ಬೆಂಗಳೂರು:ಡ್ರಗ್ಸ್ ವ್ಯಸನಿಗಳ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದಿರೋ ಬಾಲಿವುಡ್ ನಟಿ ಕಂಗನಾಗೆ ಸ್ಯಾಂಡಲ್‍ವುಡ್ ಪದ್ಮಾವತಿ ರಮ್ಯ ಟ್ವೀಟ್ ಮೂಲಕ ಸಲಹೆ ನೀಡಿ ಕಂಗನಾ ವಿರುದ್ಧದ ಅಖಾಡಕ್ಕೆ ಎಂಟ್ರಿಯಾಗಿದ್ದಾರೆ.
ರಮ್ಯ ಸರಣಿ ಟ್ವೀಟ್‍ಗಳ ಮೂಲಕ ಕಂಗನಾ ರನಾವುತ್‍ಗೆ ಸಲಹೆ ನೀಡಿದ್ದು, ನೀವು ಸ್ವತಃ ಮಾದಕ ವ್ಯಸನಿಯಾಗಿದ್ದೀರಿ ಎನ್ನುವ ಮೂಲಕ ಸತ್ಯವನ್ನು ಒಪ್ಪಿಕೊಳ್ಳುವ ಧೈರ್ಯ ತೋರಿದ್ದೀರಿ. ಇದಕ್ಕೆ ನೀವು ಅಭಿನಂದನಾರ್ಹರು. ಆದರೆ ನೀವು ಡ್ರಗ್ಸ್ ವ್ಯಸನಿಗಳು ಏನಾದ್ರೂ ಸಹಾಯ ಮಾಡಬೇಕೆಂದು ನಿಜವಾಗಿಯೂ ಬಯಸುತ್ತಿದ್ದರೇ ಅವರಿಗೆ ಧೈರ್ಯ ತುಂಬಿ ಅವರನ್ನು ಈ ಚಟದಿಂದ ಹೊರತರುವ ಪ್ರಯತ್ನ ಮಾಡಿ. ಅದನ್ನು ಬಿಟ್ಟು ಪಟ್ಟಿ ಬಿಡುಗಡೆ ಮಾಡುತ್ತೇನೆ ಎನ್ನುವ ಮೂಲಕ ಬ್ಲ್ಯಾಕ್ ಮೇಲ್ ಮಾಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ.
ಅಷ್ಟೇ ಅಲ್ಲ ತಮ್ಮ ಟ್ವೀಟ್‍ನಲ್ಲಿ ದೀಪಿಕಾ ಪಡುಕೋಣೆ ಹೆಸರು ಉಲ್ಲೇಖಿಸಿರುವ ರಮ್ಯಸ್ಪಂದನಾ, ದೀಪಿಕಾ ಪಡುಕೋಣೆ ತಾವು ಅನುಭವಿಸಿದ ಮಾನಸಿಕ ಖಿನ್ನತೆಯನ್ನು ಮುಕ್ತವಾಗಿ ಹೇಳಿಕೊಂಡಿದ್ದು ಮಾತ್ರವಲ್ಲ. ಆ ಕುರಿತು ಜನರಲ್ಲಿ ತಿಳುವಳಿಕೆ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಲಕ್ಷಾಂತರ ಮಾನಸಿಕ ಖಿನ್ನತೆಯ ವ್ಯಕ್ತಿಗಳಿಗೆ ಇದರಿಂದ ಹೊರಬರಲು ಸಾಧ್ಯವಾಗಿದೆ.
ನೀವು ನಿಮ್ಮ ಸಹೋದ್ಯೋಗಿ ದೀಪಿಕಾ ಪಡುಕೋಣೆಯನ್ನು ಮಾದರಿಯಾಗಿ ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಅಲ್ಲದೇ ಡ್ರಗ್ಸ್ ಸೇವನೆ ಹವ್ಯಾಸಕ್ಕೆ ಬಿದ್ದವರನ್ನು ಅದರಿಂದ ಹೊರತರಲು ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಸಲಹೆ ನೀಡಿದ್ದಾರೆ. ರಮ್ಯ ಈ ಸಲಹೆಗೆ ಕಂಗನಾ ರನಾವುತ್ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕಿದೆ.
ದೀಪಿಕಾ ನೋಡಿ ಕಲಿಯಿರಿ… ಕಂಗನಾಗೆ ರಮ್ಯ ಟ್ವೀಟ್ ಪಾಠ
Follow Us