್ ಹಾಕಿ ಇಲ್ಲವೇ ಸ್ಮಶಾನದಲ್ಲಿ ಗುಂಡಿ ತೋಡೋಕೆ ಸಿದ್ಧವಾಗಿ
Follow Us