ಚಾಮರಾಜನಗರ: ಸಾಕ್ಷ್ಯಚಿತ್ರವೊಂದರ ಶೂಟಿಂಗ್ ವೇಳೆ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಗಾಯವಾಗಿದ್ದು, ಚಿತ್ರೀಕರಣ ಅರ್ಧಕ್ಕೇ ಮೊಟಕುಗೊಳಿಸಿ ರಜನಿಕಾಂತ್ ವಾಪಸಾಗಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ಗುಂಡ್ಲುಪೇಟೆ ಸಮೀಪದ ಚಮ್ಮನಹಳ್ಳಿ ಗ್ರಾಮದ ಬಳಿ ಅಂತಾರಾಷ್ಟ್ರೀಯ ಖ್ಯಾತಿಯ ಮ್ಯಾನ್ ವರ್ಸಸ್ ವೈಲ್ಡ್ ಸರಣಿ ಸಾಕ್ಷ್ಯಚಿತ್ರ ತಯಾರಕ, ಇಂಗ್ಲೆಂಡ್ ಮೂಲದ ಸಾಹಸಿಗ ಬೇರ್ ಗ್ರಿಲ್ಸ್ ಜತೆ ‘ಮ್ಯಾನ್ ವರ್ಸಸ್ ವೈಲ್ಡ್ ‘ಸಾಕ್ಷ್ಯಚಿತ್ರದಲ್ಲಿ ರಜನಿಕಾಂತ್ ಭಾಗಿಯಾಗಿದ್ದರು.
ವನ್ಯಜೀವಿ ಸಾಕ್ಷ್ಯಚಿತ್ರದ ಶೂಟಿಂಗ್ ಗಾಗಿ ನಿನ್ನೆ ಚೆನ್ನೈನಿಂದ ಆಗಮಿಸಿದ್ದ ಅವರು ಬಂಡೀಪುರದ ಖಾಸಗಿ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದರು. ಬಾಲಿವುಡ್ ನಟ ಅಕ್ಷಯ್ ಕುಮಾರ್, ಖಾಸಗಿ ವಾಹಿನಿಯ ಗ್ರಿಲ್ ಕೂಡ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.