ಬೆಂಗಳೂರು: ಕೊರೋನಾ ಸೋಂಕಿತರನ್ನು ಕ್ವಾರಂಟೈನ್ ಮಾಡುವುದೇ ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಆದ್ದರಿಂದಲೇ ಸರ್ಕಾರ ಕ್ವಾರಂಟೈನ್’ಗೆ ಹಲವು ನಿಯಮಗಳನ್ನು ಜಾರಿಗೊಳಿಸಿದೆ. ಕ್ವಾರಂಟೈನ್ ನಿಯಮ ಮೀರಿದ್ರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ಕೂಡ ದಾಖಲಿಸಲಾಗುತ್ತಿದೆ. ಆದರೂ ಕಠಿಣ ನಿಯಮಗಳನ್ನು ಮೀರಿ ರಾಜ್ಯದಲ್ಲಿ 3.78 ಲಕ್ಷ ಜನರು ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಾರೆ.ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈವರೆಗೆ 3 ಲಕ್ಷದ 78 ಸಾವಿರದ 299 ಜನರು 14 ದಿನದ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಾರೆ. ಹೊರ ರಾಜ್ಯ, ಕಂಟೈನ್ಮೆಂಟ್ ಝೋನ್ ನಿಂದ ಬಂದವರು, ವಿದೇಶದಿಂದ ಬಂದವರಿಗೆ 14 ದಿನದ ಕ್ವಾರಂಟೈನ್ ಕಡ್ಡಾಯ ಮಾಡಲಾಗಿತ್ತು. ಆದರೆ ಇಂತಹ ನಿಯಮವನ್ನು ಉಲ್ಲಂಘಿಸಿದ 3.78 ಲಕ್ಷ ಜನರ ವಿರುದ್ಧ ದೂರು ದಾಖಲಾಗಿದೆ. ಪದೇ ಪದೇ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ 1,997 ಜನರ ವಿರುದ್ಧ ವಿವಿಧ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ಕೂಡ ದಾಖಲಾಗಿದೆ.
ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಜನ?
ಬಳ್ಳಾರಿ 11,203, ರಾಯಚೂರು 9,598, ಬೆಳಗಾವಿ 9,203, ಕಲಬುರ್ಗಿ 8,968, ಮೈಸೂರು 7,648.
ಪದೇಪದೇ ಕ್ವಾರಂಟೈನ್ ನಿಯಮ ಉಲ್ಲಂಘಿಸಿದವರ ವಿರುದ್ಧ ಎಫ್ಐಆರ್ ದಾಖಲಾದ ಜಿಲ್ಲಾವಾರು ವಿವರ.
ಬೆಂಗಳೂರು ಗ್ರಾಮಾಂತರ – 154, ಬೆಳಗಾವಿ – 131, ಕಲಬುರ್ಗಿ – 108, ವಿಜಯಪುರ – 104, ಬಾಗಲಕೋಟೆ – 102, ದಾವಣಗೆರೆ – 98, ಚಿತ್ರದುರ್ಗ – 82, ಬೀದರ್ – 75, ರಾಯಚೂರು – 73, ತುಮಕೂರು – 65.
ರಾಜ್ಯದಲ್ಲಿ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿದವರನ್ನು ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಸದ್ಯ ರಾಜ್ಯದಲ್ಲಿ 1,83,666 ಜನ ಹೋಂ ಕ್ವಾರಂಟೈನ್’ನಲ್ಲಿದ್ದಾರೆ. 3,159 ಜನ ಸಾಂಸ್ಥಿಕ ಕ್ವಾರಂಟೈನ್’ನಲ್ಲಿದ್ದಾರೆ. ಇದುವರೆಗೆ 3,78,299 ಜನ ಕ್ವಾರಂಟೈನ್ ನಿಯಮ ಉಲ್ಲಂಘಿಸಿದವರಿಗೆ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಲಾಗಿದೆ. ಪದೇ ಪದೇ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ 1,997 ಜನರ ವಿರುದ್ಧ ಎಫ್’ಐಆರ್ ದಾಖಲಿಸಲಾಗಿದೆ.
ರಾಜ್ಯದಲ್ಲಿ 3.78 ಲಕ್ಷ ಜನರಿಂದ ಕ್ವಾರಂಟೈನ್ ನಿಯಮ ಉಲ್ಲಂಘನೆ!
Follow Us