Wednesday, July 6, 2022

ಝೆಲೆನ್ಸ್ಕಿ ಪ್ರೀತಿಯಲ್ಲಿ ಬಿದ್ದ ಪುಟಿನ್ ಪುತ್ರಿ?

Follow Us

newsics.com
ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಆರಂಭಿಸಿದ ಬಳಿಕ ವ್ಲಾಡಿಮಿರ್ ಪುಟಿನ್‌ ಅವರ ವೈಯಕ್ತಿಕ ಜೀವನದ ರಹಸ್ಯಗಳು ಬಹಿರಂಗವಾಗುತ್ತಿವೆ.
ಪುಟಿನ್‌ ಅವರು ಒಲಿಂಪಿಕ್ಸ್‌ ಪದಕ ವಿಜೇತೆ ಜಿಮ್ನಾಸ್ಟಿಕ್‌ ಪಟು ಅಲಿನಾ ಕಬೆವಾ ಜೊತೆ ಇದೆ ಎನ್ನಲಾದ ರಹಸ್ಯಮಯ ಲವ್‌ ಸ್ಟೋರಿ ಬಹಿರಂಗವಾಗಿತ್ತು. ಈಗ ಅವರ ಪುತ್ರಿ ಜರ್ಮನಿ ಮೂಲದ ಡ್ಯಾನ್ಸರ್‌ ಜತೆ ಸಂಬಂಧ ಹೊಂದಿದ್ದಾರೆ ಎನ್ನಲಾಗುತ್ತಿದೆ.
ಈಗ ಪುಟಿನ್ ಪುತ್ರಿ, ಮಾಜಿ ನರ್ತಕಿ ಕ್ಯಾಟೆರಿನಾ ಟಿಖೋನೋವಾ (Katerina Tikhonova) ಅವರು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯನ್ನು ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ಆದರೆ ಅಸಲಿ ಕಥೆಯೇ ಬೇರೆ. ಪುಟಿನ್ ಪುತ್ರಿ ಪ್ರೀತಿಸುತ್ತಿರುವುದು ವ್ಲಾಡಿಮಿರ್ ಝೆಲೆನ್ಸ್ಕಿ ಅವರನ್ನಲ್ಲ, ಬದಲಿಗೆ ಜರ್ಮನಿಯ ಮ್ಯೂನಿಚ್‌ ಮೂಲದ ಬ್ಯಾಲೆಟ್ ನೃತ್ಯಗಾರ ಇಗೋರ್‌ ಝೆಲೆನ್ಸ್ಕಿಯನ್ನು ಕ್ಯಾಟೆರಿನಾ ಪ್ರಿತಿಸುತ್ತಿದ್ದಾರಂತೆ.
ಇಗೋರ್‌ ಝೆಲೆನ್ಸ್ಕಿ ಹಾಗೂ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿಗೂ ಯಾವುದೇ ಸಂಬಂಧ ಇಲ್ಲ. ಕೇವಲ ಅಡ್ಡಹೆಸರಿನಲ್ಲಿ ಮಾತ್ರ ಹೋಲಿಕೆಯಿದೆ.
ಸರ್ಕಾರಿ ಹೆಲಿಕಾಪ್ಟರ್ ಬಳಕೆ: 2018-2019ರ ಅವಧಿಯಲ್ಲಿ ಪುಟಿನ್ ಪುತ್ರಿ 50ಕ್ಕೂ ಹೆಚ್ಚು ಬಾರಿ ಮ್ಯೂನಿಚ್‌ಗೆ ಪ್ರಯಾಣಿಸಿದ್ದಾರೆ ಎಂಬ ಅಂಶ ರಷ್ಯಾದ ಸ್ವತಂತ್ರ ಮಾಧ್ಯಮ ಸಂಸ್ಥೆ ಐಸ್ಟೋರಿಸ್‌ ಮತ್ತು ಜರ್ಮನಿಯ ನಿಯತಕಾಲಿಕೆ ಡೆರ್‌ ಸ್ಪೀಗೆಲ್‌ನ ಜಂಟಿ ತನಿಖೆಯಿಂದ ತಿಳಿದುಬಂದಿದೆ.
ಕ್ಯಾಟೆರಿನಾ ಪ್ರತಿ ಬಾರಿಯೂ ತಮ್ಮ ಪ್ರಿಯಕರ ಜೆಲೆನ್ಸ್‌ಕಿಯನ್ನು ನೋಡಲು ಜರ್ಮನಿಯ ಮ್ಯೂನಿಚ್‌ಗೆ ಸರ್ಕಾರಿ ಚಾರ್ಟರ್ಡ್‌ ವಿಮಾನಗಳಲ್ಲಿ ಪ್ರಯಾಣಿಸಿದ್ದಾರೆ ಎಂಬ ವಿಚಾರ ವಿವಾದಕ್ಕೊಳಗಾಗುವ ಸಾಧ್ಯತೆಯಿದೆ.
ಮಾಸ್ಕೋ ಮತ್ತು ಮ್ಯೂನಿಚ್‌ ನಡುವಿನ ಸರಣಿ ವಿಮಾನ ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ತನಿಖೆಯು ಬಹಿರಂಗಪಡಿಸಿದೆ. ಪುಟಿನ್ ಮೊಮ್ಮಗಳ ಶಂಕೆ: ಅಲ್ಲದೇ, ಮಾಧ್ಯಮಗಳ ತನಿಖೆಯ ವೇಳೆ ಎರಡು ವರ್ಷದ ಬಾಲಕಿಯ ಪಾಸ್‌ಪೋರ್ಟ್‌ ಇರುವುದು ಕೂಡ ಪತ್ತೆಯಾಗಿದೆ. ಅದು, ಪುಟಿನ್ ಅವರ ಅಪರಿಚಿತ ಮೊಮ್ಮಗಳಾಗಿರುವ ಸಾಧ್ಯತೆ ಇದೆ ಎಂದು ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.
ಅಂದಹಾಗೆ, ಪುಟಿನ್ ಪುತ್ರಿ ಪ್ರೀತಿಸುತ್ತಿರುವ 52 ವರ್ಷದ ಇಗೋರ್ ಝೆಲೆನ್ಸ್ಕಿ ಈ ವರ್ಷದ ಏಪ್ರಿಲ್‌ವರೆಗೆ ಬೇರಿಸ್ಚೆಸ್ ಸ್ಟ್ಯಾಟ್ಸ್‌ಬಾಲ್‌ನ ನಿರ್ದೇಶಕರಾಗಿದ್ದರು.
ಈಗ ಝೆಲೆನ್ಸ್ಕಿ ರಷ್ಯಾದ ರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆಯ ಪ್ರತಿಷ್ಠಾನದ ಮೇಲ್ವಿಚಾರಣಾ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಆಣೆಕಟ್ಟಿನಲ್ಲಿ ಹುಚ್ಚು ಸಾಹಸ ಪ್ರದರ್ಶಿಸಲು ಹೋಗಿ ಆಯ ತಪ್ಪಿ ಬಿದ್ದ ವ್ಯಕ್ತಿ!

