ಪ್ಯಾರಿಸ್: ದೇಶದ ವಾಯುಪಡೆಯ ಬಲ ಹೆಚ್ಚಿಸಲು ಭಾರತ ಖರೀದಿಸಿರುವ ರಫೇಲ್ ಯುದ್ಧ ವಿಮಾನ ಪ್ಯಾರಿಸ್ ನಿಂದ ಪ್ರಯಾಣ ಆರಂಭಿಸಿದೆ. ಮೊದಲ ಕಂತಿನ ರಫೇಲ್ ಯುದ್ಧ ವಿಮಾನಗಳನ್ನು ಫ್ರಾನ್ಸ್ ಭಾರತಕ್ಕೆ ಹಸ್ತಾಂತರಿಸಿದೆ. ಇದೀಗ ಈ ಅತ್ಯಾಧುನಿಕ ಯುದ್ಧ ವಿಮಾನಗಳು ಭಾರತದತ್ತ ಪ್ರಯಾಣ ಬೆಳೆಸಿದೆ.
ರಫೇಲ್ ಅತ್ಯಾಧುನಿಕ ನಾಲ್ಕನೇ ತಲೆಮಾರಿನ ಯುದ್ಧ ವಿಮಾನವಾಗಿದೆ. ಅಮೆರಿಕದ ಎಫ್ -16 ಯುದ್ದ ವಿಮಾನಗಳಿಗಿಂತ ಹೆಚ್ಚಿನ ಸಾಮಾರ್ಥ್ಯ ಹೊಂದಿದೆ. ಶತ್ರು ವಿಮಾನಗಳನ್ನು ದೂರದಿಂದಲೇ ಹೊಡೆದುರುಳಿಸುವ ಶಕ್ತಿ ಇದಕ್ಕಿದೆ.
ಭಾರತ– ಚೀನಾ ಗಡಿ ಸಂಘರ್ಷದ ನೆರಳಿನಲ್ಲಿ ರಫೇಲ್ ಯುದ್ಧ ವಿಮಾನಗಳ ಆಗಮನ ಭಾರತದ ವಾಯುಪಡೆಯ ಶಕ್ತಿ ಹೆಚ್ಚಿಸಲು ನೆರವಾಗಲಿದೆ.