Wednesday, July 6, 2022

ತ್ಯಾಗ, ಬಲಿದಾನದಿಂದಾಗಿ ರಾಮ ಮಂದಿರ ಕನಸು ಸಾಕಾರಗೊಳ್ಳುತ್ತಿದೆ: ಮೋದಿ ಅಭಿಮತ

Follow Us

ಅಯೋಧ್ಯೆ:  ರಾಮ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಭಕ್ತರ ಸಭೆ  ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಮ ಜನ್ಮ ಭೂಮಿ ಆಂದೋಲನ ಬೆಳೆದು ಬಂದ ಹಾದಿಯನ್ನು ಸ್ಮರಿಸಿದರು. ಆಂದೋಲನದಲ್ಲಿ ಸಂಘರ್ಷ ಮತ್ತು ಸಂಕಲ್ಪಗಳು ಇದ್ದವು. ಹಲವು ಮಂದಿ ತಮ್ಮ ಪ್ರಾಣ ಅರ್ಪಿಸಿದರು. ಅವರ ಬಲಿದಾನವನ್ನು ಎಂದಿಗೂ ಜನರು ಮರೆಯುವುದಿಲ್ಲ ಎಂದು ಪ್ರಧಾನಿ ಹೇಳಿದರು.

ಶ್ರೀರಾಮನ ಆದರ್ಶ ಗುಣಗಳು ನಮ್ಮಗೆ ಸದಾ ದಾರಿ ದೀಪವಾಗಿವೆ. ಭವ್ಯ ರಾಮ ಮಂದಿರ ದೇಶದ ಕೋಟ್ಯಂತರ ಜನರ ಸಂಕಲ್ಪದ ಪ್ರತೀಕವಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

ಅಯೋಧ್ಯೆ ಯಲ್ಲಿ ರಾಮ ಮಂದಿರ ನಿರ್ಮಾಣವಾದ ಬಳಿಕ ವಿಶ್ವದ ಮೂಲೆ ಮೂಲೆಗಳಲ್ಲಿನ ಜನರು ಇಲ್ಲಿಗೆ ಭೇಟಿ ನೀಡಲಿದ್ದಾರೆ. ಇದರಿಂದ ಇಲ್ಲಿ ಆರ್ಥಿಕ ಚಟುವಟಿಕೆ ಉತ್ತೇಜನಗೊಳ್ಳಲಿದೆ ಎಂದು  ಪ್ರಧಾನಿ ನುಡಿದರು.

ಭಾರತದ ಮೂಲೆ ಮೂಲೆಗಳಲ್ಲಿರುವ ಜನರು ಇಂದಿನ ಈ ಭವ್ಯ ಕಾರ್ಯಕ್ರಮ ವನ್ನು ವೀಕ್ಷಿಸಿದ್ದಾರೆ. ಕೊರೋನಾದ ಹಿನ್ನೆಲೆಯಲ್ಲಿ ಹಲವು ನಿರ್ಬಂಧಗಳ ಅಡಿಯಲ್ಲಿ ನಡೆಸಲಾಗಿದೆ.  ಮಂದಿರ ರಾಷ್ಟ್ರೀಯ ಐಕ್ಯತೆಯ ಪ್ರತೀಕವಾಗಿ ಹೊರಹೊಮ್ಮಲಿದೆ. ಎಂದು ಪ್ರಧಾನಿ ಹೇಳಿದರು.

ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರಿಗೆ  ಕರ್ನಾಟಕ ನೀಡಿದ ಕೋಂದಡರಾಮನ ಪತ್ರಿಮೆಯನ್ನು  ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್   ನೀಡಿ ಗೌರವಿಸಿದರು.

 

ಮತ್ತಷ್ಟು ಸುದ್ದಿಗಳು

vertical

Latest News

ಮೋದಿ ಸಚಿವ ಸಂಪುಟದಲ್ಲಿದ್ದ ಮುಖ್ತಾರ್ ಅಬ್ಬಾಸ್ ನಖ್ವಿ, ಆರ್​​ಸಿಪಿ ಸಿಂಗ್ ರಾಜೀನಾಮೆ

newsics.com ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಮುಖ್ತಾರ್​ ಅಬ್ಬಾಸ್ ನಖ್ವಿ ಹಾಗೂ ಆರ್​​ಸಿಪಿ ಸಿಂಗ್ ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ...

ಬೆಂಗಳೂರಿನಲ್ಲಿ 1,053 ಸೇರಿ ರಾಜ್ಯದಲ್ಲಿ 1,127 ಮಂದಿಗೆ ಕೊರೋನಾ ಸೋಂಕು

newsics.com ಬೆಂಗಳೂರು; ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1,127 ಮಂದಿಗೆ ಕೊರೋನಾ ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 39,75,000ಕ್ಕೆ ಏರಿಕೆಯಾಗಿದೆ. ಇಂದು ಯಾವುದೇ ಸಾವು ಸಂಭವಿಸಿಲ್ಲ, ಹೀಗಾಗಿ ಸಂಖ್ಯೆ 40080 ಇದೆ. ಬೆಂಗಳೂರು...

ವೀರೇಂದ್ರ ಹೆಗ್ಗಡೆ, ಇಳಯರಾಜ ಸೇರಿ ರಾಜ್ಯಸಭೆಗೆ ನಾಲ್ವರ ನಾಮನಿರ್ದೇಶನ; ಅಭಿನಂದಿಸಿದ ಪ್ರಧಾನಿ ಮೋದಿ

newsics.com ನವದೆಹಲಿ; ರಾಜ್ಯಸಭೆಗೆ ಧರ್ಮಸ್ಥಳದ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಸಂಗೀತ ಮಾಂತ್ರಿಕ ಇಳಯರಾಜ, ಅಥ್ಲೀಟ್​ ಪಿಟಿ ಉಷಾ ಹಾಗೂ ಚಿತ್ರಕಥೆಗಾರ ವಿಜಯೇಂದ್ರ ಪ್ರಸಾದ್  ನಾಮ ನಿರ್ದೇಶನಗೊಂಡಿದ್ದಾರೆ. https://twitter.com/narendramodi/status/1544693793240322049?t=2u64d_ttEmETQgNsb5Joxg&s=19 ನಾಲ್ವರ ಫೋಟೋ ಹಂಚಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ...
- Advertisement -
error: Content is protected !!