Wednesday, December 7, 2022

ಅತ್ಯಾಚಾರ, ಕೊಲೆ; ಇಬ್ಬರಿಗೆ ಗಲ್ಲು ಶಿಕ್ಷೆ

Follow Us

ಚಿಕ್ಕಮಗಳೂರು: ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ಶೃಂಗೇರಿ ತಾಲೂಕಿನ ಅಕ್ಕಸಾಲುಕೊಡಿಗೆಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದಿದ್ದ ಇಬ್ಬರು ಆರೋಪಿಗಗಳಿಗೆ ಜಿಲ್ಲಾ ಸತ್ರ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಗಲ್ಲು ಶಿಕ್ಷೆ ಜತೆಗೆ ತಲಾ 25 ಸಾವಿರ ರೂ. ದಂಡ ವಿಧಿಸಲಾಗಿದೆ.
ಸಂತೋಷ್ ಹಾಗೂ ಪ್ರದೀಪ್ ಗಲ್ಲು ಶಿಕ್ಷೆಗೆ ಒಳಗಾದವರು. ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಈ ಮಹತ್ವದ ತೀರ್ಪು ನೀಡಿದ್ದಾರೆ.
ಜಿಲ್ಲೆಯ ಶೃಂಗೇರಿಯಲ್ಲಿ 2016 ರ ಫೆಬ್ರವರಿ 16 ರಂದು ಈ ಕೃತ್ಯ ನಡೆದಿತ್ತು. ಆಕೆ ಪರೀಕ್ಷೆ ಬರೆದು ಮನೆಗೆ ಕಾಲು ದಾರಿಯಲ್ಲಿ ವಾಪಸು ಆಗುತ್ತಿದ್ದ ಸಮಯದಲ್ಲಿ ಕಾದು ಪ್ರದೀಪ್ ಮತ್ತು ಸಂತೋಷ್ ಆಕೆಯನ್ನು ಕಾಡಿನೊಳಗೆ ಹೊತ್ತೊಯ್ದು ಅತ್ಯಾಚಾರವೆಸಗಿ ನಂತರ ಕೊಲೆಗೈದಿದ್ದರು. ಬಳಿಕ ಆಕೆಯನ್ನು ಕೊಲೆಗೈದು ಹಾಳು ಬಾವಿಗೆ ಎಸೆದಿದ್ದರು.

ಮತ್ತಷ್ಟು ಸುದ್ದಿಗಳು

vertical

Latest News

ದೆಹಲಿ ಮಹಾ ನಗರ ಪಾಲಿಕೆ ಚುನಾವಣೆ: ಆಮ್ ಆದ್ಮಿ ಪಕ್ಷಕ್ಕೆ ಸ್ಪಷ್ಟ ಬಹುಮತ

newsics.com ನವದೆಹಲಿ:  ದೆಹಲಿ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿದೆ. ಸ್ಪಷ್ಟ ಬಹುಮತ ಪಡೆದಿದೆ. 250  ವಾರ್ಡ್...

ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಸಿಪಿಐ, ಪತ್ನಿ ಸಾವು

newsics.com ಕಲಬುರ್ಗಿ: ರಾಜ್ಯದ ಕಲಬುರ್ಗಿ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕಲಬುರ್ಗಿ ಜಿಲ್ಲೆಯ ನೆಲೋಗಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಿಪಿಐ  ರವಿ ಉಕ್ಕುಂದ ಮತ್ತು ಅವರ ಪತ್ನಿ  ಮಧು ಮತಿ ಮೃತಪಟ್ಟಿದ್ದಾರೆ ಎಂದು...

ದ್ವಿತೀಯ ಏಕದಿನ ಪಂದ್ಯ: ರೋಹಿತ್ ಶರ್ಮಾ ಬೆರಳಿಗೆ ಗಾಯ

newsics.com ಢಾಕಾ: ಬಾಂಗ್ಲಾದೇಶ ಎದುರಿನ ದ್ವಿತೀಯ ಏಕದಿನ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ  ನಾಯಕ ರೋಹಿತ್ ಶರ್ಮಾ ಅವರ ಬೆರಳಿಗೆ ಗಾಯವಾಗಿದೆ. ರೋಹಿತ್ ಶರ್ಮಾ ಅವರ ತೋರು ಬೆರಳಿಗೆ ಗಾಯವಾಗಿದ್ದು ಸ್ಕ್ಯಾನಿಂಗ್ ಮಾಡಲಾಗಿದೆ...
- Advertisement -
error: Content is protected !!