Saturday, October 16, 2021

ಪಂಜಾಬ್’ಗೆ 5 ರನ್’ಗಳ ರೋಚಕ ಜಯ

Follow Us

newsics.com

ಶಾರ್ಜಾ: ಪಂಜಾಬ್ ಕಿಂಗ್ಸ್ ನೀಡಿದ್ದ 125 ರನ್ ಗಳ ಅತ್ಯಂತ ಸಾಧಾರಣ ಮಟ್ಟದ ಗುರಿಯನ್ನು ತಲುಪಲಾಗದ ಸನ್ರೈಸರ್ಸ್ ಹೈದರಾಬಾದ್ ತಂಡ ಹೀನಾಯ ಸೋಲನ್ನು ಅನುಭವಿಸಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ 37ನೇ ಪಂದ್ಯದಲ್ಲಿ ಕೆ. ಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ ಕೇನ್ ವಿಲಿಯಮ್ಸನ್ ನಾಯಕತ್ವದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 5 ರನ್ ಗಳ ರೋಚಕ ಜಯ ಸಾಧಿಸಿದೆ.

ಪಂಜಾಬ್ ನೀಡಿದ 126 ರನ್ ಗಳ ಟಾರ್ಗೆಟ್ ಬೆನ್ನತ್ತಿದ ಎಸ್ಆರ್’ಎಚ್ ತಂಡವು ಅಂತಿಮವಾಗಿ 120 ರನ್ ಗಳನ್ನಷ್ಟೇ ಗಳಿಸಿತು.

ಟಾಸ್ ಗೆದ್ದ ಸನ್ರೈಸರ್ಸ್ ಹೈದರಾಬಾದ್ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಕಟ್ಟಿಹಾಕುವಲ್ಲಿ ಪಂಜಾಬ್ ಕಿಂಗ್ಸ್ ಬೌಲರುಗಳು ಯಶಸ್ವಿಯಾದರು.

ಅಂತಿಮ ಓವರ್ ನಲ್ಲಿ 17 ರನ್ ಗಳ ಅವಶ್ಯಕತೆ ಪಡೆದ ಸನ್ರೈಸರ್ಸ್ ಹೈದರಾಬಾದ್ ಕೇವಲ 11 ರನ್ ಮಾತ್ರ ಗಳಿಸಿತು. ಇದರೊಂದಿಗೆ ಪಂಜಾಬ್ ಕಿಂಗ್ಸ್ ತಂಡವು 5 ರನ್ ಗಳ ರೋಚಕ ಜಯ ಸಾಧಿಸಿತು.

‘ಕೋಟಿಗೊಬ್ಬ 3’ ಶೀಘ್ರ ಬಿಡುಗಡೆ: 120 ಅಡಿಯ ಸುದೀಪ್ ಕಟೌಟ್!

ಭದ್ರತಾ ಮಂಡಳಿಯಲ್ಲದೆ ಎನ್ಎಸ್’ಜಿಯಲ್ಲೂ ಭಾರತ ಇರಬೇಕೆಂದ ಬೈಡನ್

2021ರ ಸಾಗರ‌ ಛಾಯಾಗ್ರಹಣ ಪ್ರಶಸ್ತಿ ಗೆದ್ದ ಹಸಿರು ಆಮೆಯ ಫೋಟೋ

ಮತ್ತಷ್ಟು ಸುದ್ದಿಗಳು

Latest News

3 ದಿನ ಉಚಿತ ಪೆಟ್ರೋಲ್ ನೀಡಿದ ಬಂಕ್ ಮಾಲೀಕ

newsics.com ಮಧ್ಯ ಪ್ರದೇಶ: ಇಲ್ಲಿನ ಬೆತುಲ್ ಜಿಲ್ಲೆಯಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕ ತನ್ನ ಗ್ರಾಹಕರಿಗೆ 3 ದಿನ ಉಚಿತ ಪೆಟ್ರೋಲ್ ನೀಡಿದ್ದಾರೆ. ದೀಪಲ್ ಸೈನಾನಿ ಎಂಬುವವರು ಹೆಣ್ಣು ಮಗು...

ರಾಜ್ಯದಲ್ಲಿ ಹೊಸದಾಗಿ 264 ಕೊರೋನಾ ಪ್ರಕರಣ ಪತ್ತೆ, 421 ಮಂದಿ ಗುಣಮುಖ, 6 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 264 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,83,133ಕ್ಕೆ ಏರಿಕೆಯಾಗಿದೆ. 421 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 29,35,659 ಜನ ಚೇತರಿಸಿಕೊಂಡಿದ್ದಾರೆ. 6 ಸೋಂಕಿತರು...

ಲಸಿಕೆ ನೀಡಲು ಅಪಾಯಕಾರಿ ಬಿದಿರಿನ ಸೇತುವೆ ದಾಟಿದ ಆರೋಗ್ಯ ಕಾರ್ಯಕರ್ತ: ವಿಡಿಯೋ ವೈರಲ್

newsics.com ಅರುಣಾಚಲ ಪ್ರದೇಶ: ಇಲ್ಲಿನ ಆರೋಗ್ಯ ಕಾರ್ಯಕರ್ತರೊಬ್ಬರು ಜನರಿಗೆ ಕೋವಿಡ್ -19 ವಿರುದ್ಧ ಲಸಿಕೆ ನೀಡಲು ಬಿದಿರಿನ ಸೇತುವೆ ದಾಟಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅವರು ತಾತ್ಕಾಲಿಕವಾಗಿ ನಿರ್ಮಿಸಿದ ಅಪಾಯಕಾರಿ ಬಿದಿರಿನ ಸೇತುವೆ...
- Advertisement -
error: Content is protected !!