ಶಿವಣ್ಣ ನಟನೆಯ ಪ್ಯಾನ್​ ಇಂಡಿಯಾ ಸಿನಿಮಾಗೆ ರಾಕ್​ಲೈನ್​ ವೆಂಕಟೇಶ್​ ಬಂಡವಾಳ

ಬೋನಿನಲ್ಲಿದ್ದ ಸಿಂಹದ ಜೊತೆ ಚೆಲ್ಲಾಟವಾಡುತ್ತಿದ್ದವನ ಬೆರಳುಗಳೇ ಕಟ್!

ಮತ್ತಷ್ಟು ಸುದ್ದಿಗಳು

vertical

Latest News

ಅವಧಿಗೂ ಮುನ್ನವೇ ಖೈದಿಗಳ ಬಿಡುಗಡೆ : ಕೇಂದ್ರ

newsics.com ನವದೆಹಲಿ: ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ 50 ವರ್ಷ ಮೇಲ್ಪಟ್ಟ ಮಹಿಳಾ ಖೈದಿ, ತೃತೀಯ ಲಿಂಗಿ, 60 ವರ್ಷ ಮೇಲ್ಪಟ್ಟ ಪುರುಷ ಮತ್ತು ಅಂಗವಿಕಲ ಖೈದಿಗಳನ್ನೂ ಸೆರೆವಾಸದಿಂದ...

ಸಾವಿರ ಕೋಟಿಯ ಗುರೂಜಿ ದಾರುಣ ಅಂತ್ಯ

newsics.com ಹುಬ್ಬಳ್ಳಿ; ವಾಸ್ತು ಶಾಸ್ತ್ರ  ಹೇಳುವ ಮೂಲಕ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶಾದ್ಯಂತ ಚಿರಪರಿಚಿತರಾಗಿದ್ದ ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಅವರನ್ನು ಇಂದು (ಜು.5) ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಆಸ್ತಿ...

ದಿಢೀರ್ ಶಬ್ದದಿಂದ ಭೂಮಿ ಸೀಳು, ಭಯಭೀತರಾದ ಶಿವಮೊಗ್ಗ ಮಂದಿ

newsics.com ಶಿವಮೊಗ್ಗ: ದಿಢೀರ್ ಶಬ್ದದಿಂದ ಭೂಮಿ ಸೀಳಾಗಿರುವ ಘಟನೆ ಸಾಗರದ ನೆಹರು ನಗರದಲ್ಲಿ ನಡೆದಿದೆ. ಒಮ್ಮೆಲೆ ಬಂದ ಶಬ್ದಕ್ಕೆ ನೆಹರು ನಗರದ ನಿವಾಸಿಗಳು ಭಯಭೀತರಾಗಿ ಹೊರಗೆ ಬಂದು ನೋಡಿದರೆ, ಭೂಮಿ ಸೀಳಾಗಿರುವುದು ಕಂಡು ಬಂದಿದೆ. ಭೂಮಿಯಿಂದ...
- Advertisement -
error: Content is protected !!