Wednesday, March 3, 2021

ಎಫ್ ಡಿ ಎ ಪ್ರಶ್ನೆ ಪತ್ರಿಕೆ ಸೋರಿಕೆ: ಏಳು ಆರೋಪಿಗಳ ಬಂಧನ

Newsics.com

ಬೆಂಗಳೂರು: ಇಂದು ನಡೆಯಬೇಕಿದ್ದ ಎಫ್ ಡಿ  ಎ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಸಿಸಿಬಿ ಏಳು ಮಂದಿಯನ್ನು ಬಂಧಿಸಿದ್ದಾರೆ. ಇದರಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯ ಕಿಂಗ್ ಪಿನ್ ಎಂದೇ ಹೇಳಲಾಗುತ್ತಿರುವ ರಾಚಪ್ಪ ಕೂಡ ಸೇರಿದ್ದಾನೆ.

ಬೆಂಗಳೂರಿನ  ಉಪಕಾರ್ ಲೇ ಔಟ್ ನಲ್ಲಿರುವ ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಿರುವ ಪೊಲೀಸರು ಸಿದ್ದಪಡಿಸಲಾದ ಉತ್ತರಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ.

ಇದು ವ್ಯವಸ್ಥಿತ ಜಾಲವಾಗಿದ್ದು, ಇದರ ಹಿಂದೆ ಹಲವು ಪ್ರಭಾವ ಶಾಲಿಗಳು ಇರುವ ಶಂಕೆಯನ್ನು ಸಿಸಿಬಿ ವ್ಯಕ್ತಪಡಿಸಿದೆ. ಸೂಕ್ತ ಮುನ್ನೆಚ್ಚರಿಕೆ ವಹಿಸಿ ಪರೀಕ್ಷೆ ನಡೆಸಲು ಅಸಮರ್ಥವಾಗಿರುವ ಕೆ ಪಿ ಎಸ್ ಸಿ ಗೆ ಪರೀಕ್ಷಾರ್ಥಿಗಳು ಹಿಡಿ ಶಾಪ ಹಾಕುತ್ತಿದ್ದಾರೆ.

 

 

ಮತ್ತಷ್ಟು ಸುದ್ದಿಗಳು

Latest News

ಇನ್ನು ನಾಲ್ಕೇ ವರ್ಷದಲ್ಲಿ ಅಂತರಿಕ್ಷದಲ್ಲೂ ಐಷಾರಾಮಿ ಹೋಟೆಲ್!

newsics.comವಾಷಿಂಗ್ಟನ್‌: ಇನ್ನು ನಾಲ್ಕೇ ವರ್ಷದಲ್ಲಿ ಅಂತರಿಕ್ಷದಲ್ಲೂ ಇಡ್ಲಿ, ಟೀ, ಕಾಫಿ ಸಿಗಬಹುದು.ಮುಂದಿನ 4 ವರ್ಷದಲ್ಲಿ ಅಂತರಿಕ್ಷದಲ್ಲಿ  “ವೊಯೇಜರ್‌ ಸ್ಟೇಷನ್‌’ ಎಂಬ ವೈಭವೋಪೇತ ಹೋಟೆಲೊಂದು...

ಮನೆಯಲ್ಲೇ ಲಸಿಕೆ ಪಡೆದ ಕೃಷಿ ಸಚಿವ; ವರದಿ ಕೇಳಿದ ಕೇಂದ್ರ

newsics.comನವದೆಹಲಿ: ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಇಂದು(ಮಾ.2) ತಮ್ಮ ಮನೆಯಲ್ಲೇ ಕೊರೋನಾ ಲಸಿಕೆ ಹಾಕಿಸಿಕೊಂಡಿರುವುದು ವಿವಾದಕ್ಕೆಡೆ ಮಾಡಿದೆ.ನರ್ಸ್ಗಳನ್ನು ಮನೆಗೆ ಕರೆಸಿಕೊಂಡು ಸಚಿವ ಬಿ.ಸಿ.ಪಾಟೀಲ್ ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದು,...

ದಿನೇಶ್ ಕಲ್ಲಹಳ್ಳಿ ಯಾರೆಂದೇ ತಿಳಿದಿಲ್ಲ, ತನಿಖೆ ನಡೆಯಲಿ-ಸಚಿವ ರಮೇಶ್ ಜಾರಕಿಹೊಳಿ

newsics.com ಬೆಂಗಳೂರು: ಕಳೆದ 21 ವರ್ಷದಿಂದ ನಾನು ಶಾಸಕನಾಗಿ ಆಯ್ಕೆಯಾಗುತ್ತಿದ್ದೇನೆ. ದಿನೇಶ್ ಕಲ್ಲಹಳ್ಳಿಯಾಗಲೀ ಯುವತಿಯಾಗಲಿ ಯಾರೆಂದು ತನಗೆ ತಿಳಿದಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ‌ಹೇಳಿಕೆ ನೀಡಿದ್ದಾರೆ. ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ ವಿಡಿಯೋ...
- Advertisement -
error: Content is protected !!