Wednesday, July 6, 2022

ಚೀನಾಗೆ ರಾಖಿ ಶಾಕ್!

Follow Us

ನವದೆಹಲಿ: ಗಡಿ ವಿಚಾರದಲ್ಲಿ ಭಾರತದೊಂದಿಗೆ ಕ್ಯಾತೆ ತೆಗೆದ ಚೀನಾ ಸರಿಯಾದ ಬೆಳೆಯನ್ನೇ ತೆತ್ತಿದೆ, ತೆರುತ್ತಿದೆ. ಈ ಬಾರಿಯ ರಾಖಿ ಹಬ್ಬವೇ ಇದಕ್ಕೆ ಸಾಕ್ಷಿ.
ಪ್ರತಿ ರಾಖಿ ಹಬ್ಬಕ್ಕೂ ಚೀನಾದಿಂದ ರಾಖಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ಒಂದೇ ಒಂದು ರಾಖಿಯನ್ನೂ ಆಮದು ಮಾಡಿಕೊಂಡಿಲ್ಲ. ಇದರಿಂದಾಗಿ ಚೀನಾಗೆ 4,000 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಪ್ರತಿ ರಾಖಿ ಹಬ್ಬದ ವೇಳೆ 6,000 ಕೋಟಿ ರೂಪಾಯಿ ಮೌಲ್ಯದ 50 ಕೋಟಿ ರಾಖಿಗಳು ಮಾರಾಟವಾಗುತ್ತಿತ್ತು. ಈ ಪೈಕಿ 4000 ಕೋಟಿ ಮೌಲ್ಯದ ಚೀನಾ ರಾಖಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು ಎಂದು ಕಾನ್ಫಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ತಿಳಿಸಿದೆ.
ನಾಳೆ (ಆ.3) ನಡೆಯುವ ರಾಖಿ ಹಬ್ಬಕ್ಕೆ ಮೇಡ್ ಇನ್ ಇಂಡಿಯಾ ರಾಖಿಗಳನ್ನೇ ಬಳಸಲಾಗಿದ್ದು, ಕಾನ್ಫಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ರಾಖಿ ಹಬ್ಬವನ್ನು ಹಿಂದೂಸ್ಥಾನಿ ರಾಖಿ ಎಂದು ಆಚರಣೆ ಮಾಡಬೇಕೆಂದು ಜೂ.10 ರಂದು ಕರೆನೀಡಿತ್ತು. ಇದಕ್ಕೆ ನಿರೀಕ್ಷಿತ ಬೆಂಬಲ ದೊರೆತಿದ್ದು ದೇಸೀ ರಾಖಿಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಸಿಎಐಟಿ ಸಹಕಾರದಿಂದ ದೇಶಾದ್ಯಂತ ಭಾರತೀಯ ಸರಕುಗಳನ್ನೇ ಉಪಯೋಗಿಸಿ, ಅಂಗನವಾಡಿ, ಮನೆಗಳಲ್ಲಿರುವ ಮಹಿಳೆಯರು 1 ಕೋಟಿ ರಾಖಿಗಳನ್ನು ತಯಾರಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಲಿಂಗಾಯಿತ ಸಂಪ್ರದಾಯದಂತೆ ಚಂದ್ರಶೇಖರ್ ಗುರೂಜಿ ಅಂತ್ಯಕ್ರಿಯೆ

newsics.com ಹುಬ್ಬಳ್ಳಿ:  ದುಷ್ಕರ್ಮಿಗಳ ದಾಳಿಯಿಂದ ಮೃತಪಟ್ಟಿರುವ ಸರಳ ವಾಸ್ತು ಖ್ಯಾತಿಯ ಚಂದ್ರ ಶೇಖರ್ ಗುರೂಜಿ ಅಂತ್ಯಕ್ರಿಯೆಗೆ ಸಿದ್ದತೆ ಮಾಡಲಾಗಿದೆ. ಲಿಂಗಾಯಿತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ. ಇಬ್ಬರು ಸ್ವಾಮೀಜಿಗಳು...

ರಷ್ಯಾ ಕ್ಷಿಪಣಿ ದಾಳಿಗೆ ಬ್ರೆಜಿಲ್ ಮಾಡೆಲ್ ಸಾವು

newsics.com ಮಾಸ್ಕೋ: ಉಕ್ರೇನ್  ವಿರುದ್ಧ ರಷ್ಯಾ ನಡೆಸುತ್ತಿರುವ ಹೋರಾಟದಲ್ಲಿ ಬ್ರೆಜಿಲ್ ನ ರೂಪದರ್ಶಿಯೊಬ್ಬರು ಮೃತಪಟ್ಟಿದ್ದಾರೆ. ಸಾವನ್ನಪ್ಪಿರುವ ರೂಪದರ್ಶಿಯನ್ನು  ಬ್ರೆಜಿಲ್ ನ  ಥಾಲಿತಾ ಡೂ ವಲ್ಲೆ ಎಂದು ಗುರುತಿಸಲಾಗಿದೆ. ಥಾಲಿತಾ  ಉಕ್ರೇನ್ ಪರವಾಗಿ ಹೋರಾಟ ಮಾಡುತ್ತಿದ್ದರು. ಬಂದೂಕು ಬಳಕೆಯಲ್ಲಿ...

ಚಾಕಲೇಟ್ ಕವರ್ ನಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್: ನಾಲ್ವರ ಸೆರೆ

newsics.com ಬೆಂಗಳೂರು:  ವಿದ್ಯಾರ್ಥಿಗಳಿಗೆ ಚಾಕಲೇಟ್ ಕವರ್ ನಲ್ಲಿ ಅಡಗಿಸಿ ಡ್ರಗ್ಸ್ ಪೂರೈಸುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರಿನ  ಆವಲ ಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು  ಮೊಹಮ್ಮದ್ ಅಸ್ಲಾಂ,  ಮೊಹಮ್ಮದ್ ನದೀಂ , ಸಚ್ಚಿಂದ್ರನ್ ಮತ್ತು...
- Advertisement -
error: Content is protected !!